ಕರ್ನಾಟಕ ರಾಜ್ಯಕ್ಕೆ ಡಾ|| ಅಂಬೇಡ್ಕರ್ ನಾಮಕರಣ ಮಾಡಬೇಕೆಂದು ಮಾಜಿ ಸಚಿವ ಶಾಸಕ ರಮೇಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.
ಇಂದು ಬೆಳಗಾವಿ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ವಿಜಯಪುರ ಜಿಲ್ಲೆಯ ಹೆಸರನ್ನು ಜಗದ್ಗುರು ಬಸವೇಶ್ವರ ಹೆಸರಿನಲ್ಲಿ ಬದಲಾವಣೆ ಮಾಡಬೇಕೆಂದು ಸರ್ಕಾರ ಆಲೋಚನೆಯಲ್ಲಿದೆ ಎಂಬ ಪ್ರಶ್ನೆಕ್ಕೆ ಉತ್ತರಿಸಿದ ಮಾಜಿ ಸಚಿವ ಇತಿಹಾಸ ಓದಿದ್ದೇವೆ ಆದರೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮ ಮಧ್ಯದಲ್ಲಿ ಇದ್ದು ಸಮಾಜ ಬದಲಾವಣೆ ಮಾಡಿರುವಂತಹ ಮಹಾನ್ ಮಾನವತವಾದಿ ಅವರು ಆದ್ದರಿಂದ ಕರ್ನಾಟಕ ರಾಜ್ಯಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನಾಡು ಎಂದು ನಾಮಕರಣ ಮಾಡಲು ನನ್ನ ಆಗ್ರಹ ಇದೆ. ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದರು.