ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಶನಿವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ದೇಸೂರ್ ಗ್ರಾಮದಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ಪ್ರತಿಷ್ಠಾಪಿಸಿರುವ ವಿಘ್ನ ವಿನಾಶಕ ಗಣಪತಿಯ ದರ್ಶನ ಹಾಗೂ ಆಶೀರ್ವಾದ ಪಡೆದರು.
ಇದೇ ಸಂದರ್ಭದಲ್ಲಿ ಅನ್ನಪ್ರಸಾದದ ಸೇವೆಯಲ್ಲಿ ಭಾಗವಹಿಸಿ, ಭಕ್ತಾದಿಗಳಿಗೆ ಪ್ರಸಾದ ಉಣಬಡಿಸಿದರು.
ಕಾರ್ಯಕ್ರಮದಲ್ಲಿ ಯುವರಾಜ ಕದಂ, ಭರಮನಿ ಪಾಟೀಲ, ಸಾತೇರಿ ಕಳಸೇಕರ್, ವೆಂಕಟ ಪಾಟೀಲ, ಅನಿಲ ಪಾಟೀಲ, ಭರತ ಪಾಟೀಲ, ಸಿದ್ದಪ್ಪ ಛತ್ರೆ, ಸಂತೋಷ ಮರಗಾಳೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮಿ ಪಾಟೀಲ, ಕಾಶವ್ವ ಕಾಂಬಳೆ, ನಿಖಿತಾ ಸುತಾರ, ಸ್ನೇಹಾ ಕುಂಬಾರ, ನಿಲೇಶ ಪಾಟೀಲ, ನಾರಾಯಣ ಕಳಸೇಕರ, ಯಲ್ಲಪ್ಪ ಪಾಟೀಲ, ಅಭಿ ಪಾಟೀಲ, ಸಾತೇರಿ ಪಾಟೀಲ, ಕಲ್ಪನಾ ಪಾಟೀಲ, ತುಕಾರಾಂ ಪಾಟೀಲ, ಜ್ಯೋತಿಬಾ ಪಾಟೀಲ, ಮನೋಜ ಸಾವಂತ ಮುಂತಾದವರು ಉಪಸ್ಥಿತರಿದ್ದರು.