ಬೆಳಗಾವಿಯಲ್ಲಿ ಮತ್ತೆ ಚಿರತೆ ಬಂದಿರುವ ಶಂಕೆ ವ್ಯಕ್ತವಾಗುತ್ತಿದೆ. ಅನುಗೋಳ ಪ್ಲಾಟಾನಂ ಜುಬ್ಲಿ ಗ್ರೌಂಡ್ ನಲ್ಲಿ ಚಿರತೆಯ ಪಾದವನ್ನು ಹೋಲುವ ಹೆಜ್ಜೆಗುರುತುಗಳು ಕಂಡು ಬಂದಿದ್ದು ಸ್ಥಳೀಯರು ಆತಂಕದಲ್ಲಿದ್ದಾರೆ.
ಜುಬ್ಲಿ ಮೈದಾನದಲ್ಲಿ ಚಿರತೆಯು ಓಡಾಡಿದ ಹೆಜ್ಜೆಗುರುತುಗಳು ಕಂಡುಬಂದಿದ್ದು ಜನರು ಭಯಬೀತರಾಗಿದ್ದಾರೆ. 4 ರಿಂದ 5 ಶ್ವಾನಗಳು ಹಾಗೂ ಮೇಕೆಗಳು ನಾಪತ್ತೆಯಾಗಿದ್ದು ಚಿರತೆಯೆ ಹೊತ್ತೊಯ್ದಿರಬಹುದು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಚಿರತೆಯ ಕುರಿತು ಊಹಾಪೋಹಗಳು ಹೆಚ್ಚುತ್ತಿದ್ದು ಇದನ್ನು ಸೂಕ್ತವಾಗಿ ಅರಣ್ಯ ಇಲಾಖೆ ಶೋಧಿಸಬೇಕಾಗಿದೆ.