ಮುಂಬೈ : ಭಾರತಕ್ಕೆ ಚೀನಾ ನುಗ್ಗಿದಂತೆ ಕರ್ನಾಟಕಕ್ಕೆ ನಾವು ನುಗ್ಗುತ್ತೇವೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಉದ್ಧಟತನದ ಹೇಳಿಕೆ ನೀಡಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ವಿವಾದದ ಕಿಡಿ ಹೊತ್ತಿಸುತ್ತಿದ್ದಾರೆ, ಮಹಾರಾಷ್ಟ್ರ-ಕರ್ನಾಟಕ ಯಾವುದೇ ಕ್ರ,ಮ ಕೈಗೊಂಡಿಲ್ಲ, ಬೆಳಗಾವಿಗೆ ನುಗ್ಗಲು ನಮಗೆ ಯಾರ ಅನುಮತಿ ಬೇಕಾಗಿಲ್ಲ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ನಾವು ಮಾತುಕತೆ ಮೂಲಕ ಬಗೆಹರಿಸಲು ಬಯಸಿದ್ದೇವೆ. ಆದರೆ ಕರ್ನಾಟಕ ಮುಖ್ಯಮಂತ್ರಿ ಬೆಂಕಿ ಹಚ್ಚುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ದುರ್ಬಲ ಸರ್ಕಾರವಿದೆ ಎಂದು ರಾವತ್ ವಾಗ್ದಾಳಿ ನಡೆಸಿದ್ದಾರೆ