spot_img
spot_img
spot_img
spot_img
spot_img
spot_img
spot_img
18.8 C
Belagavi
Tuesday, December 5, 2023
spot_img

ಕಳಸಗಿರಿ ಕೆರೆ ಪುನ:ನಿರ್ಮಾಣ ಕಾಮಗಾರಿಗೆ ಶಾಸಕ ಬೆನಕೆ ಚಾಲನೆ

ಬೆಳಗಾವಿ : ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಬಸವಣಕುಡಚಿಯಲ್ಲಿನ ಕಳಸಗಿರಿ ಕೆರೆಯನ್ನು ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಶ್ರೀ. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ (ರಿ), ಬೆಳಗಾವಿ ಹಾಗೂ ಕೆರೆ ಅಭಿವೃಧ್ದಿ ಸಮೀತಿ ಬಸವಣಕುಡಚಿ ಇವರ ಸಂಯುಕ್ತಾಶ್ರಯದಲ್ಲಿ ಕಳಸಗಿರಿ ಕೆರೆಯನ್ನು ಪುಣ: ನಿರ್ಮಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಶ್ರೀ. ಕ್ಷೇತ್ರ ಧರ್ಮಸ್ಥಳವು ಅನ್ನದಾನ, ವಿದ್ಯಾದಾನ, ಔಷಧದಾನ, ಅಭಯದಾನ ಎಂಬ ಚತುರ್ವಿದಿ ಧಾನಗಳಿಗೆ ಹೆಸರಾಗಿದ್ದು, ಜನಸಾಮಾನ್ಯರ ಮತ್ತು ಸಮುದಾಯದ ಅಭಿವೃಧ್ದಿ ಕೆಲಸಗಳನ್ನು ಕಳೆದ ನಾಲ್ಕು ದಶಕಗಳಿಂದ ಮಾಡುತ್ತಾ ಬಂದಿದ್ದು, ಈ ಸಂದರ್ಭದಲ್ಲಿ ಬಸವಣಕುಡಚಿಯ ಕಳಸಗಿರಿ ಕೆರೆಯ ಪುನಃ ನಿರ್ಮಾಣ ಕಾರ್ಯವನ್ನು ಕೈಗೊಳ್ಳುತ್ತಿರುವುದು ಸಂತಸದ ಸಂಗರಿಯಾಗಿದೆ ಎಂದರು.

ಬಸವಣಕುಡಚಿ ಗ್ರಾಮದಲ್ಲಿ ಈ ಹಿಂದಿನಗಿಂತಲೂ ಸಾಕಷ್ಟು ಅಭಿವೃಧ್ದಿ ಕೆಲಸಗಳನ್ನು ನನ್ನ ಅವಧಿಯಲ್ಲಿ ಮಾಡಲಾಗಿದ್ದು, ಶಾಸಕರ ನಿಧಿಯಡಿಯಲ್ಲಿಯೂ ಸಹ ಕಳಸಗಿರಿ ಕೆರೆ ಅಭಿವೃದ್ದಿಗೆ ಅನುದಾನವನ್ನು ನೀಡಲಾಗುವುದು ಎಂದು ಭರವಸೆಯನ್ನು ನೀಡಿದ ಅವರು ವ್ಯಯಕ್ತಿಕವಾಗಿ ಹಾಗೂ ಗ್ರಾಮಸ್ಥರ ಪರವಾಗಿ ಪದ್ಮವಿಭೂಷಣ ಡಾ. ವಿರೇಂದ್ರ ಹೆಗಡೆರವರಿಗೆ ಮತ್ತು ಮಾತೃರ್ಷಿ ಹೇಮಾವತಿ ವಿ. ಹೆಗಡೆರವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಶೀತಲ ಪಾಟೀಲ ಅಧ್ಯಕ್ಷರು ಕೆರೆ ಅಭಿವೃಧ್ದಿ ಸಮಿತಿ ಬಸವಣಕುಡಚಿ, ಪ್ರದೀಪ ಜಿ. ಶೆಟ್ಟಿ ನಿರ್ದೇಶಕರು ಶ್ರೀ. ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃಧ್ದಿ ಯೋಜನೆ ಬೆಳಗಾವಿ, ನಗರ ಸೇವಕರಾದ ಬಸವರಾಜ ಮೋದಗೇಕರ, ಮಹಾವೀರ ಪಾಟೀಲ ಅಧ್ಯಕ್ಷರು ಬಸವೇಶ್ವರ ದೇವಸ್ಥಾನ ಸಮೀತಿ ಹಾಗೂ ಧರ್ಮಸ್ಥಳ ಸಂಘ ಬಸವಣಕುಡಚಿ ಗ್ರಾಮದ ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Related News

2030 ರೊಳಗೆ ಅಪೌಷ್ಠಿಕತೆ ಗಣನೀಯ ಪ್ರಮಾಣದಲ್ಲಿ ನಿಯಂತ್ರಣ-ಸಚಿವ ದಿನೇಶ್ ಗುಂಡೂರಾವ್

ಸುವರ್ಣ ಸೌಧ ಬೆಳಗಾವಿ: ಮಹಿಳೆಯರು ಮತ್ತು ಮಕ್ಕಳಲ್ಲಿರುವ ರಕ್ತಹೀನತೆ(ಅನೀಮಿಯಾ)ವನ್ನು 2030 ರೊಳಗೆ ಸಂಪೂರ್ಣವಾಗಿ ನಿವಾರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ವಿಧಾನಪರಿಷತ್ತಿನ ಶೂನ್ಯ ವೇಳೆಯಲ್ಲಿ ಸದಸ್ಯ ನಾಗರಾಜ್...

ಆನೆ ಹಾವಳಿ ನಿಯಂತ್ರಣ ಸಿಬ್ಬಂದಿಗೆ ಹೆಚ್ಚಿನ ತರಬೇತಿ-ಸಚಿವ ಈಶ್ವರ ಖಂಡ್ರೆ

ಸುವರ್ಣ ಸೌಧ ಬೆಳಗಾವಿ: ರಾಜ್ಯದಲ್ಲಿ ಈಗಾಗಲೇ ಏಳು ಆನೆ ಕಾರ್ಯಪಡೆ ತಂಡಗಳನ್ನು ರಚಿಸಲಾಗಿದ್ದು, ಆನೆ ಹಿಡಿಯಲು ನಿಯೋಜಿಸಿರುವ ಸಿಬ್ಬಂದಿಗಳಿಗೆ ಹೆಚ್ಚಿನ ತರಬೇತಿ ನೀಡಲಾಗುವುದ ಎಂದು ಅರಣ್ಯ ,ಜೈವಿಕ ಮತ್ತು ಪರಿಸರ ಸಚಿವ ಈಶ್ವರ...

Latest News

- Advertisement -
- Advertisement -
- Advertisement -
- Advertisement -