ವರದಿ : ರತ್ನಾಕರ ಗೌಂಡಿ
ಬೆಳಗಾವಿ : ರಾಜ್ಯದ ಕುರಿಗಾರರಿಗೆ ಅಮೃತ ಸ್ವಾಭಿಮಾನಿ ಕುರಿಗಾಗಿ ಯೋಜನೆಯಲ್ಲಿ ನೀಡಲಾಗುವ ಸೌವಲತ್ತುಗಳನ್ನು ಕುರಿ ಮತ್ತು ಆಡು ಸಾಕಾಣಿಕೆ ಮಾಡುವ ರೈತರು ಕಂಪನಿಗಳ ಮೂಲಕ ಅನುಷ್ಠಾನಗೊಳಿಸಬೇಕೆಂದು ಕರ್ನಾಟಕ ಕುರಿಗಾರಿ ರೈತ ಉತ್ಪಾದಕರ ಕಂಪನಿಗಳ ಹೋರಾಟ ವೇದಿಕೆ ಆಗ್ರಹಿಸಿದೆ.
ನಗರದಲ್ಲಿಂದು ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾರುತಿ ಮರಡಿ ಅವರು, ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರದ ಸಹಯೋಗದದಿಂದ ಅನುಷ್ಠಾನಗೊಳ್ಳುತ್ತಿರುವ ದೂರದೃಷ್ಟಿ ಯೋಜನೆಯಾಗಿದೆ.
ಕುರಿಗಾರರ ಬದುಕಿನಲ್ಲಿ ಆಶಾಕಿರಣ ತರುವಂತಾಗಿದೆ , ಸರ್ಕಾರ ಇನ್ನೊಂದು ಮಹತ್ವದ ಯೋಜನೆ ಎಂದರೆ ಕರ್ನಾಟಕದ ಎಲ್ಲಾ ಕುರಿ ಮತ್ತು ಆಡು ಸಾಕಾಣಿಕೆ ರೈತ ಉತ್ಪಾದಕರ ಕಂಪನಿಗಳ ನಿರ್ಮಿಯಿಸುವುದು, ರಾಜ್ಯದಲ್ಲಿ 75 ಹೆಚ್ಚು ಇಂತಹ ಎಫ್. ಪಿ .ಓ .ಗಳು ಕಾರ್ಯ ಆರಂಭಗೊಂಡಿದ್ದು ಇಲ್ಲಿ ಸಾವಿರಾರು ಜನ ಬಡ ಕುರಿಗಾರರು ಮತ್ತು ಆಡು ಉತ್ಪಾದಕರು ಸದಸ್ಯರಾಗಿದ್ದು ಮುಖ್ಯವಾಗಿ ಉತ್ಪಾದನೆ ಮತ್ತು ಮಾರುಕಟ್ಟೆಯ ಪ್ರಬಲವಾದ ವೇದಿಕೆಯ ರೂಪಿಸಿಕೊಳ್ಳುತ್ತಿದೆ.
ಮುಂಬರುವ ದಿನಗಳಲ್ಲಿ ರೈತ ಉತ್ಪಾದಕ ಸಂಸ್ಥೆಗಳು ಪ್ರಮುಖವಾಗಿ ಆರ್ಥಿಕತೆಯನ್ನು ಬಲಪಡಿಸುವ ದಿಕ್ಕಿನಲ್ಲಿ ವೇದಿಕೆ ಸಾಗುತ್ತದೆ.
ಆದರೆ ದುರಾದೃಷ್ಟದಿಂದಾಗಿ ಪಶು ವೈದ್ಯಕೀಯ ಇಲಾಖೆಯಿಂದ ಕುರಿ ನಿಗಮ ಮೂಲಕ ಅನುಷ್ಠಾನಗೊಳ್ಳುವ ಯಾವುದೇ ಯೋಜನೆಯನ್ನು ಎಫ್. ಪಿ. ಓ.ಗಳಿಗೆ ನೀಡಲಾಗುತ್ತಿಲ್ಲ ಇದು ವಿಚಿತ್ರ ಮತ್ತು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳು ಮತ್ತು ಯೋಜನೆಗಳು ಎಫ್ ಪಿ ಓ ಗಳಿಗೆ ದೊರಕುವ ಹಾಗೆ ಆದೇಶ ನೀಡಬೇಕೆಂದು ಈ ಮೂಲಕ ಸರ್ಕಾರವನ್ನು ಅಗ್ರಹಿಸಿದ್ದರು.
ಈ ಸಂದರ್ಭದಲ್ಲಿ ಬಿ.ಕೆ ಅಂತನಿ, ವಿನಾಯಕ್ ಕೊಟ್ಟೋರಿ ಬಸವರಾಜ್ ಗುಳಬಾಳ, ಶಾಖತ್ ಅಲಿ, ಸಿದ್ದಲಿಂಗ ಸೌಜನ್ ಉಪಸ್ಥಿತರಿದ್ದರು.