ಬಾಗಲಕೋಟೆ: ಪತ್ರಿಕೋದ್ಯಮದಲ್ಲಿ ಹೇರಳ ಅವಕಾಶಗಳಿದ್ದು ವಿದ್ಯಾರ್ಥಿಗಳು ಈ ಕ್ಷೇತ್ರದತ್ತ ಒಲವು ತೋರಬೇಕು. ಪತ್ರಕರ್ತರ ಅಖಂಡತೆಯ ಚಿಂತನೆಯಿಂದ ಸಂಪೂರ್ಣ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ ಎಂದು ಪ್ರಜಾವಾಣಿ ದಿನಪತ್ರಿಕೆಯ ಕಲಬುರಗಿ ವಿಭಾಗದ ಬ್ಯೂರೋ ಉಪ ಮುಖ್ಯಸ್ಥರಾದ ಮನೋಜಕುಮಾರ ಗುದ್ದಿ ಅವರು ಹೇಳಿದರು.
ಬವಿವ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ವಸ್ತು ಪ್ರದರ್ಶನ ಹಾಗೂ ಒಂದು ದಿನದ ಕಾರ್ಯಗಾರವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತನಿಗೆ ಸಮಯ ಪಾಲನೆ ಮತ್ತು ಶಿಸ್ತು ಅವಶ್ಯಕ ಇರಬೇಕಾದ. ಸೇವೆಯ ಮೂಲಕ ಪ್ರಾರಂಭವಾದ ಪತ್ರಿಕೋದ್ಯಮ ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ತನ್ನದೆಯಾದ ಸ್ಥಾನವನ್ನು ಪಡೆದುಕೊಂಡಿದೆ ಎಂದರು.
ಪತ್ರಕರ್ತನು ಪ್ರತಿಯೊಂದೂ ವಿಷಯವನ್ನು ಕುತೂಹಲದಿಂದ ನೋಡುವುದನ್ನು ಕಲಿಯಬೇಕು. ಸುದ್ದಿ ಮೂಲವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ ವಿಷಯವಾಗಿದೆ. ಇತ್ತಿಚಿನ ದಿನಗಳಲ್ಲಿ ಮಹಿಳೆಯರು ಪತ್ರಿಕೋದ್ಯಮದತ್ತ ಮುಖ ಮಾಡುತ್ತಿರುವುದು ಅಭಿವೃದ್ಧಿ ಬದಲಾವಣೆಯಾಗಿದೆ ಎಂದರು.
ಹಿರಿಯ ಪತ್ರಕರ್ತ ಸುಶಿಲೆಂದ್ರ ನಾಯಕ್ ಮಾತನಾಡಿ. ಪತ್ರಕರ್ತನ ಮುಖ್ಯ ಉದ್ದೇಶ ಸಮಾಜದ ಬದಲಾವಣೆಯಾಗಿರಬೇಕು. ವಿಶ್ವಾಸಹರ್ತೆ, ಬದ್ದತೆಯನ್ನು ರೂಡಿಸಿಕೊಳ್ಳಬೇಕೆಂದರು.
ಅಧ್ಯಕ್ಷ ಸ್ಥಾನ ವಹಿಸಿದ ಪ್ರಾಚಾರ್ಯರಾದ ಎಸ್.ಆರ್.ಮೂಗನೂರಮಠ ಅವರು ಮಾತನಾಡಿ ಪತ್ರಿಕೋದ್ಯಮ ಎನ್ನುವುದು ಮುಳ್ಳಿನ ಹಾದಿ ಇದ್ದಂತೆ ಸತ್ಯ ತೋರಿಸುವ ಹೊಣೆಹೊತ್ತ ಪತ್ರಿಕೋದ್ಯಮವು ಕಹಿ ಸಿಹಿಗಳ ಜೊತೆಗೆ ಸಾಗುತ್ತದೆ. ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವ ವರದಿಗಾರರ ಸಾಹಸಮಯ ಬದುಕನ್ನು ಮೆಚ್ಚಲೇಬೇಕು ಎಂದರು.
ಕಾರ್ಯಕ್ರಮದಲ್ಲಿ ಐ.ಬಿ ಚಿಕ್ಕಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಡಾ.ಎ.ಯು ರಾಠೋಡ, ಪ್ರಾದ್ಯಾಪಕರಾದ ಎಂ.ಪಿ.ದೊಡವಾಡ, ವಿ.ಎಸ್.ಮುನಹಳ್ಳಿ, ವಿವಿಧ ವಿಭಾಗದ ಪ್ರಾದ್ಯಾಪಕರುಗಳು ಸೇರಿದಂತೆ ಕಲಾ ಮಹಾವಿದ್ಯಾಲಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ಮುಧೋಳದ ಎಸ್.ಆರ್. ಕಂಠಿ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಣ್ಮನ ಸೆಳೆದ ವಸ್ತು ಪ್ರದರ್ಶನ:
ಪತ್ರಿಕಾ ದಿನದ ಅಂಗವಾಗಿ ಏರ್ಪಡಿಸಲಾಗಿದ್ದು ವಸ್ತು ಪ್ರದರ್ಶನ ಕಾರ್ಯಕ್ರಮದ ಕೇಂದ್ರಬಿಂದುವಾಗಿತ್ತು. ಮಾದ್ಯಮಗಳಿಗೆ ಅನ್ವಯವಾಗುವ ವಿವಿಧ ವಸ್ತುಗಳನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳು ನಿರ್ಮಿಸುವುದರ ಮೂಲಕ ಪ್ರದರ್ಶನ ಏರ್ಪಡಿಸಿದ್ದರು.
