spot_img
spot_img
spot_img
24 C
Belagavi
Thursday, June 1, 2023
spot_img

ಮಗಳ ಹುಟ್ಟುಹಬ್ಬ ಆಚರಿಸಲು ಸುವರ್ಣಸೌಧ ಬಾಡಿಗೆ ಕೊಡಿ : ಸಭಾಪತಿಗೆ ಪತ್ರ 

ಬೆಳಗಾವಿ: ಮಗಳ ಹುಟ್ಟುಹಬ್ಬ ಆಚರಿಸಲು ಸುವರ್ಣಸೌಧವನ್ನು ಬಾಡಿಗೆ ಕೊಡಿ ಎಂದು ಸಭಾಪತಿಗಳಿಗೆ ಮತ್ತು ಜಿಲ್ಲಾಧಿಕಾರಿಗೆ ತಂದೆಯೊಬ್ಬರು ಪತ್ರ ಬರೆದ ಘಟನೆ ನಡೆದಿದೆ. ಗೋಕಾಕ್​ ತಾಲೂಕಿನ ಘಟಪ್ರಭಾನ ವಕೀಲ ಮಲ್ಲಿಕಾರ್ಜುನ ಚೌಕಾಶಿ ಎಂಬುವರೇ ಪತ್ರ ಬರೆದವರಾಗಿದ್ದಾರೆ.

ನನ್ನ ಏಕೈಕ ಪುತ್ರಿಯಾದ ಮಣಿಶ್ರೀಗೆ ಜನವರಿ 30ಕ್ಕೆ 5 ವರ್ಷ ಮುಗಿದು 6ನೇ ವರ್ಷ ತುಂಬಲಿದ್ದು, ಅವಳು 1ನೇ ತರಗತಿಯ ಪ್ರವೇಶ ಪಡೆಯಬೇಕಿದೆ. ಇದು ಅವಳ ಜೀವನದ ಅಮೂಲ್ಯ ಕ್ಷಣ. ಹೀಗಾಗಿ ಅವಳ ಹುಟ್ಟುಹಬ್ಬವನ್ನು ಆಚರಿಸುವುದರೊಂದಿಗೆ ನಮ್ಮ ಭಾಗದಲ್ಲಿ ಚಿಕ್ಕ ಹೆಣ್ಣುಮಕ್ಕಳಿಗೆ ಹುಟ್ಟದಟ್ಟಿ ಮಾಡುವ ಪದ್ಧತಿಯಿದ್ದು, ಇದು ಕೂಡ ಜೀವನದಲ್ಲಿ ಒಮ್ಮೆ ಬರುವಂತಹದ್ದು. ಆದ್ದರಿಂದ ವರ್ಷದಲ್ಲಿ 15 ದಿನ ಕಲರವದಿಂದ ಕೂಡಿ ಉಳಿದ ದಿನ ಭೂತ ಬಂಗ್ಲೆಯಂತಿರುವ ಕರ್ನಾಟಕ ಸುವರ್ಣ ವಿಧಾನಸೌಧ ಸಭಾಂಗಣವನ್ನು ಬಾಡಿಗೆ ನೀಡಬೇಕು ಎಂದು ವಿನಂತಿಸಿದ್ದಾರೆ.

ಪ್ರತಿ ವರ್ಷ ಚಳಿಗಾಲದ ಅಧಿವೇಶನಕ್ಕೆ ಮಾತ್ರ ಸುವರ್ಣ ವಿಧಾನಸೌಧದ ಬಳಕೆಯಾಗುತ್ತದೆ. ಸರ್ಕಾರ ಹತ್ತು ದಿನ ಅಧಿವೇಶನಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ.

ಈ ಖರ್ಚು ಸರಿ ಹೊಂದಿಸಲು ಬಾಡಿಗೆ ಕೊಟ್ಟರೆ ಒಳ್ಳೆಯದು. ಸದ್ಯಕ್ಕೆ ಅಧಿವೇಶನ ನಡೆಯುತ್ತಿದ್ದು, ಸದನದಲ್ಲಿ ಈ ವಿಷಯವನ್ನು ಚರ್ಚಿಸಿ ಬಾಡಿಗೆ ನೀಡಬೇಕು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

Related News

ಶೆಟ್ಟರ್​, ಲಕ್ಷ್ಮಣ್ ಸವದಿ ನಮ್ಮ ನಾಯಕರು ಯಾವ ಸಮಯದಲ್ಲಿ ಏನು ಮಾಡಬೇಕೆಂದು ನಮಗೆ ಗೊತ್ತಿದೆ

ಬೆಳಗಾವಿ: ಯಾವ ಸಮಯದಲ್ಲಿ ಏನು ಮಾಡಬೇಕೆಂದು ನಮಗೆ ಗೊತ್ತಿದೆ. ನಾವು ಅವರ ಜೊತೆಗೆ ಇದ್ದೇವೆ, ಇಡೀ ಪಕ್ಷ ಅವರ ಜೊತೆ ಇದೆ. ಜಗದೀಶ್​ ಶೆಟ್ಟರ್, ಲಕ್ಷ್ಮಣ ಸವದಿ ನಮ್ಮ ಪಕ್ಷದ ನಾಯಕರು ಎಂದು...

ರಾಜ್ಯದ ವಿವಿದೆಡೆ ಲೋಕಾಯುಕ್ತ ದಾಳಿ

ಬೆಂಗಳೂರು:  ಅತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು(ಮೇ 31) ಬೆಳ್ಳಂಬೆಳಗ್ಗೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದರೆ, ಮತ್ತೊಂದೆಡೆ ರಾಜ್ಯದ ವಿವಿದೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತುಮಕೂರಿನ ಕೆಐಎಡಿಬಿ ಅಧಿಕಾರಿ ಮನೆ ಮೇಲೆ ದಾಳಿ ತುಮಕೂರಿನ ಕೆಐಎಡಿಬಿ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -