ವಿಶೇಷ ಲೇಖನ : ರತ್ನಾಕರ ಗೌಂಡಿ, ಬೆಳಗಾವಿ
ಇಂದು 67ನೇ ಕನ್ನಡ ರಾಜ್ಯೋತ್ಸವ, ಈ ಶುಭ ಸಂದರ್ಭದಲ್ಲಿ ಕನ್ನಡ ನಾಡು ನುಡಿ ಗಾಗಿ ಹೋರಾಡಿದ ತ್ಯಾಗ ಬಲಿದಾನ ನೀಡಿದ ಕನ್ನಡದ ಕಟ್ಟಾಳುಗಳಿಗೆ ಪಂಚಾಯತ್ ಕಾವಲು ಸಂಘ ಹಾಗೂ ಪಂಚಾಯತ್ ಸ್ವರಾಜ್ ಸಮಾಚಾರ ಪತ್ರಿಕೆ ವತಿಯಿಂದ ಶತಶತ ನಮನಗಳನ್ನು ಸಲ್ಲಿಸುತ್ತವೆ.
ಕರ್ನಾಟಕ ಏಕೀಕರಣ ಇದು ಒಂದು ರಣರೋಚಕ ಕಥೆಯಾಗಿದೆ. ಈ ಕುರಿತು ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ಹಾಕೋಣ ಬನ್ನಿ
ಕರ್ನಾಟಕ ಏಕೀಕರಣ ಬೆಳಗಾವಿ ನೆಲದಿಂದಲೇ 1924 ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಹುಯಿಲಗೋಳ ನಾರಾಯಣ್ ರಾಯರು ಅವರು ರಚಿಸಿದ ಉದಯವಾಗಲಿ ನಮ್ಮ ಚೆಲುವು ಕನ್ನಡ ನಾಡು ಹಾಡಿನೊಂದಿಗೆ ಕರ್ನಾಟಕ ಏಕೀಕರಣಕ್ಕೆ ನಾಂದಿ ಹಾಡಲಾಯಿತು.
ಇತಿಹಾಸದ ಪುಟಗಳನ್ನು ಹಿಂದಿರುಗಿದಾಗ ಕರ್ನಾಟಕ ಏಕೀಕರಣ ಬಂದ ಹಾದಿಯನ್ನು ನಾವು ನೋಡಿದರೆ ಬ್ರಿಟಿಷರ ಆಳ್ವಿಕೆಯಿಂದ ಭಾರತ ಸ್ವತಂತ್ರದ ನಂತರ ದೇಶದ ಮುಂದೆ ಅನೇಕ ಸವಾಲುಗಳು ಎದುರಾಗಿದ್ದು. 565 ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸುವುದು ಒಂದು ಸವಾಲೇ ಆಗಿತ್ತು. ಅದರ ಜೊತೆ ಭಾಷಾವಾರು ಪ್ರಾಂತಗಳ ರಚನೆ ಗಡಿ ಗುರುತಿಸುವುದು ದೇಶದ ಮುಂದೆ ಅತಿ ದೊಡ್ಡ ಸವಾಲಾಗಿ ನಿಂತಿದ್ದವು. 1956 ರಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿ ಮೈಸೂರು ರಾಜ್ಯವೆಂದು ಕರೆಯಲಾಯಿತು.
