ಭಾರತೀಯ ಜನತಾ ಪಾರ್ಟಿ ವತಿಯಿಂದ ಸಂಪೂರ್ಣ ದೇಶದಲ್ಲಿ “ನನ್ನ ಮಣ್ಣು ನನ್ನ ದೇಶ” ಅಭಿಯಾನ ಹಮ್ಮಿಕೊಂಡಿದೆ, ಈ ಕಾರ್ಯಕ್ರಮದ ಅಂಗವಾಗಿ ದೇಶದ ಎಕತೆ ಸಂಕೇತವಾಗಿ ದೇಶದ ಸಹಸ್ರಾರು ಪೂಣ್ಯ ಸ್ಥಳಗಳ ಮಣ್ಣನ್ನು ಶೆಖರಿಸಿ ದೆಹಲಿಯಲ್ಲಿನ ದೇಶದ ವೀರಯೋಧರ ಅಮೃತವಾಟಿಕಾ ವನದಲ್ಲಿ ಅದನೆಲ್ಲಾ ಸೇರಿಸುವ ಅಭಿಯಾನ “ಮೆರಿ ಮಾಟಿ ಮೆರಾ ದೇಶ” – “ನನ್ನ ಮಣ್ಣು ನನ್ನ ದೇಶ” ಅಭಿಯಾನಕ್ಕೆ ಚಾಲನೆ ನಿಡಲಾಯಿತು, ಇದರ ಒಂದು ಭಾಗ ಎಂದು ಬಿಜೆಪಿ ಗ್ರಾಮೀಣ ಮಂಡಳ ವತಿಯಿಂದ ತಾರಿಹಾಳ ಗ್ರಾಮದಲ್ಲಿರುವ ಸಿದ್ಧೇಶ್ವರ ಮಠದ ಆವರಣದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನಿಡಲಾಯಿತು.
ಕಾರ್ಯಕ್ರಮದಲ್ಲಿ 05 ಅಮೃತ ಕಲಶಗಳ ಪೂಜೆ ಮಾಡಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಪ್ರತ್ಯೇಕ ಊರುಗಳಿಗೆ ಕಳಿಸಲಾಯಿತ್ತು. ಈ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯರಾದ ಶ್ರೀ. ಈರಾಣ್ಣಾ ಕಡಾಡಿ ಇವರು ಮಾತನಾಡಿ ದೇಶದ ಪ್ರಗತಿಗಾಗಿ ನಡೆಯುವ ಹೊಸ ಹೊಸ ಕಾರ್ಯಕ್ರಮಗಳನ್ನು ಜನರಮುಂದೆ ಇಡಲು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಸಕ್ರಿಯರಾಗಿರುತ್ತಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಇವರ ನೇತೃತ್ವದಲ್ಲಿ ದೇಶವು ಅಭಿವೃದ್ಧಿಯ ದಿಶೇಯಲ್ಲಿ ಸಾಗುತ್ತಿದೆ, ಅಮೃತ ವಾಟಿಕಾವನ ನಿರ್ಮಾಣದ ಒಂದು ಭಾಗವಾಗಿ ದೇಶದ ಎಲ್ಲ ಹಳ್ಳಿಗಳಿಂದ ಮಣ್ಣನ್ನು ಶೆಖರಿಸು ಅಭಿಯಾನದಲ್ಲಿ ಜನರು ತೊಡಗಿದ್ದಾರೆ ಮತ್ತು ನಮ್ಮ ಊರಿನ ಮಣ್ಣು ದೇಶದ ವೀರ್ ಯೋಧರ್ ಅಮೃತವಾಟಿಕಾ ವನದಲ್ಲಿ ಇದೆ ಎಂದು ಹೆಮ್ಮೆಯ ವಿಷಯ. ಚುಣಾವಣೆ ಬಂದ ಮೇಲೆ ಜನರ ಮುಂದೆ ಬರುವ ಪಕ್ಷ ನಮ್ಮದಲ್ಲಾ, ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ವರ್ಷವಿಡಿ ಸಕ್ರೀಯವಾಗಿ ಬೇರೆ ಬೇರೆ ಕಾರ್ಯಕ್ರಮದ ಭಾಗವಾಗಿ ಜನರ ಮುಂದೆ ಬರುತ್ತಾರೆ ಎಂದು ಹೆಳಿದರು.
ಈ ಅಭಿಯಾನದಲ್ಲಿ ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಸ್ವಚ್ಛ ಭಾರತ ಅಭಿಯಾನ, ಆರೋಗ್ಯ ತಪಾಸಣೆ, ಬೇರೆ ಬೇರೆ ಸೇವಾ ಕಾರ್ಯಕ್ರಮದಲ್ಲಿ ಈಗೆ ನಡೆಯುವ ಅಮೃತ ವಾಟಿಕಾವನದ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.
ಬೆಳಗಾವಿ ಗ್ರಾಮೀಣ ಮಂಡಳ ಅಧ್ಯಕ್ಷರಾದ ಧನಂಜಯ ಜಾಧವ ಮಾತನಾಡಿ 2013-14 ರಲ್ಲಿ ಶ್ರೀ ಸರದಾರ ವಲ್ಲಭ ಭಾಯಿ ಪಟೇಲ ಇವರ ಭವ್ಯವಾದ ಲೊಹದ ಮುರ್ತಿಯನ್ನು ಗುಜರಾತಿನಲ್ಲಿ ಮಾಡುವ ಅಭಿಯಾನದಲ್ಲಿ ಪ್ರತಿಯೊಂದು ಹಳ್ಳಿಗಳಿಗೆ ಹೊಗಿ ರೈತರು ಉಳುಮೆ ಮಾಡುವ ಉಪಕರಣ ಗಳಲ್ಲಿನ ಲೋಹದ ತುಂಡಗಳನ್ನು ಸಂಗ್ರಹ ಮಾಡುವ ಅಭಿಯಾದಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಭಾಗವಹಿಸಿದರು.
ಈಗ ಗುಜರಾತಿನಲ್ಲಿ ಸರದಾರ ವಲ್ಲಭ ಭಾಯಿ ಪಟೇಲ ಇವರ ಮುರ್ತಿಯು ಒಂದು ಆಕರ್ಷಣೆಯ ಹಾಗು ಪರ್ಯಠಣೆಯ ಕೇಂದ್ರಬಿಂದು ಆಗಿದೆ ಹಾಗೆಯ ಬರುವ ಕಾಲದಲ್ಲಿ ದೆಹಲಿಯಲ್ಲಿ ಇರುವ ಅಮೃತ ವಾಟಿಕಾ ವನವು ಒಂದು ಆಕರ್ಷಣೆ ಕೇಂದ್ರ ಆಗುವುದರಲ್ಲಿ ಯಾವುದೆ ಸಂಶಯವಿಲ್ಲಾ ಎಂದು ಹೆಳಿದರು.
ಈ ಕಾರ್ಯಕ್ರಮದಲ್ಲಿ ಬೆಳಗಾವಿ ಸಂಸದರಾದ ಮಂಗಲಾ ಅಂಗಡಿಜಿ ಅವರು ತಮ್ಮ ಅನಿಸಿಕೆ ಹಂಚಿಕೊಂಡರು. ಈ ಒಂದು ಅಬಿಯಾನದಲ್ಲಿ ಭಾರತದೇಶವು ಬರುವ 2047 ಇಶವಿಯಲ್ಲಿ ಶಕ್ತಿಶಾಲಿ ದೇಶವಾಗಿ ಆಗಬೇಕೆಂದು ಎಲ್ಲ ಕಾರ್ಯಕರ್ತರು ಪ್ರಮಾಣ ಮಾಡಿದರು.
ಈ ಒಂದು ಅಭಿಯಾನದಲ್ಲಿ ಸಸಿ ನೆಡುವ ಕಾರ್ಯಕ್ರಮವು ಸಂಪಣ್ಣ ಗೊಂಡಿದು. ಕಾರ್ಯಕ್ರಮದ ವೇದಿಕೆ ಮೇಲೆ ಬೆಳಗಾವಿ ವಿಭಾಗ ಸಹಸಂಘಟನಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ, ಭಾಜಪಾ ಗ್ರಾಮೀಣ ಜಿಲ್ಲಾ ಉಪಾಧ್ಯಕ್ಷರು ಯುವರಾಜ ಜಾಧವ್, ಮಾಜಿ ತಾಲುಕಾ ಪಂಚಾಯತ ಅಧ್ಯಕ್ಷ ಗಜಾನನ ನಾಯಿಕ, ಮಾಜಿ ತಾಲುಕಾ ಪಂಚಾಯತ ಸದಸ್ಯ ಲಕ್ಷ್ಮೀ ಮಾಸ್ತಮರ್ಡಿ, ಪುಂಡಲಿಕ ಅಣ್ಣಾಪ್ಪಾ ನಾಯಿಕ, ಸಿದ್ಧಯ್ಯಾ ಆಡವ್ಯಾಪ್ಪಾನಮಠ, ಗ್ರಾಮೀಣ ಮಂಡಳ ಯುವಾ ಮೋರ್ಚಾ ಅಧ್ಯಕ್ಷ ಲಿಂಗರಾಜ ಹಿರೇಮಠ, ಹಲಗಾ ಮಹಾಶಕ್ತಿ ಕೇಂದ್ರ ಪ್ರಮುಖ ಭುಜಂಗ ಸಾಲಗುಡೆ, ಬಾಗೆವಾಡಿ ಮಹಾಶಕ್ತಿ ಕೇಂದ್ರ ಪ್ರಮುಖ ಸಿದ್ಧಾಪ್ಪಾ ಹುಕ್ಕೆರಿ, ಸಾಬ್ರಾ ಮಹಾಶಕ್ತಿ ಕೇಂದ್ರ ಪ್ರಮುಖ ಭರಮಾ ಗೊಮ್ಮಾನ್ನಾಚೆ, ಜಿಲ್ಲಾ ಖಜಾಂಜಿ ಮಲಿಕಾರ್ಜುನ ಮಾದ್ದನ್ನಾವರ, ಜಿಲ್ಲಾ ಎಸ.ಸಿ ಮೋರ್ಚಾ ಅಧ್ಯಕ್ಷ ಯಲ್ಲೆಶ ಕೋಲಕಾರ, ಗ್ರಾಮೀಣ ಮಂಡಳ ಪ್ರಧಾನ ಕಾರ್ಯದರ್ಶಿ ಪಂಕಜ ಘಾಡಿ, ನಿಲಜಿ ಗ್ರಾಮ ಪಂಚಾಯತ ಅಧ್ಯಕ್ಷ ಸತೀಶ ಶಹಾಪೂರಕರ ಹಾಗು ನೂರಾರು ಕಾರ್ಯಕರ್ತರು ಉಪಸ್ತಿತರಿದ್ದರು.