ಬೆಳಗಾವಿ: ಜುಲೈ 28 ರಿಂದ ಚೀನಾ ದೇಶದಲ್ಲಿ ನಡೆಯಲಿರುವ ವರ್ಲ್ಡ್ ಯುನಿವರ್ಸಿಟಿ ಗೇಮ್ಸ್ ಗಳಗೆ ಆಯ್ಕೆಯಾದ ಮಂಡೋಳಿ ಗ್ರಾಮದ ಯುವಕನನ್ನು ಅಭಿನಂದಿಸಿದ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಕ್ರೀಡಾಪಟುವಿಗೆ ಶುಭ ಕೋರಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಂಡೋಳಿ ಗ್ರಾಮದ ಶ್ರೀನಾಥ ಗಣಪತ ದಳವಿ ವರ್ಲ್ಡ್ ಯುನಿವರ್ಸಿಟಿ ಗೇಮ್ಸ್ ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಭಾನುವಾರ ಬೆಳಗಾವಿಯಲ್ಲಿ ಅವರು ಸಚಿವರನ್ನು ಭೇಟಿಯಾಗಿದ್ದರು. ಅವರಿಂದ ವಿವರ ಮಾಹಿತಿ ಪಡೆದ ಸಚಿವರು, ಶ್ರೀನಾಥ ದಳವಿ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು. ಶ್ರೀನಾಥ ಜಿಲ್ಲೆ ಮತ್ತು ರಾಜ್ಯದ ಹೆಮ್ಮೆ ಎಂದು ಹೆಬ್ಬಾಳಕರ್ ಬಣ್ಣಿಸಿದರು.