ಅಥಣಿ : ಮಹಾರಾಷ್ಟ್ರ ರಾಜ್ಯದ ಜತ್ತ ತಾಲೂಕಿನಲ್ಲಿ ವಾಸಿಸುವ ಕನ್ನಡಿಗರು ಕರ್ನಾಟಕ ಸೇರಲು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಮೇಲ್ ಮುಖಾಂತರ ಅಭಿಯಾನ ಪ್ರಾರಂಭ ಮಾಡಿದ್ದಾರೆ. ಜತ್ತ ತಾಲೂಕಿನ 40 ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಿ, ನಾವು ಸೇರಲು ಸಿದ್ಧರಿದ್ದೇವೆ, ನಮಗೆ ಮಹಾರಾಷ್ಟ್ರ ಸರ್ಕಾರ ಮುಲಭೂತ ಸೌಕರ್ಯ ನೀಡುತ್ತಿಲ್ಲ ಎಂದು ಕರುನಾಡು ಸೇರಲು ಅಭಿಯಾನ ಪ್ರಾರಂಭಿಸಿದ್ದಾರೆ.
ಕುರುಡನಾಡ ನಕ್ಷೆಯೊಂದಿಗೆ ಮಹಾರಾಷ್ಟ್ರ ಕೆಲವು ಜಿಲ್ಲೆಗಳು ಸಂಗಮ ನಕ್ಷೆ ವೈರಲ್: ಮಹಾರಾಷ್ಟ್ರ ಜತ್ ನಲ್ಲಿ ವಾಸಿಸುವ ಮಹಾ ಕನ್ನಡಿಗಳು ಮೂಲ ಸೌಕರ್ಯಗಳಿಂದ ವಂಚಿವಾಗಿದ್ದು ರೋಸಿ ಹೋಗಿದ್ದಾರೆ.
ಇದರಿಂದ ಕರ್ನಾಟಕಕ್ಕೆ 40 ಗ್ರಾಮಗಳನ್ನು ಸೇರಿಸಿ ಎಂದು ಮಹಾರಾಷ್ಟ್ರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸುತ್ತಿದ್ದಾರೆ, ಜೊತೆಗೆ ಕನ್ನಡಾಂಬೆಯ ನಕ್ಷೆ ಜೊತೆಗೆ ಮಹಾರಾಷ್ಟ್ರದ ಐದು ಜಿಲ್ಲೆಗಳಾದ ಕೊಲ್ಲಾಪುರ, ಸಾಂಗ್ಲಿ, ಸೋಲ್ಲಾಪುರ, ಉಸ್ಮನಾಬಾದ, ಲಾತೂರ, ಜಿಲ್ಲೆಗಳನ್ನು ಹೊಂದಿಸಿ ನೂತನ ಕರ್ನಾಟಕ ನಕ್ಷೆಯನ್ನು ಮಹಾ ಕನ್ನಡಿಗರು ನಿಲನಕ್ಷೆ ಸಿದ್ಧಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಬಾರಿ ವೈರಲ್ ಆಗುತ್ತಿದೆ