spot_img
spot_img
spot_img
spot_img
spot_img
spot_img
spot_img
spot_img
spot_img
26.1 C
Belagavi
Friday, September 22, 2023
spot_img

ಪಶು ಸಖಿಯರು ನಿಸ್ವಾರ್ಥ ಭಾವನೆಯಿಂದ ಕೆಲಸ ಮಾಡಲಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

ಬೆಳಗಾವಿ: ‘ಪಶು ಸಖಿ’ ಎನ್ನುವುದು ರಾಜ್ಯ ಸರಕಾರದ ವಿನೂತನ ಮತ್ತು ಅತ್ಯಂತ ಉಪಯುಕ್ತ ಯೋಜನೆಗಳಲ್ಲಿ ಒಂದಾಗಿದ್ದು, ಪ್ರತಿ ಮನೆ ಮನೆಗೆ ತೆರಳಿ ಜಾನುವಾರುಗಳನ್ನು ಸಾಕಿದವರಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸುವ, ಅಗತ್ಯವಾದ ಮಾಹಿತಿಗಳನ್ನು ಒದಗಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರು ಮತ್ತು ವಿಶೇಷಚೇತನರ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಅವರು ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ನಗರದ ಪಶು ಆಸ್ಪತ್ರೆಯ ಆವರಣದಲ್ಲಿರುವ ರೈತ ಭವನದಲ್ಲಿ ಆಯೋಜಿಸಿದ್ದ ಪಶುಸಖಿಯರಿಗೆ ತರಬೇತಿ ಕಾರ್ಯಾಗಾರದಲ್ಲಿ ಪ್ರಥಮ ಚಿಕಿತ್ಸಾ ಕಿಟ್ ವಿತರಿಸಿ ಮಾತನಾಡಿದರು.

“ಸರಕಾರದ ಯೋಜನೆಗಳು ಪಶು ಸಾಕಾಣಿಕೆ ಮಾಡುವವರಿಗೆ ಸರಿಯಾಗಿ ಮತ್ತು ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ ಎನ್ನುವ ಕಾರಣಕ್ಕೆ ಪಶು ಸಖಿಯರು ಎನ್ನುವ ಹೊಸ ಪರಿಕಲ್ಪನೆ ರೂಪಿಸಲಾಗಿದೆ. ಪಶು ಸಂಗೋಪನೆ ಗ್ರಾಮೀಣ ಜನರ ಜೀವನಾಡಿ. ಕೃಷಿಯಷ್ಟೇ ಪಶು ಸಂಗೋಪನೆಯೂ ಮಹತ್ವವಾದ ಉದ್ಯೋಗ.

ಬಹಳಷ್ಟು ಕುಟುಂಬಗಳು ಪಶುಸಂಗೋಪನೆಯ ಮೇಲೆಯೇ ಅವಲಂಭಿತವಾಗಿವೆ.ಅಂತಹ ಸಂದರ್ಭದಲ್ಲಿ ಆಕಸ್ಮಿಕವಾಗಿ ಜಾನುವಾರುಗಳು ಮೃತಪಟ್ಟರೆ ಅವರ ಬದುಕೇ ಅತಂತ್ರವಾಗುತ್ತದೆಹಾಗಾಗಿ ಜಾನುವಾರುಗಳಿಗೆ ರೋಗ ಬಾರದಂತೆ ಮುಂಜಾಗ್ರತೆ ತಿಳಿವಳಿಕೆ ನೀಡುವುದು, ರೋಗ ಬಂದರೆ ತಕ್ಷಣ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು ಪಶು ಸಖಿಯರ ಜವಾಬ್ದಾರಿ” ಎಂದರು.

“ಪಶು ಸಖಿಯರಿಗೆ ಸರಕಾರ ಕೊಡುವುದು ಅತ್ಯಲ್ಪ ಗೌರವಧನವಾದರೂ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಂತೆ ನಿಮ್ಮ ಸೇವೆ ಕೂಡ ದೇವರ ಕೆಲಸ ಎಂದೇ ಭಾವಿಸುತ್ತೇನೆ. ಹೀಗಾಗಿ ನಿಸ್ವಾರ್ಥವಾಗಿ ಸೇವೆ ಮಾಡಿ” ಎಂದು ಸಲಹೆ ನೀಡಿದರು.

“ರೈತರಿಗೆ ಹೊಸ ಹೊಸ ತಂತ್ರಜ್ಞಾನಗಳನ್ನು ತಲುಪಿಸುವ ಕೆಲಸ ಮಾಡಬೇಕು, ಸುಧಾರಿತ ಮೇವಿನ ಬೆಳೆಗಳ ಮತ್ತು ಜಾನುವಾರು ಆಹಾರ ಪದ್ಧತಿಗಳ ಕುರಿತು ಮಾಹಿತಿಯನ್ನು ನೀಡಬೇಕು, ಜಾನುವಾರುಗಳಲ್ಲಿ ರೋಗ ಕಂಡುಬಂದಾಗ ತಕ್ಷಣ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಜಾನುವಾರುಗಳ ಕೃತಕ ಗರ್ಭಧಾರಣೆ ಮತ್ತು ತಳಿ ಅಭಿವೃದ್ಧಿ, ಜಂತುನಾಶಕ ವಿತರಣೆ, ಲಸಿಕಾ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ ರೈತರು ಮತ್ತು ಇಲಾಖೆಯ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಬೇಕು” ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

