spot_img
spot_img
spot_img
28.1 C
Belagavi
Thursday, September 29, 2022
spot_img

ನಗರದ ವಿವಿಧ ಕಡೆಗಳಲ್ಲಿ ಅಭಿವೃಧ್ದಿ ಕಾಮಗಾರಿಗಳಿಗೆ ಶಾಸಕ ಅನಿಲ ಬೆನಕೆ ಚಾಲನೆ 

spot_img

ಬೆಳಗಾವಿ : ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದಡಿಯಲ್ಲಿ ಬೆಳಗಾವಿಯ ಹನುಮಾನ ನಗರ ಟಿ.ವಿ ಸೆಂಟರ್‍ನ ಗಣಪತಿ ಮಂದಿರ ಹತ್ತಿರದಲ್ಲಿ ಶೌಚಾಲಯ ನಿರ್ಮಾಣ ಹಾಗೂ ಮಹಾನಗರ ಪಾಲಿಕೆಯ 15ನೇ ಹಣಕಾಸು ಯೋಜನೆಯಡಿಯಲ್ಲಿ ಟಿ.ವಿ. ಸೆಂಟರ್ ಹತ್ತಿರದ ಉದ್ಯಾನವನದಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಕಾಮಗಾರಿಯನ್ನು ಕೈಗೊಳ್ಳಲು ಭೂಮಿ ಪೂಜೆಯನ್ನು ಸಲ್ಲಿಸಿದರು.

ನಂತರದಲ್ಲಿ ಶಿವಬಸವ ನಗರದ ಪಶುಪತಿನಾಥ ದೇವಾಲಯದ ಹತ್ತಿರದಲ್ಲಿ ಮಹಾನಗರ ಪಾಲಿಕೆಯ 15 ನೇ ಹಣಕಾಸು ಯೋಜನೆಯಡಿಯಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಿವಬಸವ ನಗರದ ನಗರ ಸೇವಕಿ ರೇಖಾ ಮೋಹನ ಹೂಗಾರ, ರಾಜು ದೇಸಾಯಿ , ಶಾಂತಿನಾಥ ಬಡವನ್ನವರ, ಮಯೂರ ಕಾಪಸೆ, ಹನುಮಾನ ನಗರ ಟಿ.ವಿ. ಸೆಂಟರ್‍ನ ಮಾರುತಿ ಕಣಬರ್ಗಿ, ಜಯವಂತ ಕಲಾಲ, ವಿಜಯ ಕೊಡಗನೂರ (ಬಿ.ಜೆ.ಪಿ. ಉತ್ತರ ಮಂಡಲ ಅಧ್ಯಕ್ಷರು), ಅಶೋಕ ಥೋರಾಟ, ವಿನೋದ ಲಂಗೋಟಿ, ಅನಿಲ ಹುಕ್ಕೇರಿ, ಸಾಗರ ಕಡೇಮನಿ, ರವಿ ಪಾಟೀಲ, ಭೂಷಣ ಕಡೋಲಕರ, ಎ.ಎಮ್. ಪಾಟೀಲ ಹಾಗೂ ಇತರ ರಹವಾಸಿಗಳು ಉಪಸ್ಥಿತರಿದ್ದರು.

 

spot_img

Related News

ಮೋದಿ ಅವರ ನೇತೃತ್ವದಲ್ಲಿ 150 ಸ್ಥಾನಗಳ ಗೆಲುವ ಪಣ : ಯಡಿಯೂರಪ್ಪ 

ಶಿವಮೊಗ್ಗ: ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲುವ ಪಣ ಹೊಂದಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರ ನೇತೃತ್ವದಲ್ಲಿ ದೇಶ...

ತಾಳ್ಮೆ ಕಳೆದುಕೊಂಡು ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ : ಮಾಜಿ ಸಿಎಂ ಯಡಿಯೂರಪ್ಪ 

ಶಿವಮೊಗ್ಗ: ಇತ್ತೀಚೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಾಳ್ಮೆ ಕಳೆದುಕೊಂಡು ಹುಚ್ಚುಚ್ಚರಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ. ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ತಲೆಕೆಟ್ಟಿದೆ....

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -