ಬೆಳಗಾವಿ: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬುಧವಾರ ಸಹ ತಮ್ಮ ಗೃಹ ಕಚೇರಿಯಲ್ಲಿ ಜನತಾ ದರ್ಶನ ನಡೆಸಿದರು.
ಕಿಕ್ಕಿರಿದು ಸೇರಿದ್ದ ಜನರ ಸಮಸ್ಯೆ- ಬೇಡಿಕೆಗಳನ್ನು ಆಲಿಸಿದ ಲಕ್ಷ್ಮೀ ಹೆಬ್ಬಾಳಕರ್ ಬಹಳಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದರು.
ಇನ್ನುಳಿದವುಗಳಿಗೆ ಸೂಕ್ತವಾಗಿ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೆಲವರು ವಯಕ್ತಿಕ ಸಮಸ್ಯೆ, ಬೇಡಿಕೆಗಳನ್ನು ಹೊತ್ತು ಬಂದರೆ, ಹಲವರು ಸಾರ್ವಜನಿಕ ಸಮಸ್ಯೆ, ಸಂಘ ಸಂಸ್ಥೆಗಳ ಬೇಡಿಕೆ, ಗ್ರಾಮದ ಬೇಡಿಕೆಗಳನ್ನು ಹೊತ್ತು ತಂದಿದ್ದರು.
ಜನರ ಅಹವಾಲುಗಳನ್ನು ಶಾಂತಚಿತ್ತರಾಗಿ ಆಲಿಸಿದ ಸಚಿವರು, ಗುರುವಾರ ಬೆಂಗಳೂರಿನಲ್ಲಿ ನಡೆಯಲಿರುವ ಸಚಿವಸಂಪುಟ ಸಭೆಯ ಹಿನ್ನೆಲೆಯಲ್ಲಿ ಸಂಜೆ ಬೆಂಗಳೂರಿಗೆ ತೆರಳಿದರು.