spot_img
spot_img
spot_img
18.7 C
Belagavi
Monday, September 26, 2022
spot_img

ಮರಾಠ ಪ್ರಾಧಿಕಾರಕ್ಕೆ ನೂರು ಕೋಟಿ ಅನುದಾನ ನೀಡಬೇಕೆಂದು ಶಾಸಕ ಬೆನಕೆ ಆಗ್ರಹ

spot_img
spot_img

For Breaking News Download App

ಬೆಳಗಾವಿ : ಮರಾಠ ಪ್ರಾಧಿಕಾರಕ್ಕೆ ನೂರು ಕೋಟಿ ಅನುದಾನ ನೀಡಬೇಕೆಂದು ಶಾಸಕ ಅನಿಲ್ ಬೇನಕೆ ಆಗ್ರಹಿಸಿದ್ದಾರೆ. ನಗರದಲ್ಲಿಂದು ಸಕಲ್ ಮರಾಠ ಸಮಾಜ ಆಯೋಜಿಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಛತ್ರಪತಿ ಶಿವಾಜಿ ಮಹಾರಾಜರು ಖಡ್ಗ ದಿಂದ ಯುದ್ಧ ಮಾಡುತ್ತಿದ್ದರು ಆದರೆ ಈಗಿನ ಪರಿಸ್ಥಿತಿ ಹಂಗಿಲ್ಲ ಈಗ ಕಾಲದಲ್ಲಿ ಶಿಕ್ಷಣ ಮತ್ತು ಕಂಪ್ಯೂಟರ್ ಯುಗವಾಗಿದೆ ನಾವು ಉನ್ನತ ಶಿಕ್ಷಣ ಪಡೆದರೆ ಸಮಾಜವನ್ನು ಬಲಿಷ್ಠ ಮಾಡಲು ಸಾಧ್ಯವಾಗುತ್ತೆ ಎಂದರು.

ಈಗಿನ ಕಾಲಮಾನದಲ್ಲಿ ಅಭಿವೃದ್ಧಿ ಹಾಗೂ ಬದಲಾವಣೆ ಶಿಕ್ಷಣದಿಂದ ಮಾತ್ರ ಸಾಧ್ಯ. ಮರಾಠ ಸಮಾಜದ ಏಳಿಗೆಗಾಗಿ ನಾವೆಲ್ಲಾ ಪ್ರಯತ್ನಶೀಲರಾಗಿದ್ದೇವೆ ಬೆಳಗಾವಿ ಹಾಗೂ ಸುತ್ತಮುತ್ತಲಿನ ತಾಲೂಕಗಳಲ್ಲಿ ಮರಾಠ ಸಮಾಜ ಇದೆ ಇಂಥ ಕಾರ್ಯಕ್ರಮಗಳಿಂದಾಗಿ ನಾವು ಸಮಾಜವನ್ನು ಜಾಗೃತಗೊಳಿಸುವುದು ಮತ್ತು ಒಗ್ಗೂಡಿಸುವುದು ಸತತ ಪ್ರಯತ್ನ ಮಾಡಬೇಕಾಗಿದೆ.

ಮರಾಠ 2A ಮೀಸಲಾತಿಗಾಗಿ ನಮ್ಮ ಹೋರಾಟ ನಿರಂತರವಾಗಿದೆ. ಮೀಸಲಾತಿ ಸರ್ಕಾರ ಮಟ್ಟದಲ್ಲಿ ನಡುವಂಥ ವಿಷಯವಾಗಿರುವುದರಿಂದ ಇದರ ಬಗ್ಗೆ ಹೆಚ್ಚಿಗೆ ನಾನು ಹೇಳಲ್ಲ.

ಆದರೆ ನಾವು ಸಮಾಜದ ಋಣಿಗಳಾಗಿದ್ದೇವೆ ನಾವು ಸಮಾಜಕ್ಕೆ ಏನಾದರೂ ಕೊಡಬೇಕಾಗಿದೆ ಅನ್ನು ವಿಷಯ ಮರೆಯುವಂತದ್ದಲ್ಲ ,ಚುನಾವಣೆ ಬಂದಾಗ ಸಮಾಜವನ್ನು ಒಗ್ಗೂಡಿಸುವುದು ನಂತರ ಅವರು ಪಾಡಿಗೆ ಅವರನ್ನು ಬಿಡುವುದು ಇದು ಈ ಹಿಂದೆ ನಾಯಕರುಗಳು ರೂಡಿ ಮಾಡಿಕೊಂಡಿದ್ದರು.

ಆದರೆ ಸಮಾಜವನ್ನು ಚುನಾವಣೆಗೋಸ್ಕರ ಬಳಸಿಕೊಳ್ಳುವುದು ನಿಲ್ಲಿಸಬೇಕಾಗಿದೆ. ಈಗಿನ ಜನ ವಿದ್ಯಾವಂತರಾಗಿದ್ದಾರೆ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮ ಮೂಲಕ ಸಮಾಜವನ್ನು ಒಗ್ಗೂಡಿಸುವ ಶಕ್ತಿ ತುಂಬಲಿದೆ. ನನ್ನಗೂ ಬಲವಾಗಿ ಮಾರ್ಗದರ್ಶನ ಹಾಗೂ ಆಶೀರ್ವಾದ ಸಿಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವರದಿ : ರತ್ನಾಕರ ಗೌಂಡಿ, ಬೆಳಗಾವಿ

For Breaking News Download App

Related News

ನನಗೆ ಭಾಷೆ – ಜಾತಿ ಇಲ್ಲ, ಜನರ ಪ್ರೀತಿ ಒಂದೇ : ಶಾಸಕಿ ಅಂಜಲಿ ನಿಂಬಾಳ್ಕರ್ 

ವರದಿ : ರತ್ನಾಕರ ಗೌಂಡಿ  ಬೆಳಗಾವಿ : ಖಾನಾಪುರ್ ಪಟ್ಟಣದಲ್ಲಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ 60...

ಬೆಳಗಾವಿ : ಭೀಕರ ಅಪಘಾತದಲ್ಲಿ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವು 

ಬೆಳಗಾವಿ: ಕಾರು ಮತ್ತು ಬೈಕ್​ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್​ನಲ್ಲಿ ನಡೆದಿದೆ. ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -