ಬೆಳಗಾವಿ: ಪ್ರಥಮ ಬಾರಿಗೆ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನೊಂದಣಿ ಗೊಂಡಿರುವ ಮರಾಠಿ ಚಲನಚಿತ್ರ ದಡಪನ್ ಈ ಚಿತ್ರತಂಡಕ್ಕೆ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರೋತ್ಸಾಹಿಸಲು ಹಾಗೂ ನಿರ್ಮಾಪಕರು ಮತ್ತು ಕಲಾವಿದರ ಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರಕಿಸುವ ಸಲುವಾಗಿ ವಾಣಿಜ್ಯ ಮಂಡಳಿ ಬೆಂಬಲವಾಗಿ ನಿಂತಿದೆ ಎಂದು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಶಂಕರ್ ಸುಳೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿರ್ಮಾಪಕರು ಮತ್ತು ಕಲಾವಿದರಿಗೆ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರತಿ ಹೆಜ್ಜೆಗೂ ಅವರ ಜೊತೆ ಇರುವುದಲ್ಲದೆ ಅವರಿಗೆ ಬೆಂಬಲವಾಗಿ ವಾಣಿಜ್ಯ ಮಂಡಳಿ ನಿಲ್ಲಲಿದೆ
ಎಂದು ತಿಳಿಸಿದರು .
ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಮರಾಠಿ ದಡಪನ ಚಿತ್ರಕ್ಕೆ ಪ್ರಶಸ್ತಿ ನೀಡುವುದಾಗಿ ಘೋಷಿಸಿದ್ದು ಇದರಿಂದಾಗಿ ಬೇರೆ ನಿರ್ಮಾಪಕರಿಗೆ ಮತ್ತು ಕಲಾವಿದರಿಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡಿದಂತೆ ಆಗುತ್ತದೆ ಎಂದು ತಿಳಿಸಿದರು. ವಾಣಿಜ್ಯ ಮಂಡಳಿ ಕಲಾವಿದರ ಏಳಿಗೆಗಾಗಿ ಶ್ರಮಿಸಲಿದೆ ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸಲಿದೆ ಉತ್ತರ ಕರ್ನಾಟಕದ ಚಲನಚಿತ್ರ ವಾಣಿಜ್ಯ ಮಂಡಳಿ ಅಸ್ತಿತ್ವದಲ್ಲಿದ್ದು ನಿರ್ಮಾಪಕರು ಮತ್ತು ಕಲಾವಿದರು ತಮ್ಮ ಸಮಸ್ಯೆಗಳನ್ನು ವಾಣಿಜ್ಯ ಮಂಡಳಿಯ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಮಾಧ್ಯಮಗಳ ಮುಖಾಂತರ ಕಲಾವಿದರಿಗೆ ಮತ್ತು ನಿರ್ಮಾಪಕರಿಗೆ ಕರೆ ಕೊಟ್ಟರು.