ಬೆಳಗಾವಿ : 2023ರ ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನ ಬೆಳಗಾವಿಯಲ್ಲಿ ಗಿಫ್ಟ್ ಪಾಲಿಟಿಕ್ಸ್ ಜೋರಾಗಿ ನಡೆದಿದೆ ಎನ್ನಲಾಗಿದೆ.
ಚುನಾವಣೆಗೆ 5 ತಿಂಗಳು ಬಾಕಿ ಇರುವ ಹಿನ್ನೆಲೆ ವಿವಿಧ ಪಕ್ಷದ ನಾಯಕರು ಲಂಚ್ ಬಾಕ್ಸ್, ಸೀರೆ, ಕನ್ನಡಕ ವಿತರಣೆ ಮಾಡಿದ್ದಾರೆ.
ಬೆಳಗಾವಿಯಲ್ಲಿ ಹಲವು ಕಡೆ ಮತದಾರರಿಗೆ ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಲಂಚ್ ಬಾಕ್ಸ್, ಸೀರೆ, ಕನ್ನಡಕ ವಿತರಣೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆಯರಿಗೆ ಅರಿಶಿನ ಕುಂಕುಮ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿದೆ ಎನ್ನಲಾಗಿದೆ.
ಇನ್ನೂ, ಬಿಜೆಪಿ ಟಿಕೆಟ್ ಆಕಾಂಕ್ಷಿ ದಿಲೀಪ್ ಕುಮಾರ್ ಮಹಿಳೆಯರ ಓಟು ಓಲೈಕೆಗೆ ಮುಂದಾಗಿದ್ದು, ಮಹಿಳೆಯರಿಗೆ ಸೀರೆ ವಿತರಣೆ ಮಾಡಿದ್ದಾರೆ ಎನ್ನಲಾಗಿದೆ .
ಮತ್ತೋರ್ವ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಸೋನಾಲಿ ಸೋನಬರ್ತ್, ಕಣ್ಣಿನ ತಪಾಸಣೆ ಶಿಬಿರಗಳನ್ನು ಆಯೋಜಿಸಿ ಉಚಿತ ಕನ್ನಡಕ ಗಿಫ್ಟ್ ನೀಡಿದ್ದಾರೆ. ಬೆಳಗಾವಿ ಉತ್ತರ, ದಕ್ಷಿಣ ಕ್ಷೇತ್ರದ ಶಾಸಕರು ಉಚಿತ ಪುಸ್ತಕ ವಿತರಿಸಿದ್ದಾರೆ. ಶಾಸಕ ಅನಿಲ್ ಬೆನಕೆ, ಅಭಯ್ ಪಾಟೀಲ್ ಪಿಯುಸಿ ವಿದ್ಯಾರ್ಥಿಗಳಿಗೆ ನೆರವಾಗಲು ಉಚಿತ ಟೆಕ್ಸ್ಟ್ ಬುಕ್ ಹಂಚುತ್ತಿದ್ದಾರೆ.
ಇನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಯುವ ಸಮೂಹ, ಮಹಿಳಾ ಮತದಾರರನ್ನು ಗಮನದಲ್ಲಿಟ್ಟುಕೊಂಡು ಲಂಚ್ ಬಾಕ್ಸ್, ಸೀರೆ, ಕನ್ನಡಕ, ಪಿಯು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.