ಟಿಪ್ಪು ಸುಲ್ತಾನ್ ನಿಧನದ ನಂತರ ಕನ್ನಡಿಗರು ಒಂದಾಗಬೇಕು ಕನ್ನಡ ಪ್ರತ್ಯೇಕ ರಾಜ್ಯವಾಗಬೇಕೆಂಬ ಕನ್ನಡಿಗರ ಬಯಕೆಯಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಕರ್ನಾಟಕ ಏಕೀಕರಣಕ್ಕಾಗಿ ಅನೇಕ ಕನ್ನಡಿಗರ ಚಳುವಳಿಗಳು ಹೋರಾಟಗಳನ್ನು ಮಾಡುತ್ತಾ ಕರ್ನಾಟಕದ ಏಕೀಕರಣಕ್ಕಾಗಿ ಅನೇಕ ಪ್ರಸಂಗಗಳು ಎದುರಾದವು. ಅದರಂತೆ ಮೊದಲ ಬಾರಿಗೆ ಕರ್ನಾಟಕ ರಾಜ್ಯ ರಚನೆ ಆಗಬೇಕೆಂಬ ಬಯಕೆಯಿಂದ ಬ್ರಿಟಿಷ್ ಅಧಿಕಾರಿಗಳಾದ ಸರ್ ವಾಲ್ಟರ್ ವಿಲಿಯಮ್ , ಸರ್ ಥಾಮಸ ಮನ್ರೋ ಗ್ರೀನ್ ಹಿಲ್,ಆರ್ ಗ್ರಾಂಟ್, ಡಬ್ಲ್ಯೂ ಎ.ರಸಲ್. ಜೆ.ಎಫ್.ಪೀಟರ್ ಬ್ರಿಟಿಷ್ ಅಧಿಕಾರಿಗಳು ಸಾಥ್ ನೀಡಿ ಕನ್ನಡಿಗರಾದ ಚನ್ನಬಸಪ್ಪ, ರಾ. ಹ. ದೇಶಪಾಂಡೆ ಶ್ರೀನಿವಾಸರಾವ್ ಹಾಲೂರು, ವೆಂಕಟರಾಯರು ಮೊದಲಾದ ಕನ್ನಡಿಗರು ಕನ್ನಡ ನಾಡು ಒಂದುಗೂಡಬೇಕೆಂಬ ಬಯಕೆಯಿಂದ ಮುಂದಾಳತ್ವವನ್ನು ವಹಿಸಿಕೊಂಡು ಕರ್ನಾಟಕ ಏಕೀಕರಣ ಸಲುವಾಗಿ ಅನೇಕ ಸಂಘ ಸಂಸ್ಥೆಗಳು ತನ್ನದೇ ಆದಂತಹ ಒಂದು ಮಹತ್ವದ ಪಾತ್ರಗಳನ್ನು ನಿಭಾಯಿಸಿದ್ದರು.
ಧಾರವಾಡದ ವಿದ್ಯಾವರ್ಧಕ ಸಂಘ ಕನ್ನಡ ಶಿಕ್ಷಣ ಮತ್ತು ಕನ್ನಡ ಪುಸ್ತಕಗಳ ಭಂಡಾರವನ್ನು ಹೊರ ತಂದಿತು. ಇದರ ಭಾಗವಾಗಿ 1907ರಲ್ಲಿ ಧಾರವಾಡ ಅಖಿಲ ಕರ್ನಾಟಕ ಗ್ರಂಥಕರ ಮೊದಲು ಸಮ್ಮೇಳನವನ್ನು ಧಾರವಾಡದಲ್ಲಿ ನಡೆಸಲಾಯಿತು.
ನಂತರ ಕನ್ನಡ ಸಾಹಿತ್ಯ ಪರಿಷತ್ 1915 ರಲ್ಲಿ ಸ್ಥಾಪನೆಗೊಂಡಿತು. ನಂತರ ದಿನಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲು ಕನ್ನಡ ಏಕೀಕರಣಕ್ಕೆ ದೊಡ್ಡ ಶಕ್ತಿಯನ್ನು ತುಂಬಿದವು.
