ಬೆಳಗಾವಿ ಜಿಲ್ಲೆಗೆ ಇಲಾಖೆಯ ವತಿಯಿಂದ ನೀಡಲಾಗಿರುವ ಪತ್ರಕರ್ತರ ನೂತನ ವಾಹನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಹಸಿರು ನಿಶಾನೆ ತೋರಿಸಿದರು. ಇದಾದ ಬಳಿಕ ಪತ್ರಕರ್ತರ ವಾಹನದಲ್ಲಿಯೇ ತೆರಳಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಸ್ಥಳವನ್ನು ಪರಿಶೀಲಿಸಿದರು.
ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಮಾಧ್ಯಮ ಪ್ರತಿನಿಧಿಗಳು ಕೂಡ ಹೊಸ ವಾಹನದಲ್ಲಿ ಪ್ರಯಾಣಿಸಿದರು.
ವಿಶೇಷ ಆಸಕ್ತಿ ವಹಿಸಿ ಬೆಳಗಾವಿ ಜಿಲ್ಲೆಗೆ ಹೊಸ ವಾಹನ ಒದಗಿಸಿಕೊಟ್ಟಿರುವ ಇಲಾಖೆಯ ಮಾನ್ಯ ಕಾರ್ಯದರ್ಶಿಗಳಾದ ಎನ್.ಜಯರಾಮ್, ಮಾನ್ಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಹಾಗೂ ಮಾನ್ಯ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರಿಗೆ ಧನ್ಯವಾದಗಳು.