ಚಿತ್ರದುರ್ಗ: ಕೆಲವರು ಮಳೆ ಬಾರದಿರಲಿ ಎಂದು ಹೇಳಬಹುದು. ನಾವು ಮಳೆ ಬರಲಿ, ಕೆರೆ ತುಂಬಲಿ ಅನ್ನುವವರು. ಕಾವೇರಿ ನೀರು ತುಂಬಿ ತಮಿಳುನಾಡಿಗೆ (Tamil Nadu) ಜಾಸ್ತಿ ಹೋಗಲಿ. ಮೇಕೆದಾಟು ಯೋಜನೆ ಬರಲಿ ಎಂಬುದು ನನ್ನ ಪ್ರಾರ್ಥನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (D K Shivakumar) ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರು (Bengaluru) ನಗರದಲ್ಲಿ ಮಳೆಯಿಂದ ಅವಾಂತರ ಆಗಿದೆ. ಕೆಲವರು ತಳಮಟ್ಟದಲ್ಲಿ ಮನೆ ಕಟ್ಟಿದ್ದು ಇದರಿಂದ ತೊಂದರೆಯಾಗಿದೆ. ಅಧ್ಯಯನಕ್ಕೆ ಸೂಚಿಸಿದ್ದೇನೆ, ಸಮಸ್ಯೆ ಸರಿಪಡಿಸೋಣ ಎಂದರು.
ರಾಜ್ಯದಲ್ಲಿ ಮಳೆಯಿಂದಾಗಿ ಬೆಳೆ ಹಾನಿ ವಿಚಾರವಾಗಿ ಮಾತನಾಡಿ, ಮೊದಲು ಮಳೆ ಬರಲಿ ಪರಿಹಾರ ಮುಖ್ಯ ಅಲ್ಲ. ಕೇಂದ್ರ ಪರಿಹಾರ ಕೊಟ್ಟರೆ ನಾವು ಸಹಾಯ ಮಾಡುತ್ತೇವೆ ಎಂದು ಹೇಳಿದರು.
ಸಿ.ಪಿ ಯೋಗೇಶ್ವರ್ (C P Yogeshwar) ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆಂದು ಎಂಬ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಯೋಗೇಶ್ವರ್ ನನ್ನ ಸಂಪರ್ಕದಲ್ಲಿ ಇಲ್ಲ. ಕುಮಾರಸ್ವಾಮಿಗೆ ಏನೇನೋ ಮಾಹಿತಿ ಇರಬಹುದು. ದಳದವರು, ಬೇರೆ ಪಕ್ಷದವರು ಸಂಪರ್ಕದಲ್ಲಿ ಇರಬಹುದು ಎಂದು ತಿರುಗೇಟು ನೀಡಿದ್ದಾರೆ.