ಬೆಂಗಳೂರು: ಲಂಚಕ್ಕೆ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಗೃಹಸಚಿವಾಲಯದ ಹೋಮ್ಗಾರ್ಡ್ನನ್ನು ಲಂಚದ ಹಣದ ಸಹಿತ ನಗರದ ಖಾಸಗಿ ಹೋಟೆಲ್ನಲ್ಲಿ ಬಂಧಿಸಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿ ವೈದ್ಯಕೀಯ ವೆಚ್ಚದ ಬಿಲ್ಗಾಗಿ ಲಂಚ ಪಡೆಯುತ್ತಿದ್ದ ಹೋಮ್ಗಾರ್ಡ್ ಸತೀಶ್ ಎಂಬವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ವೈದ್ಯಕೀಯ ವೆಚ್ಚದ ಬಿಲ್ಗಾಗಿ ಸಂಬಂಧಪಟ್ಟವರಿಂದ ಮರುಪಾವತಿಸಲು ಕ್ರಮಕೈಗೊಳ್ಳಲು ಲಂಚಕ್ಕೆ ಬೇಡಿಕೆ ಇಡಲಾಗಿದೆ.
ಸಂಬಂಧಪಟ್ಟವರನ್ನು ಹಣ ತರುವಂತೆ ಖಾಸಗಿ ಹೊಟೇಲ್ಗೆ ಆಹ್ವಾನಿಸಲಾಗಿದೆ. ಈ ವೇಳೆ ಸತೀಶ್ ಅವರು ಲಂಚವಾಗಿ 20,000 ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.