ಬೆಳಗಾವಿ ನಗರದ ಕಣಬರ್ಗಿ ರಸ್ತೆಯ ಸಂಕಲ್ಪ ಗಾರ್ಡನ್ ನಲ್ಲಿ ರಾಮತೀರ್ಥ ನಗರ ರಹವಾಸಿಗಳ ಸಂಘ (ರಿ) ಹಾಗೂ ಇನ್ನುಳಿದ ಸಂಘಟನೆಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಶುಕ್ರವಾರ ಸಂಜೆ ಸನ್ಮಾನಿಸಿದವು.
ನಗರಸೇವಕ ಹನಮಂತ ಕೊಂಗಾಲಿ, ಮಾಜಿ ಮಹಾಪೌರ ಎನ್ ಬಿ ನಿರ್ವಾಣಿ, ಕಾರ್ಪೋರೇಟರ್ ಹನುಮಂತ ದುಗ್ಗಾನಿ, ಮಾಜಿ ಕಾರ್ಪೋರೇಟರ್ ಪುಷ್ಪ ಪರ್ವತರಾವ್, ವಿ ಎ ಗಣಾಚಾರಿ, ವೈ ಪಿ ಗಡಿನಾಯ್ಕರ್, ಎಂ ಎ ಕೂರಿಶೆಟ್ಟಿ, ಎಮ್ ಟಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.