ವರದಿ : ರತ್ನಾಕರ ಗೌಂಡಿ
ಬೆಳಗಾವಿ : ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳಮುಖಿಯರ ಪಬ್ಲಿಕ್ ಹಿರಿಂಗ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಇಂದಿನ ದಿನಗಳಲ್ಲಿ ಮಂಗಳಮುಖಿಯರ ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಯಿತು.
ಸಂವಿಧಾನದ ಆಶಯದಡಿ ಮಂಗಳಮುಖಿಯರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಈಗಿರುವ ಮಾಶಾಸನ ಹೆಚ್ಚಳ ಮಾಡುವ ಜೊತೆಗೆ ವಿವಿಧ ಸೌಕರ್ಯಗಳನ್ನು ಮಂಗಳ ಮುಖಿಯರಿಗೆ ಒದಗಿಸಬೇಕು ಸಮಾಜದ ಭಾಗವಾಗಿ ಬದುಕಲು ನಮಗೆ ಮೀಸಲಾತಿಯನ್ನು ನೀಡಬೇಕೆಂದು ಕಿರಣ್ ಬೇಡಿ ಅವರು ಸರ್ಕಾರವನ್ನು ಒತ್ತಾಯಿಸಿದರು.
ಈ ವೇಳೆ ಜಿಲ್ಲಾ ನ್ಯಾಯಾಧೀಶರು, ಎಸಿಪಿ ಸ್ನೇಹ ಹಾಗೂ ಮಂಗಳಮುಖಿಯರು, ವಿವಿಧ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.