ಪತ್ರಿಕೋದ್ಯಮ ವಸ್ತು ಪ್ರದರ್ಶನವನ್ನು ಹಿರಿಯ ವರದಿಗಾರರಾದ ಸುಶಿಲೇಂದ್ರ ನಾಯಕ ಉದ್ಘಾಟನೆ ಮಾಡಿದರು. ಪ್ರದರ್ಶನದಲ್ಲಿ ರಟ್ಟಿನಿಂದ ಮಾಡಲಾದ ಕಂಪ್ಯೂಟರ್, ಟಿವಿ, ಕ್ಯಾಮರಾ, ರೇಡಿಯೋ, ಲ್ಯಾಪ್‌ಟಾಪ್, ನ್ಯೂಸ್ ಲೋಗೋಗಳು, ಲ್ಯಾಂಡಫೋನಗಳು ಪ್ರದರ್ಶನದ ಅಂದ ಹೆಚ್ಚಿಸಿದ್ದವು.
ಸ್ಟುಡಿಯೋ ಸೆಟಪ್, ಹಳೆ ಕ್ಯಾಮರಾಗಳು, ಸಂವಹನ ಅಭಿವೃದ್ಧಿ ನಕ್ಷೆ, ಪತ್ರಿಕೋದ್ಯಮದಲ್ಲಿರುವ ಅವಕಾಶಗಳ ನಕ್ಷೆ, ವಿದ್ಯಾರ್ಥಿಗಳು ಬರೆದ ಲೇಖನಗಳು ಮತ್ತು ಹಳೆ ಪತ್ರಿಕೆಗಳ ಚಾಯಾಚಿತ್ರಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿತ್ತು.
ವಿವಿಧ ಗೋಷ್ಠಿಗಳ ಮೂಲಕ ಉಪನ್ಯಾಸ:
ಕಾರ್ಯಕ್ರಮದಲ್ಲಿ ವಿವಿಧ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಯಿತು. ಮೊದಲ ಗೋಷ್ಟಿಯಲ್ಲಿ ಪ್ರಜಾವಾಣಿ ದಿನಪತ್ರಿಕೆಯ ಕಲಬುರಗಿ ವಿಭಾಗದ ಬ್ಯೂರೋ ಉಪ ಮುಖ್ಯಸ್ಥರಾದ ಮನೋಜಕುಮಾರ ಗುದ್ದಿ ಅವರು ಅಪರಾಧ ಸುದ್ದಿ ಬರವಣಿಗೆ ಮತ್ತು ಅಪರಾಧ ನಿಯಂತ್ರಣದಲ್ಲಿ ಪತ್ರಿಕೋದ್ಯಮದ ಪಾತ್ರ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಸಮಾಜ ಬದಲಾವಣೆಯಲ್ಲಿ ರಾಜಕೀಯ ಪತ್ರಿಕೋದ್ಯಮದ ಪಾತ್ರ ಎಂಬ ವಿಷಯದ ಕುರಿತು ವಿಜಯಪುರದ ಹಿರಿಯ ವರದಿಗಾರರಾದ ಸುಶಿಲೇಂದ್ರ ನಾಯಕ ಅವರು ವಿಷಯ ಮಂಡನೆ ಮಾಡಿದರು.
ಕಾರ್ಯಕ್ರಮದ ಅಂದ ಹೆಚ್ಚಿಸಿದ ಮಾದ್ಯಮ ರಂಗೋಲಿ:
ಮಾದ್ಯಮಕ್ಕೆ ಸಂಬಂಧಿಸಿದ ರಂಗೋಲಿ ಚಿತ್ತಾರಗಳು ಕಾಲೇಜು ಆವರಣದಲ್ಲಿ ಹರಡಿಕೊಂಡಿದ್ದವು.
ವಿದ್ಯಾರ್ಥಿಗಳು ಕ್ಯಾಮರಾ, ಪತ್ರಿಕೆ, ಸಾಮಾಜಿಕ ಜಾಲತಾಣಗಳನ್ನು ಒಳಗೊಂಡ ರಂಗೋಲಿಗಳನ್ನು ಗಳನ್ನು ಆವರಣದಲ್ಲಿ ಬಿಡಿಸುವುದರ ಮೂಲಕ ಪ್ರತಿಕಾ ದಿನವನ್ನು ಅರ್ಥಗರ್ಭಿತವಾಗಿ ಆಚರಿಸಿದರು.