ಹುಕ್ಕೇರಿ : ನೇಣು ಹಾಕಿಕೊಂಡು ವ್ಯಕ್ತಿ ಸಾವು ತಾಲೂಕಿನ ಶಿರಗಾಂವ ಗ್ರಾಮದ ಒರ್ವ ವ್ಯಕ್ತಿ ಈರಪ್ಪ ರಾಯಪ್ಪ ಚೌಗಲಾ (೪೧) ವಯಸ್ಸು ಸಾಕಿನ ಶಿರಗಾಂವ ಗ್ರಾಮದಲ್ಲಿ ವಾಸವಾಗಿದ್ದು ಸ್ಥಳಿಯ ಅವರಗೋಳ ಗ್ರಾಮದ ಖಾಸಗಿ ಬ್ಯಾಂಕ ಒಂದರಲ್ಲಿ ಕೆಲಸ ಮಾಡುತ್ತಿದ್ದನು.
ಆದರೆ ಈರಪ್ಪ ನೇಣಿಗೆ ಶರಣಾಗಿದ್ದಾನೆ. ನ್ನೂ ಈರಪ್ಪ ಚೌಗಲಾ ಈತನಿಗೆ ಬಹಳದಿನಗಳಿಂದ ಬೆನ್ನು ನೋವು ಸೊಂಟ ನೋವಿನಿಂದ ಆಗಾಗ ತೊಂದರೆಗಿಡಾಗುತ್ತಿದ್ದನು. ಹಾಗಾಗಿ ಮಾನಸಿಕವಾಗಿ ಮನನೋಂದು ನೇಣುಹಾಕಿಕೊಂಡು ಸಾವಿಗಿಡಾಗಿದ್ದಾನೆ ಎಂದು ಕೇಳಿ ಬಂದಿದೆ.
ಮೃತ ಈರಪ್ಪನಿಗೆ ಎರಡು ಹೆಣ್ಣು ಮಕ್ಕಳು ಒಂದು ಗಂಡು ಮಗು. ಆದರೆ ಸಾವಿಗೆ ನಿಖರವಾದ ಮಾಹಿತಿ ಹುಕ್ಕೇರಿ ಪೋಲಿಸರಿಂದ ತಿಳಿದುಬರಬೇಕಿದೆ. ಹುಕ್ಕೇರಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.