ದುರಂತ ಅಂದರೇ ಕನಾ೯ಟಕ ಏಕೀಕರಣವನ್ನು ಸಂದರ್ಭದಲ್ಲಿ ಅದನ್ನು ಸಮರ್ಥವಾಗಿ ನಿಭಾಯಿಸಿದೆ ಇರುವುದರಿಂದಾಗಿ ಕರ್ನಾಟಕದ ಶೇ. 70ಕ್ಕಿಂತ ಹೆಚ್ಚು ಕನ್ನಡಿಗರ ಭೂಭಾಗ ನೆರೆ ರಾಜ್ಯಗಳಲ್ಲಿ ಉಳಿದುಕೊಂಡಿತ್ತು. ಕಾಸರಗೋಡು ಕೇರಳದ ಪಾಲಾದರೆ ಬಳ್ಳಾರಿಯ ಅದೋನಿ, ಆಲೂರು, ರಾಯದುರ್ಗ, ಮಡಕಶಿರಾ ತಾಲೂಕುಗಳು ಆಂಧ್ರದ ಪಾಲವಾದು ಈ ಕಡೆ ಅಕ್ಕಲಕೋಟ್ ಸೋಲಾಪುರ್ ಲಾತೂರ್ ಮಹಾರಾಷ್ಟ್ರ ಸೇರಿದವು. ಬೆಂಗಳೂರಿನ ಹೊಸೂರ್ ತಮಿಳುನಾಡಕ್ಕೆ ಸೇರಿತು ಬಸವಕಲ್ಯಾಣ ಮತ್ತು ಬಳ್ಳಾರಿ ಮಹಾರಾಷ್ಟ್ರ ಮತ್ತು ಆಂಧ್ರ ಪಾಲಾಗಿದ್ದವು. ಅವುಗಳನ್ನು ಬಹಳ ಜಾಣ್ಮೆಯಿಂದಾಗಿ ಮತ್ತೆ ಕರ್ನಾಟಕದ ಸೇರಿಸಿಕೊಳ್ಳಲಾಯಿತು.
ಈ ರೀತಿ ಕರ್ನಾಟಕ ರಾಜ್ಯ ರೂಪುಗೊಂಡಿತು. ಇದನ್ನು ಮೈಸೂರು ಪ್ರಾಂತ್ಯ ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿತ್ತು 1973 ನವೆಂಬರ್ 1 ರಂದು ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಮಾಡಿ ಪ್ರಾಚೀನ ಕಾಲದಿಂದ ಕರ್ನಾಟಕಕ್ಕೆ ಇರುವ ಹೆಸರನ್ನು ಪುನ ಸ್ಥಾಪಿಸಲಾಯಿತು.
ಈ ಕಡೆ ಕರ್ನಾಟಕ ಎಂದು ನಾಮಕರಣಗೊಂಡು, 60 ವರ್ಷಗಳೆ ಕಳೆದು ಹೋದವು. ಆದರೂ ಕೂಡ ಮಧ್ಯ ಕರ್ನಾಟಕ, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಎಂದು ತಾರತಮ್ಯತೆದಲ್ಲಿ ಕನ್ನಡಿಗರು ಅಭಿವೃದ್ಧಿ ದೃಷ್ಟಿಯಿಂದ ವಂಚಿತರಾಗಿದ್ದಾರೆ.
ಕಲ್ಯಾಣ ಕರ್ನಾಟಕವಾಗಿದೆ. ಕಿತ್ತೂರು ಕರ್ನಾಟಕ ಯಾವಾಗ ಘೋಷಣೆಯಾಗಲಿದೆ? ಎಂಬುದು ಕನ್ನಡಿಗರು ಆತುರದಿಂದ ಕಾಯುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ವ್ಯಾಖ್ಯಾನಕ್ಕೆ ಅರ್ಥವೇ ಇಲ್ಲದಂತಾಗಿದೆ. ಕನ್ನಡಿಗರ ಅಭಿವೃದ್ಧಿಗಾಗಿ ಕನ್ನಡಿಗರ ಏಳಿಗೆಗಾಗಿ ಅನೇಕ ಆಯೋಗಗಳು ವರದಿಗಳು ಸೃಷ್ಟಿ ಆದರೂ ಕೂಡ ಜಾರಿಗೆ ಆಗದೆ ನಿಂತಿವೆ. ಆಡಳಿತ ಭಾಷೆ ಕನ್ನಡ ಭಾಗವಾಗಬೇಕು ಶಿಕ್ಷಣ ದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು.
ಕಡ್ಡಾಯವಾಗಿ ಕನ್ನಡ ನೆಲದಲ್ಲಿ ಕನ್ನಡವೇ ಇರಬೇಕೆಂಬುದು ಕನ್ನಡಿಗರ ಆಸೆ ಆಗಿದೆ.
ಸಿರಿಗನ್ನಡಂ ಗೆಲ್ಗೆ
ಸಿರಿಕನ್ನಡಂ ಬಾಳ್ಗೆ
ಜೈ ಭುವನೇಶ್ವರಿ
ಜೈ ಕನ್ನಡಾಂಬೆ