ಬೆಳಗಾವಿ: ಇಂದು ಬೆಳಗ್ಗೆ ಹಿಂಡಲಗಾ ಡಬಲ್ ರಸ್ತೆಯ ಮಧ್ಯೆ ಚಿರತೆ ಮತ್ತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮಿಣ ಭಾಗದ 22 ಶಾಲೆಗಳಿಗೆ ಮತ್ತೆ ರಜೆ ನೀಡಲಾಗಿದೆ.
ಕಳೆದ ವಾರವೂ ಈ ಭಾಗದ ಶಾಲೆಗಳಿಗೆ ರಜೆ ನೀಡಲಾಗಿತ್ತು. ಚಿರತೆ ಕಾಣಿಸದೆ ಇದ್ದಾಗ ಮತ್ತೆ ಶಾಲೆಗಳನ್ನು ಆರಂಭಿಸಲಾಗಿತ್ತು.
ನಡು ರಸ್ತೆಯಲ್ಲೇ ಚಿರತೆ ದಾಟುತ್ತಿರುವ ದೃಶ್ಯವನ್ನು ಬಸ್ ಚಾಲಕ ಮೊಬೈಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದರಿಂದ ಚಿರತೆ ನಗರದಲ್ಲೇ ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ 22 ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.