Ad imageAd image

ಜನ ಸೇವೆ ನಿರಂತರ: ಮಂಗಳವಾರವೂ ಮುಂದುವರಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಳ್ಳಿ ಭೇಟಿ

ratnakar
ಜನ ಸೇವೆ ನಿರಂತರ: ಮಂಗಳವಾರವೂ ಮುಂದುವರಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಳ್ಳಿ ಭೇಟಿ
WhatsApp Group Join Now
Telegram Group Join Now

ಬೆಳಗಾವಿ : ಸ್ವತಃ ಜನರ ಬಳಿಗೆ ಹೋಗಿ ಸಮಸ್ಯೆ ಆಲಿಸುವ ವಿನೂತನ ಕಾರ್ಯಕ್ರಮವನ್ನು ಮುಂದುವರಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಮಂಗಳವಾರ ಹಂಗರಗಾ, ಮಂಡೋಳಿ ಮೊದಲಾದ ಕಡೆ ಜನತಾ ದರ್ಶನ ನಡೆಸಿದರು.

ಹಂಗರಗಾ ಗ್ರಾಮದ ಶ್ರೀ ಬ್ರಹ್ಮಲಿಂಗ ದೇವಸ್ಥಾನದ ಆವರಣದಲ್ಲಿ ನವರಾತ್ರಿಯ ಪೂರ್ವಭಾವಿಯಾಗಿ ವಿಠ್ಠಲ ರುಕ್ಮೀಣಿ ಪಾರಾಯಣ ನಡೆಯುವ ಮುನ್ನ ನಡೆದ ‘ಮುಹೂರ್ತ ಮೇಡ’ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ನಂತರ ಸುಮಾರು ಒಂದು ಗಂಟೆಗಳಿಗೂ ಹೆಚ್ಚು ಸಮಯ ಜನಸ್ಪಂದನ ಕಾರ್ಯಕ್ರಮ ನಡೆಸಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ನೂರಾರು ಜನರು ತಮ್ಮ ವಿವಿಧ ಸಮಸ್ಯೆಗಳನ್ನು ಸಚಿವರ ಮುಂದೆ ಹೇಳಿಕೊಂಡು ಪರಿಹಾರ ಕಂಡುಕೊಂಡರು. ಬಹುತೇಕ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು.

ಕಾರ್ಯಕ್ರಮದಲ್ಲಿ ಯುವರಾಜ ಕದಂ, ಬಾಳು ಪಾಟೀಲ, ವಿಷ್ಣು ಸೋನಳಕರ್, ಜಾನುಭಾ ಬೆಳಗಾಂವ್ಕರ್, ನಿಲೇಶ್ ಬೆಳಗಾಂವ್ಕರ್, ಪಿಂಟು ಕಂಗ್ರಾಳಕರ್, ರಾಮಚಂದ್ರ ಹಲಕರ್ಣಿಕರ್, ಮಲ್ಲಪ್ಪ ಕಾಂಬಳೆ, ಉಮೇಶ್ ಸೋನಳಕರ್, ಶಿವಾಜಿ ಪಾಟೀಲ, ಮೀನಾ ಗೋಡ್ಸೆ, ನಿವೃತ್ತಿ ತಳವಾರ, ಯಲ್ಲಪ್ಪ ಪಾಟೀಲ, ವಿಶಾಲ ಚೌಹಾನ್, ಗೋಪಾಲ ಗೋಡ್ಸೆ, ಲಕ್ಷ್ಮೀ ಪಾಟೀಲ, ಕವಿತಾ ನಾಯಿಕ, ಮಲಪ್ರಭಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಮಂಡೊಳಿ ಗ್ರಾಮಕ್ಕೆ ಭೇಟಿ
ನಂತರ ಮಂಡೋಳಿ ಗ್ರಾಮಕ್ಕೆ ತೆರಳಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ನಿರ್ಮಾಣ ಹಂತದಲ್ಲಿರುವ ಶ್ರೀ ಬ್ರಹ್ಮಲಿಂಗ, ಹನುಮಾನ ಹಾಗೂ ವಿಠ್ಠಲ ರುಕ್ಷ್ಮೀಣಿ ದೇವಸ್ಥಾನ ಕಟ್ಟಡದ ಪ್ರಗತಿ ಪರಿಶೀಲನೆ ನಡೆಸಿದರು.


2 ಕೋಟಿ ರೂ,ಗಳ ಅನುದಾನದಲ್ಲಿ ದೇವಸ್ಥಾನದ ಕಟ್ಟಡ ನಿರ್ಮಾಣಗೊಳ್ಳಲಿದ್ದು, ಮೊದಲನೇ ಕಂತಿನಲ್ಲಿ 65 ಲಕ್ಷ ಹಣ ಬಿಡುಗಡೆಗೊಳಿಸಲಾಗಿದೆ. ಎರಡನೇ ಕಂತಿನಲ್ಲಿ 50 ಲಕ್ಷ ಹಣ ಬಿಡುಗಡೆಗೊಳಿಸಲು ತಯಾರಿ ನಡೆಸಲಾಗಿದೆ. ಒಂದೇ ಕಟ್ಟಡದಲ್ಲಿ ಮೂರು ದೇವಸ್ಥಾನಗಳು ಇಲ್ಲಿ ತಲೆ ಎತ್ತಲಿದ್ದು, ಅತ್ಯಂತ ಸುಂದರವಾಗಿ ದೇವಾಲಯ ನಿರ್ಮಾಣವಾಗಲಿದೆ. ಕಟ್ಟಡ ನಿರ್ಮಾಣದಲ್ಲಿ ಯಾವುದೇ ಲೋಪದೋಷಗಳಾಗದಂತೆ ನಿಗಾವಹಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಇದಾದ ನಂತರ ಮಂಡೊಳಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಬಹಳ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಪಡೆದರು.
ಸಚಿವರು ಗ್ರಾಮಕ್ಕೇ ಆಗಮಿಸಿ ತಮ್ಮ ಸಮಸ್ಯೆಗಳನ್ನು ಆಲಿಸುತ್ತಿರುವುದಕ್ಕೆ ಗ್ರಾಮಸ್ಥರು ಖುಷಿಪಟ್ಟರು.

WhatsApp Group Join Now
Telegram Group Join Now
Share This Article