ಬೆಳಗಾವಿ: ಮೂರು ತಿಂಗಳುಗಳಲ್ಲಿ ಚುನಾವಣೆ ಬರುತ್ತಿದ್ದು ವೈಯಕ್ತಿಕ ಟೀಕೆಗಳಿಂದ ಕುಟುಂಬದ ಗೌರವಕ್ಕೆ ದಕ್ಕೆ ತರುವುದನ್ನು ಬಿಟ್ಟು ರಮೇಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಡಿಕೆಶಿ ರಾಜಕೀಯ ಹೋರಾಟ ಮಾಡಲಿ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಲಹೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಜಾರಕಿಹೊಳಿ, ಹೆಬ್ಬಾಳ್ಕರ್ ಮತ್ತು ಡಿಕೆಶಿ ಕುಟುಂಬಗಳು ರಾಜಕೀಯದಲ್ಲಿ ತಮ್ಮದೆಯಾದ ಸಾಮ್ರಾಜ್ಯ ಕಟ್ಟಿಕೊಂಡ ಕುಟುಂಬಗಳಾಗಿದ್ದು ಇದೀಗ ವೈಯಕ್ತಿಕ ಟೀಕೆ ಮತ್ತು ದ್ವೇಷ ಭಾವನೆಯಿಂದ ಗೌರವಕ್ಕೆ ದಕ್ಕೆ ಬರುವಂತೆ ಮಾಡುತ್ತಿದ್ದು ಸಿಡಿ ಪ್ರಕರಣಗಳ ಬಗ್ಗೆ ಮಾತನಾಡವುದನ್ನು ಬಿಟ್ಟು ರಾಜಕೀಯ ಹೋರಾಟ ಮಾಡುವುದರತ್ತ ಗಮನ ನೀಡಲಿ ಎಂದರು.
ವೈಯಕ್ತಿಕ ಟೀಕೆಗಳಿಂದ ತಮಗಷ್ಟೇ ಅಲ್ಲದೆ ತಮ್ಮ ಕುಟುಂಬಗಳಿಗೆ ಮತ್ತು ಕ್ಷೇತ್ರದಲ್ಲಿರುವ ಜನತೆಗೂ ಡ್ಯಾಮೆಜಗಳಾಗುತ್ತಿದ್ದು ಅದನ್ನು ಅರ್ಥ ಮಾಡಿಕೊಳ್ಳುವ ಕೆಲಸ ಮಾಡಬೇಕು. ಈಗಾಗಲೆ ಬೆಳೆದು ನಿಂತಿರುವ ಈ ಕುಟುಂಬಗಳು ಮತ್ತಷ್ಟು ಉತ್ತಮ ಕೆಲಸಗಳನ್ನು ಮಾಡುವುದರ ಮೂಲಕ ಹೆಸರು ಮಾಡಲಿ. ಚುನಾವಣೆಯಲ್ಲಿ ನಮ್ಮನ್ನು ಅವರು ಸೋಲಿಸಲಿ ಇಲ್ಲವೆ ಅವರನ್ನು ನಾವು ಸೋಲಿಸಲಿ ಅದು ಮತದಾರರ ಮತಗಳಿಂದ ನಿರ್ಣಯವಾಗುತ್ತದೆ ಅದನ್ನು ಬಿಟ್ಟು ಟೀಕೆಗಳಿಂದ ಏನು ಪ್ರಯೋಜನವಿಲ್ಲ ಎಂದರು.
ಸಿಡಿ ಪ್ರಕರಣದಲ್ಲಿ ರಮೇಶ ಜಾರಕಿಹೊಳಿ ಅವರೊಂದಿಗೆ ನಾವು ನಿಂತಿದ್ದೇವ ಈಗ ಮತ್ತೆ ಸಾರ್ವಜನಿಕ ಚರ್ಚೆ ಬೇಡ ರಾಜಕೀಯ ಅಳಿವು ಉಳಿವು ಕ್ಷೇತ್ರದ ಜನರ ನಿರ್ಣಯವಾಗಿದ್ದು ಅದು ಯಾರ ಕೈಯಲ್ಲೂ ಇಲ್ಲ ದ್ವೇಷ ರಾಜಕಾರಣ ಬಿಟ್ಟು 2023ರ ಚುನಾವಣೆ ಮಾಡೋಣ ಈ ಭಾರಿಯೂ ಬಿಜೆಪಿ ಆಡಳಿತಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.