ಗ್ರಾಮಗಳು ಅಭಿವೃದ್ಧಿ ಆದರೆ ದೇಶ ಅಭಿವೃದ್ಧಿ ಆಗುವುದು ಗ್ರಾಮೀಣ ಮಟ್ಟದಲ್ಲಿ ಅಧಿಕಾರ ವಿಕೇಂದ್ರೀಕರಣ ಅವಕಾಶ ನೀಡಿದ್ರೆ ಮಾತ್ರ ಗ್ರಾಮದ ಸರ್ವಾಂಗಿನ ಅಭಿವೃದ್ಧಿ ಸಾಧ್ಯ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ದೃಢವಾದ ವಿಶ್ವಾಸವನ್ನು ಇಟ್ಟಿದ್ದರು ಅದರಂತೆ ಕರ್ನಾಟಕ ರಾಜ್ಯದಲ್ಲಿ ಸ್ಥಳೀಯ ಅಧಿಕಾರ ವಿಕೇಂದ್ರೀಕರಣ ದಿಂದಾಗಿ ಗ್ರಾಮದ ಸರ್ವಾಂಗಿನ ಅಭಿವೃದ್ಧಿ ಗ್ರಾಮ ಪಂಚಾಯತಿಗಳ ಮೂಲಕ ನಡೆಯುತ್ತಾ ಇರುವುದು ಒಂದು ಕ್ರಾಂತಿಕಾರಿ ಪ್ರವಾಸವಾಗಿದೆ.
ಗ್ರಾಮೀಣ ಸರ್ವಾಂಗಿನ ಅಭಿವೃದ್ಧಿ ಯಲ್ಲಿ ತೊಡಗಿರುವ ಮಂಗಸೊಳಿ ಗ್ರಾಮ ಪಂಚಾಯತ್ ಸಂಪೂರ್ಣ ಸಾಕ್ಷರತಾ ವನ್ನು ಹೊಂದಿರುವ ವಿಶೇಷತೆ ಗ್ರಾಮ ಪಂಚಾಯತಿ ಹೆಗ್ಗಳಿಕೆ ಹೊಂದಿದೆ.
ಸರ್ಕಾರದ ಅನೇಕ ಯೋಜನೆಗಳು ಜನರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳುತ್ತಾ ಇದೆ. ಉದ್ಯೋ ಖಾತ್ರಿ ಯೋಜನೆ ಸ್ವಚ್ಛ ಭಾರತ ಅಭಿಯಾನ್ ಶುದ್ಧ ನೀರಿನ ಘಟಕ ಆಸ್ಪತ್ರೆ ಶಾಲೆಗಳಾಗಿರಬಹುದು ಮತ್ತು ವಿಶೇಷತೆ ಅಂದರೆ ವಿದ್ಯಾವಂತ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಿ ಉದ್ಯೋಗ ಕಲ್ಪಿಸುವಲ್ಲಿ ಗ್ರಾಮ ಪಂಚಾಯತ್ ವಿಶೇಷ ಆಸಕ್ತಿಯನ್ನು ಹೊಂದಿದೆ.
ಈ ಎಲ್ಲಾ ಕಾರ್ಯಕ್ರಮಗಳಿಂದ ಗ್ರಾಮ ಪಂಚಾಯತ್ ತನ್ನ ವಿಶೇಷ ಸ್ಥಾನಮಾನಗಳನ್ನು ಹೊಂದಿಕೊಂಡಿದ ಇಂತಹ ಸಾಧನೆಗೈದ ಗ್ರಾಮ ಪಂಚಾಯಿತಿ ಒಂದು ಕಿರು ನೋಟ ನಾವು ನೋಡುವುದಾದರೆ ಗಾಂಧಿ ಗ್ರಾಮ ಪುರಸ್ಕಾರ ಮೂರನೇ ಬಾರಿಗೆ ತನ್ನದಾಗಿಸಿಕೊಂಡಿರುವ ಮಂಗಸೂಳಿ ಗ್ರಾಮ ಪಂಚಾಯತ್೨೦೦೩/೦೪ ,೨೦೧೭/೦೧೮ ಪುರಸ್ಕಾರ ಪಡೆದು ಈಗ ೨೦೨೩/೨೪ ಪ್ರಸ್ತುತ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಈ ಗ್ರಾಮ ಪಂಚಾಯಿತಿಗೆ ಒಲಿದು ಬಂದಿದೆ.
ಗ್ರಾಮ ಪಂಚಾಯತ್ 40 ಸದಸ್ಯರುಗೊಂಡ ಎ ಗ್ರೇಡ್ ಪಂಚಾಯಿತಿಯಾಗಿದೆ ಪಂಚಾಯತ್ ಇದಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಳು ರಾಮಚಂದ್ರ ಭಜಂತ್ರಿ ಹಾಗೂ ಉಪಾಧ್ಯಕ್ಷರಾಗಿ ಸವಿತಾ ರವೀಂದ್ರ ಪಾಟೀಲ್ ಗ್ರಾಮ ಪಂಚಾಯತಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅಭಿವೃದ್ಧಿ ಅಧಿಕಾರಿ
ಸಂಜೀವ್ ಜ್ಯೋತಿಬಾ ಸೂರ್ಯವಂಶ ಅತ್ಯುತ್ತಮ ಅಧಿಕಾರಿಯಾಗಿ ಗ್ರಾಮ ಪಂಚಾಯಿತಿಗೆ ಆಡಳಿತ ಮತ್ತು ಜನಪ್ರತಿನಿಧಿಗಳಿಗೆ ಅತ್ಯುತ್ತಮ ಮಾರ್ಗದರ್ಶಕರಾಗಿದ್ದಾರೆ.
ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗ ಪರಿಶ್ರಮವೇ ಫಲವಾಗಿ ಮೂರನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಮುಂಗುಸೊಳಿ ಗ್ರಾಮ ಪಂಚಾಯಿತಿಗೆ ಒಲಿದು ಬಂದಿದೆ. ಅದಕ್ಕಾಗಿ ಪಂಚಾಯತ್ ಸ್ವರಾಜ್ ಸಮಾಚಾರ ಪತ್ರಿಕೆ ಮಂಗಸೂಳಿ ಗ್ರಾಮ ಪಂಚಾಯಿತಿಗೆ ಅಭಿನಂದನೆಯನ್ನು ಚಲಿಸುತ್ತದೆ.
ಹರಿಶ್ಚಂದ್ರ ವಗ್ಗೆ, ಕಾಗವಾಡ ವರದಿಗಾರರು