“ಕಳೆದ ವರ್ಷ ಜಾನುವಾರುಗಳಿಗೆ ದೊಡ್ಡ ಪ್ರಮಾಣದಲ್ಲಿ ರೋಗ ಬಂದು ಬಹಳಷ್ಟು ಜಾನುವಾರುಗಳು ಮೃತಪಟ್ಟಾಗ ನಾನೇ ಅಂದಿನ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿ ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಹಣ ಕೊಡಿಸುವ ವ್ಯವಸ್ಥೆ ಮಾಡಿದ್ದೆ. ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಇದ್ದ ಯೋಜನೆ ನಂತರದಲ್ಲಿ ನಿಂತು ಹೋಗಿತ್ತು. ಮತ್ತೆ ನಾನೇ ಒತ್ತಾಯಿಸಿ ಜಾರಿಯಾಗುವಂತೆ ಮಾಡಿದ್ದೆ. ಅವುಗಳಲ್ಲಿ ಇನ್ನೂ ಕೆಲವು ಪ್ರಕರಣಗಳಿಗೆ ಹಣ ಕೊಡುವುದು ಜಿಲ್ಲೆಯಲ್ಲಿ ಬಾಕಿ ಇದೆ ಎಂದು ಕೇಳಿದ್ದೇನೆ. ಆದಷ್ಟು ಬೇಗ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಸರಕಾರದಿಂದ ಏನಾದರೂ ಹಣ ಬಿಡುಗಡೆಯಾಗಬೇಕಾದದ್ದು ಇದ್ದರೆ ಮಾಹಿತಿ ಕೊಡಿ, ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು” ಎಂದು ಅವರು ಭರವಸೆ ನೀಡಿದರು.

“ನಮ್ಮ ರೈತರನ್ನು, ಪಶುಸಂಗೋಪನೆ ಮಾಡುವವರನ್ನು ಯಾವುದೇ ಕಾರಣಕ್ಕೆ ಸತಾಯಿಸಬೇಡಿ. ಅವರಿಗೆ ಸರಕಾರದ ಸೌಲಭ್ಯಗಳನ್ನು ವಿಳಂಬವಿಲ್ಲದೆ ತಲುಪಿಸುವ ಜವಾಬ್ದಾರಿಯನ್ನು ಇಲಾಖೆಯವರು ನಿರ್ವಹಿಸಬೇಕು. ಈ ಕೆಲಸದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ. ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿ” ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ರಾಜೀವ್ ಕೊಲೇರ್, ಮುಖ್ಯ ಪಶು ವೈದ್ಯಾಧಿಕಾರಿ ಡಾ. ಆನಂದ ಪಾಟೀಲ, ಡಾ. ಎಂ ಬಿ. ಪಾಟೀಲ, ಭಾಗ್ಯಶ್ರೀ ಬಿ. ಎಚ್, ಮಹೇಶ ಮತ್ತಿತರರು ಉಪಸ್ಥಿತರಿದ್ದರು.

Related News

ಬೆಳಗಾವಿ ಜಿಲ್ಲೆಯಲ್ಲಿ 14 ಗ್ರಾ.ಪಂಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ

ಬೆಳಗಾವಿ : 2023ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಬೆಳಗಾವಿ ಜಿಲ್ಲೆಯ 14 ಗ್ರಾಮ ಪಂಚಾಯತಿಗಳು ಆಯ್ಕೆಯಾಗಿದ್ದು ಜಿಲ್ಲಾ ಪಂಚಾಯತ್ ಕಾರ್ಯಾಲಯ ಈ ಕುರಿತು ಆದೇಶ ನೀಡಿದೆ. ಖಾನಾಪುರ – ಬೇಕವಾಡ, ಕಿತ್ತೂರು –...

ಚಂದ್ರಯಾನ-3 ಮೇಲೆ ಇಸ್ರೋ ಕಣ್ಣು ಇಂದು ಎಚ್ಚೆತ್ತುಕ್ಕೊಳ್ಳುತ್ತಾ ಲ್ಯಾಂಡರ್ ಮತ್ತು ರೋವರ್

ಬೆಂಗಳೂರು: ಚಂದ್ರಯಾನ-3 ಅಭೂತಪೂರ್ವ ಯಶಸ್ಸಿನ ಬಳಿಕ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಂದು ಮತ್ತೊಂದು ಸಾಹಸಕ್ಕೆ ಮುಂದಾಗಿದ್ದು 15 ದಿನಗಳ ಹಿಂದೆ ಚಂದ್ರನಲ್ಲಿ ರಾತ್ರಿಯಾದ ಕಾರಣ ನಿದ್ರೆಗೆ ಜಾರಿಸಿದ್ದ ವಿಕ್ರಮ್ ಲ್ಯಾಂಡರ್ ಮತ್ತು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -