spot_img
spot_img
spot_img
18.7 C
Belagavi
Monday, September 26, 2022
spot_img

ಮುಂದಿನ ಪೀಳಿಗೆಗೆ ಸಂಸ್ಕಾರ ನೀಡುವ ಕಾರ್ಯ ಭಕ್ತರು ಮಾಡಲಿ: ಮಹಾಸ್ವಾಮಿಗಳು

spot_img
spot_img

For Breaking News Download App

ಬೆಳಗಾವಿ : “ಶಿವರಾತ್ರಿಯ ಶುಭ ಸಂದರ್ಭದಲ್ಲಿ ಶಿವಶಕ್ತಿ ಮಂದಿರವನ್ನು ಸಂಸ್ಥಾಪಕ ಸಿದ್ರಾಯಿ ಕಲಖಾಂಬಕರ ಅವರು ಸುತ್ತಮುತ್ತಲಿನ ಭಕ್ತರ ವಿಶ್ವಾಸದೊಂದಿಗೆ ನಿರ್ಮಿಸಿರುವುದು ಭಾರತೀಯ ಶೈವ ಪರಂಪರೆಯ ಹೆಮ್ಮೆಯಾಗಿದೆ” ಎಂದು ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು ಹೇಳಿದರು.

ಬೆಳಗಾವಿಯ ರಾಮತೀರ್ಥ ನಗರದ ಶಿವಶಕ್ತಿ ಮಂದಿರ ಅಭಿವೃದ್ಧಿ ಮಂಡಳಿಯ ವತಿಯಿಂದ ಶಿವನ ಹಾಗೂ ನಂದಿ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನೆರವೇರಿಸಿ ಮಾತನಾಡಿದ ಅವರು, “ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮುಂದಿನ ಪೀಳಿಗೆಗೆ ಸಂಸ್ಕಾರ ನೀಡುವ ಕಾರ್ಯವನ್ನು ಇಲ್ಲಿಯ ಭಕ್ತರು ಮಾಡುವಂತಗಲಿ” ಎಂದರು.

ಕಾರ್ಯಕ್ರಮಕ್ಕೂ ಮುನ್ನ ಮೂರ್ತಿಗಳ ಭವ್ಯ ಮೆರವಣಿಗೆಯನ್ನು ಮಂದಿರದ ಸಂಸ್ಥಾಪಕರಾದ ಕಣಬರಗಿಯ ಲಕ್ಷ್ಮಿ-ಸಿದ್ರಾಯಿ ಕಲಖಾಂಬಕರ ದಂಪತಿಗಳು ಗಣೇಶ ವೃತ್ತದಲ್ಲಿ ಮೂರ್ತಿಗೆ ಪೂಜೆ ಸಲ್ಲಿಸುವುದರೊಂದಿಗೆ ಆರಂಭಸಿದರು.

ರಾಮತೀರ್ಥ ನಗರದ ಸಮಾಜ ಸೇವಕ ಹಾಗೂ ಸುರೇಶ ಯಾದವ ಫೌಂಡೇಶನ್ ಸಂಸ್ಥಾಪಕ ಸುರೇಶ ಯಾದವ ಮಾತನಾಡಿ, “ನಮ್ಮ ದೇಶದ ಅಂತಃಶಕ್ತಿ ದೈವಭಕ್ತಿ ಹಾಗೂ ಆಧ್ಯಾತ್ಮದಲ್ಲಡಗಿದೆ. ಇಂಥ ಕಾರ್ಯಗಳಲ್ಲಿ ಎಲ್ಲರೂ ಒಂದಾಗಿ ಭಾಗಿಯಾಗುವ ಮೂಲಕ ಸಾಮರಸ್ಯ ಸಾರಬೇಕು. ನಮ್ಮ ಪರಂಪರೆಯ ಇಂಥ ಕಾರ್ಯಗಳಿಗೆ ತನು-ಮನ-ಧನಗಳ ಮೂಲಕ ಸೇವೆ ಮಾಡುತ್ತೇನೆ”ಎಂದರು.

ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಅವರು ಪೂಜೆ ನೆರವೇರಿಸಿ,” ಒಬ್ಬ ವ್ಯಕ್ತಿಯ ಭಕ್ತಿ-ಶ್ರದ್ಧೆಯ ಫಲವಾಗಿ ಇಂದು ಶಿವಶಕ್ತಿ ದೇವಸ್ಥಾನ ನಿರ್ಮಾಣವಾಗಿದೆ. ದೇವಾಲಯದ ಸುತ್ತ ಕಂಪೌಂಡ ಹಾಗೂ ಬೋರ್-ವೆಲ್ ವ್ಯವಸ್ಥೆ ಮಾಡಿಸುವುದಾಗಿ” ಹೇಳಿದರು.

ಬೆಳಗಾವಿ ಸಂಸದೆ ಮಂಗಲಾ ಅಂಗಡಿ ಅವರು ದೇವಸ್ಥಾನದ ನಂದಿ ಪೂಜೆ ನೆರವೇರಿಸಿದರು.
ನೂತನ ದೇವಸ್ಥಾನದ ಪೂಜಾ ವಿಧಾನಗಳನ್ನು ಮುರುಗಯ್ಯಾ ಶಾಸ್ತ್ರಿಗಳು ಹಾಗೂ ತಂಡ ನೆರವೇರಿಸಿತು.ನಗರ ಸೇವಕ ಹಣಮಂತ ಕೊಂಗಾಲಿ, ಪ್ರಭು ಶಿವನಾಯ್ಕರ, ಬಾಪೂಜಿ ಹುಲಗೂರ, ಸತ್ಯಪ್ಪ ಬೆಣ್ಣಿ, ರಮೇಶ ಕುಂಬಾರ, ಬಾಬು ಜಮನಾಳ ಉಪಸ್ಥಿತರಿದ್ದರು

For Breaking News Download App

Related News

ನನಗೆ ಭಾಷೆ – ಜಾತಿ ಇಲ್ಲ, ಜನರ ಪ್ರೀತಿ ಒಂದೇ : ಶಾಸಕಿ ಅಂಜಲಿ ನಿಂಬಾಳ್ಕರ್ 

ವರದಿ : ರತ್ನಾಕರ ಗೌಂಡಿ  ಬೆಳಗಾವಿ : ಖಾನಾಪುರ್ ಪಟ್ಟಣದಲ್ಲಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ 60...

ಬೆಳಗಾವಿ : ಭೀಕರ ಅಪಘಾತದಲ್ಲಿ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವು 

ಬೆಳಗಾವಿ: ಕಾರು ಮತ್ತು ಬೈಕ್​ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್​ನಲ್ಲಿ ನಡೆದಿದೆ. ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -