spot_img
spot_img
spot_img
36.1 C
Belagavi
Tuesday, June 6, 2023
spot_img

ಬೆಳಗಾವಿ ದಕ್ಷಿಣ ಮತಕ್ಷೇತ್ರಕ್ಕೆ ಮರಾಠ ಯುವ ನಾಯಕ

ವರದಿ : ರತ್ನಾಕರ ಗೌಂಡಿ

ಬೆಳಗಾವಿ : 2023ರ ವಿಧಾನಸಭಾ ಚುನಾವಣೆ ಕುರಿತು ಕಾಂಗ್ರೆಸ್ ಪಕ್ಷ ದಲ್ಲಿ ಬಿ ಫಾರ್ಮ್ ಪಡೆಯಲು ಆಕಾಂಕ್ಷಿಗಳ ತೆರೆಮರೆಯಲ್ಲಿ ಗುದ್ದಾಟ ಆರಂಭವಾಗಿದೆ. ಬೇರೆ ಬೇರೆ ಜಿಲ್ಲೆಗಳ ಆಕಾಂಕ್ಷಿಗಳ ದಂಡೇ ಕಾಂಗ್ರೆಸ್ ನಾಯಕರ ಹಿಂಬಾಲು ಬಿಳುತ್ತೀವೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಜನನಾಯಕರಿಗೆ, ಜನಪರ ಕಾಳಜಿ ಹೊಂದಿರುವ ಟಿಕೆಟ್ ನೀಡಲು ತಯಾರಿ ನಡೆಸಿದ್ದಾರೆ.

ರಾಜ್ಯದ ಬೆಳಗಾವಿ ಜಿಲ್ಲೆಗೆ ತನ್ನದೇ ಆದ ವರ್ಚಸ್ಸು ಇದೆ. ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್’ನಲ್ಲಿ ಸ್ಪರ್ಧೆ ಆಕಾಂಕ್ಷಿಗಳ ಸಾಲೇ ಇದೆ. ಮೊದಲೇ ಹೇಳಿದಂತೆ ಕಾಂಗ್ರೆಸ್ ನಾಯಕರು ಜನಪರ ಕಾಳಜಿ ಹೊಂದಿರುವ ಅಭ್ಯರ್ಥಿಗಳ ಗಾಳ ಹಾಕುತ್ತಿದ್ದಾರೆ. ಆದರೆ ಕಾಂಗ್ರೆಸ್ ನ ಅಚ್ಚುಮೆಚ್ಚಿನ ಶಿಸ್ತಿನ ಸಿಪಾಯಿ, ಜನಪರ ಕಾಳಜಿ ಹೊಂದಿರುವ ಜನನಾಯಕ ಎಸ್ ಎಂ ಬೆಳವಟ್ಕರ್ ಮರಾಠ ಸಮಾಜದ ಯುವ ನಾಯಕರ ದಕ್ಷಿಣ ಕ್ಷೇತ್ರಕ್ಕೆ ಕಾಂಗ್ರೆಸ್ ಪಾಳಿಯಲ್ಲಿ ಪ್ರಮುಖ ಹೆಸರು ಕೇಳಿ ಬರುತ್ತಿದೆ.

ಕಾಂಗ್ರೆಸ್ ಪಕ್ಷದ ವಲಯದಲ್ಲಿ, ಕ್ಷೇತ್ರದ ಕಾರ್ಯಕರ್ತರಲ್ಲಿ ಎಸ್ ಎಂ ಬೆಳವಟಕರ್ ಹೆಸರು ಚಾಲ್ತಿಯಲ್ಲಿದೆ. ಅಲ್ಲದೆ ಮರಾಠ ಸಮಾಜದ ಒಲವು ಕೂಡ ಇದೆ.

ಕಾಂಗ್ರೆಸ್ ಪಕ್ಷ ಒಬ್ಬ ಮರಾಠಿಗ ದಕ್ಷಿಣ ಕ್ಷೇತ್ರದಿಂದ ಪ್ರತಿನಿಧಿಸಬೇಕೆಂದು ಮತದಾರರ ಒಲವು ತೋರಿದ್ದಾರೆ. ಈ ಎಲ್ಲಾ ಬೆಳವಣಿಗೆಯಲ್ಲಿ ಎಸ್ ಎಂ ಬೆಳವಟಕರ್ ತನ್ನ ರಾಜಕೀಯ ಇಚ್ಛಾ ಶಕ್ತಿಯಂತೆ ವರಿಷ್ಠರ ಹಾಗೂ ಬಿ ಫಾರ್ಮ್ ತನ್ನ ತೆಕ್ಕೆಗೆ ಪಡೆಯಲು ಪ್ರಯತ್ನ ನಡೆಸಿದ್ದಾರೆ.

ದಕ್ಷಿಣ ಮತಕ್ಷೇತ್ರಕ್ಕೆ ಇನ್ನು ಹಿರಿಯ ಕಿರಿಯ ಆಕಾಂಕ್ಷಿಗಳು ಇದ್ದರೂ ಎಸ್ ಎಂ ಬೆಳವಟ್ಕರ್ ಹೆಸರು ಹೆಚ್ಚು ಕೇಳಿ ಬರುತ್ತಿದೆ. ಎಸ್ ಎಂ ಬೆಳವಡ್ಕರ್ ಅವರು ತನ್ನ 20 ವರ್ಷಗಳಿಂದ ಸಾರ್ವಜನಿಕ ಜೀವನಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

 

ಅಲ್ಲದೆ ಮಹಾರಾಷ್ಟ್ರ ಏಕೀಕರಣ ಸಮಿತಿ ಯಿಂದ ರಾಜಕೀಯ ಜೀವನ ಪ್ರಯಾಣ ಪ್ರಾರಂಭಿಸಿದ್ದು 2013ರಲ್ಲಿ ವಿಧಾನಸಭೆಯ ಚುನಾವಣೆಯ ದಕ್ಷಿಣ ಕ್ಷೇತ್ರಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಕಾಂಗ್ರೆಸ್ ಪಾಳಿಯಲ್ಲಿ ದಕ್ಷಿಣ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಬೆಳಗಾವಿ ದಕ್ಷಿಣ ಕ್ಷ ಮರಾಠ ಪ್ರಬಲ ಹೆಚ್ಚಾಗಿದ್ದು 70,000 ಮತದಾರರನ್ನು ಮರಾಠ ಸಮುದಾಯ ಹೊಂದಿದೆ.

ಇಲ್ಲಿ ಮತ್ತೊಂದು ಗಮನಿಸಬೇಕಾದ ವಿಷಯ ಮರಾಠ ಹಾಗೂ ನೇಕಾರ ಸಮುದಾಯ ನಿರ್ಣಾಯಕ ಸಮುದಾಯವಾಗಿದೆ. ಇವೆಲ್ಲ ಕಾರಣಗಳಿಂದಾಗಿ ದಕ್ಷಿಣ ಮತಕ್ಷೇತ್ರ ಹೆಚ್ಚಿನ ಮಹತ್ವವನ್ನು ಪಡೆದಿದ್ದು ಈ ಕಡೆ ಮತದಾರರ ಒಲವು ಯಾವ ಪಕ್ಷಗಳ ಮೇಲೆ ಹೋಗಲಿದೆ ಅನ್ನೋದು ಸಮುದಾಯದಗಳ ಅಭ್ಯರ್ಥಿಗಳ ಆಧಾರದ ಮೇಲೆ ನಿರ್ಣಯವಾಗಲಿದೆ.ಎಂದು ಈ ಕ್ಷೇತ್ರದಲ್ಲಿ ಜನಸಾಮಾನ್ಯರ ಮಾತಾಗಿದೆ.

ಇನ್ನು ಹೇಳಬೇಕಾದರೆ ಭಾರತೀಯ ಜನತಾ ಪಕ್ಷ ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಪಕ್ಷೇತರರಲ್ಲಿ ಈ ಕ್ಷೇತ್ರಕ್ಕೆ ಸಮುದಾಯಗಳ ಒಲವು ಹೆಚ್ಚಿನ ರಾಜಕೀಯ ಚಟುವಟಿಕೆಗಳಿಗೆ ಅದೇ ಮಾಡಿಕೊಟ್ಟಂತಾಗಿದೆ.

ಮುಂದೆ ಕಾಂಗ್ರೆಸ್ ಪಕ್ಷದ ನೆಲವು ಏನಾಗಲಿದೆ ಎನ್ನುವುದು ಎಲ್ಲರ ಗಮನ ಕಾಂಗ್ರೆಸ್ ಪಕ್ಷದ ಕಡೆ ಇದೆ ಎನ್ನಲಾಗುತ್ತಿದೆ. ಮತದಾರರ ಆಕಾಂಕ್ಷಿಗಳಂತೆ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಸ್ಥಳೀಯ ರಾಜಕಾರಣಕ್ಕೆ ಮಹತ್ವ ನೀಡಿದರೆ ಪಕ್ಷಗಳಿಗೆ ಈ ಚುನಾವಣೆ ರಣತಂತ್ರ ಹೂಡಲಿದೆ ಎಂದು ಹೇಳಲಾಗುತ್ತಿದೆ.

ಇನ್ನು 2023ರ ಚುನಾವಣೆಯ ಬಲಾ ಬಲ ನೋಡುವುದಾರೇ ಈಗ ಎರಡು ಪಕ್ಷಗಳಲ್ಲಿ ಅಂದರೆ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷಗಳಲ್ಲಿ ಪ್ರಬಲ ಆಕಾಂಕ್ಷಿಗಳು ಪಟ್ಟಿ ಹೊಂದಿದೆ. ಭಾರತೀಯ ಜನತಾ ಪಕ್ಷದಲ್ಲಿ ಪ್ರಮುಖ ನಾಯಕ ಕಿರಣ್ ಜಾದವ್ ಪ್ರಬಲ ಆಕಾಂಕ್ಷಿ ಆದ್ರೇ ಕಾಂಗ್ರೆಸ್ ಪಾಳೆಯಲ್ಲಿ ಪ್ರಭಾವತಿ ಚೌಡಿ , ರಮೇಶ್ ಗೋರಲ್, ಹಾಗೂ ಸಾತೇರಿ ಮಹದೇವ್ ಬೆಳವಟಕರ್, ಚಂದ್ರಹಾಸ್ ಅನ್ವೇಕರ್, ಕುಮಾರ ಸರ್ವದೇ ಟಿಕೆಟ್ ಆಕಾಂಕ್ಷಿಗಳು ಕಾಂಗ್ರೆಸ್ ಬಿ ಫಾರಂಗೆ ಅರ್ಜಿ ಹಾಕಿದ್ದಾರೆ.

 

ಇತ್ತ ಮತ್ತೊಂದು ಪ್ರಬಲ ಹೆಸರು ಎಂದರೆ ಮಾಜಿ ಶಾಸಕ ರಮೇಶ್ ಕುಡಚಿ ಅವರು ತೆರೆಮರೆಯ ರಾಜಕಾರಣದಿಂದಾಗಿ ಈ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾದು ನೋಡೋಣ ಎಂಬ ತಂತ್ರಗಾರಿಕೆ ರಮೇಶ್ ಕುಡಚಿ ಅವರ ಪಾಳೆಯಲ್ಲಿದಲ್ಲಿ ನಡೆದಿದೆ ಎಂದು ಹೇಳಬಹುದು.

ಈ ನಡುವೆ ದಕ್ಷಿಣದ ಮತ ಕ್ಷೇತ್ರದ ಕಾಂಗ್ರೆಸ್ ಪಾಳೆದಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿರುವ ಸಾತೇರಿ ಮಹದೇವ ಬೆಳವಟ್ಕರ್ ಮರಾಠ ಸಮುದಾಯದ ಯುವ ನಾಯಕರ ಆದ ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ರಾಜಕೀಯ ಪಯಣ ಪ್ರಾರಂಭಿಸಿ ಈಗ ಕಾಂಗ್ರೆಸ್ ನಲ್ಲಿ ತಮ್ಮ ರಾಜಕೀಯ ಭವಿಷ್ಯದ ಕಡೆ ಸಾಗುತ್ತಿದ್ದಾರೆ.

2013ರಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ಸ್ಪರ್ಧೆ ಆಕಾಂಕ್ಷಿಯಾಗಿದ್ದರು, ಆದರೆ ಸಂಭಾಜಿ ಪಾಟೀಲ್ ಅವರನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ ಕಣಕ್ಕಿಳಿಸಿತು.

ಅದರಿಂದ ಸಾತೇರಿ ಬೆಳವಟಕರ್ ರವರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಪಕ್ಷವನ್ನು ಸಂಘಟಿಸುತ್ತಿದ್ದಾರೆ. ಮರಾಠ ಸಮುದಾಯದ ಬೆಂಬಲ ಇರುವುದರಿಂದ ಈ ಕ್ಷೇತ್ರಕ್ಕೆ ಒಬ್ಬ ಮರಾಠ ಅಭ್ಯರ್ಥಿಯಾಗಿರುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಜನರ ಮಧ್ಯೆ ಚರ್ಚೆ ನಡೆಯುತ್ತಾ ಇದೆ. ಜನನಾಯಕನ್ನಾಗಿ ಬೆಳೆದಿರುವ ಸಾತೇರಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವುದರಲ್ಲಿ ಅನುಮಾನವೇ ಇಲ್ಲ.

Related News

ಅಂತೆ ಕಂತೆಗಳಿಗೆ ಕಿವಿಗೊಡಬೇಡಿ, ಸರಕಾರ ನಿಮ್ಮ ಜೊತೆಗಿದೆ – ಜನರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಯ

ಬೆಳಗಾವಿ: ಭರವಸೆ ನೀಡಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗುವುದು. ಯಾವುದೇ ಅಂತೆ ಕಂತೆಗಳಿಗೆ ಕಿವಿಗೊಡಬೇಡಿ. ಸರಕಾರ ನಿಮ್ಮ ಜೊತೆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಹಿರಿಯ ನಾಗರಿಕರು ಮತ್ತು...

ಪ್ರಿಯತಮೆಯನ್ನು ಕೊಲೆ ಮಾಡಿ ಎಸ್ಕೇಪ್ ಆದ ಪ್ರಿಯಕರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಿಯಕರನೇ ತನ್ನ ಪ್ರಿಯತಮೆಯನ್ನು ಕೊಲೆ ಮಾಡಿ ಬಳಿಕ ಎಸ್ಕೇಪ್ ಆದ ಘಟನೆ ನಡೆದಿದೆ. ಬೆಂಗಳೂರಿನ ಜೀವನ್ ಭಿಮಾ ನಗರದ ಕೋಡಿಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಹೈದರಾಬಾದ್ ಮೂಲದ ಆಕಾಂಕ್ಷಾ ಮೃತ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -