ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವುದು ಕಡ್ಡಾಯ. ಒಂದು ನಿಮಿಷದ ಪೀಠಿಕೆಯು ಸಮಾನತೆಯ ಬದುಕು ಕಲಿಸುತ್ತದೆ ಎಂದು ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿಕೆ ನೀಡಿದ್ದಾರೆ.
ಸಂವಿಧಾನದ ಪೀಠಿಕೆ ಮೂಲಕ ಮಕ್ಕಳಲ್ಲಿ ಸಮಾನತೆ ಮೂಡಿಸಬಹುದು. ಇದು ದೇಶದ 140 ಕೋಟಿ ಜನರಿಗೂ ಅನ್ವಯವಾಗುತ್ತಿದೆ. ಸಂವಿಧಾನದ ತಿದ್ದುಪಡಿಗೆ ಅವಕಾಶವಿದೆ, ಆದ್ರೆ ತಿರುಚಲು ಅವಕಾಶವಿಲ್ಲ ಎಂದರು.