spot_img
spot_img
spot_img
36.1 C
Belagavi
Tuesday, June 6, 2023
spot_img

ಗಣೇಶೋತ್ಸವ ನಿಮಿತ್ಯ ಶಾಸಕ ಅನಿಲ ಬೆನಕೆ ನೇತೃತ್ವದಲ್ಲಿ ಮಹಾಮಂಡಳ ಸಭೆ

ಬೆಳಗಾವಿ : ಲೋಕಮಾನ್ಯ ಟಿಳಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಹಾಮಂಡಳ ವತಿಯಿಂದ ನಗರದ ಶ್ರೀ ಸಮಾದೇವಿ ಮಂಗಲ ಕಾರ್ಯಾಲಯದಲ್ಲಿ ಮುಂಬರುವ ಗಣೇಶೋತ್ಸವ ನಿಮಿತ್ಯ ಬೆಳಗಾವಿಯ ಎಲ್ಲ ಗಣೇಶೋತ್ಸವ ಮಂಡಳದ ಪದಾಧಿಕಾರಿಗಳೊಂದಿಗೆ ಸಭೆ ಏರ್ಪಡಿಸಲಾಗಿತ್ತು.

ಜಿಲ್ಹಾಧಿಕಾರಿ, ನಗರ ಪೊಲೀಸ ಆಯುಕ್ತ, ಮಹಾನಗರಪಾಲಿಕೆ ಆಯುಕ್ತ, ಹೆಸ್ಕಾಂ, ಕ್ಯಾಂಟೋನ್ಮೇಂಟ ಬೊರ್ಡ, ಜಲ ಮಂಡಳಿ, ಎಲ&ಟಿ, ಅಗ್ನಿಶಾಮಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು. ಎಲ್ಲ ಗಣೇಶೋತ್ಸವ ಮಂಡಳಗಳ ಕುಂದುಕೊರತೆ ಹಾಗೂ ಅವಶ್ಯಕತೆಗಳನ್ನು ಆರಿಸಿ ಶೀಘ್ರದಲ್ಲೆ ಶಾಸಕರ ಕೋರಿಕೆ ಮೇರೆಗೆ ಕೆಲಸ ಪ್ರಾರಂಭಿಸುವುದಾಗಿ ತಿಳಿಸಿದರು.

ಪ್ರಮುಖವಾಗಿ ಗಣೇಶೋತ್ಸವ ಮಂಡಳಗಳಿಗೆ ಬೇಕಾಗುವ ಅನುಮತಿ ಪತ್ರಗಳನ್ನು ಸಿಂಗಲ್ ವಿಂಡೊ ಮುಖಾಂತರ ಅನುಷ್ಠಾನಗೊಳಿಸಿ ಅನುಕೂಲ ಮಾಡಿಕೊಡಲಾಗುವುದು, ನಗರದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ಆರ್.ಓ.ಪ್ಲಾಂಟ್. ಚಾಲ್ತಿಗೊಳಿಸಿ ಗಣೇಶೋತ್ಸವ ಸಂದರ್ಭದಲ್ಲಿ 11 ದಿನ ಉಚಿತ ನೀರಿನ ವ್ಯವಸ್ಥೆ, ಸಾರ್ವಜನಿಕ ಶೌಚಾಲಯ, ವಿದ್ಯುತ ದೀಪಗಳ ಅಳವಡಿಕೆ, ಸಂಶಯಾಸ್ಪದ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ನಿಯುಕ್ತಿ ಸಿಸಿಟಿವ್ಹಿ ಕ್ಯಾಮರಾ ಅಳವಡಿಕೆ, ಮೆರವಣ ಗೆ ರಸ್ತೆಗಳ ದುರುಸ್ತಿಕರಣ, ಇಲೆಕ್ಟ್ರಿಕ ಕಂಬಗಳ ಅಳವಡಿಕೆ, ಸ್ವಚ್ಛ ಭಾರತ ಹಾಗೂ ಸ್ಮಾರ್ಟ ಸಿಟಿ ಅಡಿಯಲ್ಲಿ ಡಸ್ಟಬಿನ್‍ಗಳ ಬಳಿಕೆ, ಹೆಸ್ಕಾಂ ವತಿಯಿಂದ ಮಂಡಳಗಳಿಗೆ ಮಿಟರ ಅಳವಡಿಕೆಯಲ್ಲಿ ರಿಯಾಯತಿ, ಗಣಪತಿ ಪ್ರತಿಷ್ಠಾಪಣೆ ಹಾಗೂ ವಿಸರ್ಜಣೆ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳಿಂದ ಹೆಚ್ಚುವರಿ ಲೆನಮ್ಯಾನ ನಿಯುಕ್ತಿ, ಪಾರ್ಕಿಂಗ ವ್ಯವಸ್ಥೆ, ಪೊಲೀಸ ಇಲಾಖೆವತಿಯಿಂದ ಕಾನೂನು ಸೂವ್ಯವಸ್ಥೆ, 24ಘಿ7 ಅಂಗಡಿ ಮುಂಗಟ್ಟುಗಳ ಚಾಲನೆ ಹಾಗೂ ಧ್ವನಿವರ್ಧಕಗಳ ಬಳಿಕೆಗೆ ಅವಕಾಶ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಿ ಶೀಘ್ರದಲ್ಲೆ ಅನುಷ್ಠಾನಕ್ಕೆ ತರಲು ಎಲ್ಲ ಗಣೇಶೋತ್ಸವ ಮಂಡಳ, ಮಹಾಮಂಡಳ ಹಾಗೂ ಶಾಸಕ ಅನಿಲ ಬೆನಕೆ ಅವರಿಂದ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಹಾಧಿಕಾರಿ ನಿತೇಶ ಪಾಟಿಲ, ನಗರ ಪೊಲೀಸ ಆಯುಕ್ತ ಡಾ. ಬೊರಲಿಂಗಯ್ಯಾ, ಮಹಾನಗರಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಹೆಸ್ಕಾಂ ಅಧಿಕಾರಿ ಅಮ್ಮನ್ನವರ, ಎಸ್.ಇ. ಲಕ್ಷ್ಮೀ ನಿಪ್ಪಾಣ ಕರ, ಎಲ&ಟಿ ಅಧಿಕಾರಿ ಹಾರ್ದಿಕ ದೇಸಾಯಿ, ಕ್ಯಾಂಟೋನ್ಮೇಂಟ ಬೊರ್ಡ, ಜಲ ಮಂಡಳಿ, ಅಗ್ನಿಶಾಮಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಲೋಕಮಾನ್ಯ ಟಿಳಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಹಾಮಂಡಳದ ಅಧ್ಯಕ್ಷ ವಿಜಯ ಜಾಧವ ಸೇರಿದಂತೆ ಪದಾಧಿಕಾರಿಗಳಾದ ರಾಜು ಖಟಾವಕರ, ಅರ್ಜುನ ರಜಪುತ, ರವಿ ಕಲಘಟಗಿ, ನಿತಿನ ಜಾಧವ, ಹೆಮಂತ ಹಾವಳ, ಶರದ ಪಾಟೀಲ, ಶಂಕರ ಪಾಟೀಲ ಹಾಗೂ ಸೌರಭ ಸಾವಂತ ಉಪಸ್ಥಿತರಿದ್ದರು.

 

Related News

ಎಲ್ಲ ನಾಯಕರ ಸಹಮತದ ಆಧಾರದ ಮೇಲೆ ಬೆಳಗಾವಿ ಜಿಲ್ಲಾ ವಿಭಜನೆ ಆಗಬೇಕು

ಬೆಳಗಾವಿ: ಅಭಿವೃದ್ಧಿ ದೃಷ್ಟಿಯಿಂದ ಅಖಂಡ ಬೆಳಗಾವಿ ಜಿಲ್ಲಾ ವಿಭಜನೆ ಆಗಬೇಕು. ಆದರೆ ಜಿಲ್ಲೆಯ ಎಲ್ಲ ನಾಯಕರ ಸಹಮತದ ಆಧಾರದ ಮೇಲೆ ಜಿಲ್ಲಾ ವಿಭಜನೆ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ...

ಅಂತೆ ಕಂತೆಗಳಿಗೆ ಕಿವಿಗೊಡಬೇಡಿ, ಸರಕಾರ ನಿಮ್ಮ ಜೊತೆಗಿದೆ – ಜನರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಯ

ಬೆಳಗಾವಿ: ಭರವಸೆ ನೀಡಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗುವುದು. ಯಾವುದೇ ಅಂತೆ ಕಂತೆಗಳಿಗೆ ಕಿವಿಗೊಡಬೇಡಿ. ಸರಕಾರ ನಿಮ್ಮ ಜೊತೆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಹಿರಿಯ ನಾಗರಿಕರು ಮತ್ತು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -