spot_img
spot_img
spot_img
21.3 C
Belagavi
Sunday, October 1, 2023
spot_img

ಕೆಎಂಎಫ್ ಒಕ್ಕೂಟದಿಂದ ಹೈನುರಾಸು ಖರೀದಿ ಯೋಜನೆಗೆ ಚಾಲನೆ

ಬೆಳಗಾವಿ: ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ದಿಂದ ಹೈನುರಾಸು ಖರೀದಿ ಯೋಜನೆ ಅನುಷ್ಠಾನ ಮಾಡಲಾಗುವುದೆಂದು ಬೆಳಗಾವಿ ಜಿಲ್ಲಾ ಕೆಎಂಎಫ್ ಅಧ್ಯಕ್ಷರಾದ ವಿವೇಕ್ ವಸಂತ್ ರಾವ್ ಪಾಟೀಲ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ವರ್ಷ ರಾಜ್ಯದಲ್ಲಿ ಮತ್ತು ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ರಾಸುಗಳಲ್ಲಿ ಚರ್ಮಗಂಟು ರೋಗ ಕುಲ ಬನಸಿ ಅಂದಾಜು ರೂ.7000 ಹೈನುರಾಸಗಳು ಮರಣ ಮರಣ ಹೊಂದಿದ್ದು ಅದರಲ್ಲಿ ಬೆಳಗಾವಿ ಎರಡನೇ ಜಿಲ್ಲೆ ಆಗಿದೆ ಇದರಿಂದಾಗಿ ಹಾಲು ಉತ್ಪಾದನೆಯಲ್ಲಿ ಹಿನ್ನಡೆ ಉಂಟಾಗಿದ್ದು ಅದನ್ನು ಸರಿಪಡಿಸಲು ರಾಸು ಅಭಿವೃದ್ಧಿ ನಿಧಿ ಖಾತೆಯಿಂದ ಸಂಘಗಳಿಗೆ ಬಡ್ಡಿರಹಿತ ಸಾಲ ನೀಡಿ ಉತ್ಪಾದಕರಿಗೆ ಹೈನುರಾಸುಗಳನ್ನು ಖರೀದಿಸಲು ಅನುವು ಮಾಡಿಕೊಡುವುದು ಈ ಯೋಜನೆ ಉದ್ದೇಶವಾಗಿದೆ ಎಂದರು.

ಸದರಿ ಯೋಜನೆಯಿಂದ ಉತ್ಪಾದಕರಗಳಲ್ಲಿ ರಾಸು ಖರೀದಿ ಪ್ರಕ್ರಿಯೆ ಉತ್ತೇಜನಗೊಂಡು ಉತ್ತಮ ತಡೆಯ ಹೈನುರಾಸುಗಳು ಸಂಖ್ಯೆ ಗ್ರಾಮಗಳಲ್ಲಿ ಹೆಚ್ಚಲಿವೆ. ಈ ಮಹತ್ವದ ಯೋಜನೆಯಿಂದ ಒಕ್ಕೂಟ ಹಾಲು ಶೇಖರಣೆ ಹೆಚ್ಚಾಗಿ ರೈತರ ಆರ್ಥಿಕ ಪರಿಸ್ಥಿತಿ ಸಿದ್ದರಾಶಿ ಮುಂದಿನ ದಿನಗಳಲ್ಲಿ ಹಾಲು ಉತ್ಪಾದಕರ ಗಳಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳು ಒದಗಿಸಲು ಸಹಾಯವಾಗಲಿದೆ. ಅಲ್ಲದೆ ಜಿಲ್ಲಾಧ್ಯಂತವಾಗಿ ಕೆಮಿಕಲ್ ಮಿಶ್ರಿತ ಹಾಲು ವಿತರಣೆ ಆಗುತ್ತಿರುವುದು ತುಂಬಾ ಕಳಗೋಳಕಾರಿ ವಿಷಯವಾಗಿದೆ ಇದನ್ನು ತಡೆಗಟ್ಟಲು ನಾವು ಈಗಾಗಲೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ.

ಈ ಸಂದರ್ಭದಲ್ಲಿ ಕೆಎಂಎಫ್ ಮಾಜಿ ಅಧ್ಯಕ್ಷರು ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೈನುರಾಸಗಳನ್ನು ಖರೀದಿಸಲು ಐವತ್ತು ಸಾವಿರ ರೂಗಳಂತೆ ಬಡ್ಡಿ ರಹಿತ ಸಾಲವನ್ನು ನಾವು ನೀಡುತ್ತಿದ್ದೇವೆ ಇದರಿಂದಾಗಿ ಹೆಚ್ಚಿನ ಪ್ರಮಾಣ ಹಾಲು ಉತ್ಪಾದನೆ ಆಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೆಮಿಕಲ್ ಮಿಶ್ರಿತ ಹಾಲು ಮಾರಾಟದಿಂದ ಆಗುವ ಪರಿಣಾಮವನ್ನು ಸರ್ಕಾರ ಗಮನ ತೆಗೆದುಕೊಳ್ಳಬೇಕಾಗಿದೆ ಈ ಸಂದರ್ಭದಲ್ಲಿ ಒತ್ತಾಯಿಸಿದರು ಕೆಎಂಎಫ್ ನಿರ್ದೇಶಕ ಬಾಬು ಬಸ್ವಂತ ಕಟ್ಟಿ, ಸೋಮಲಿಂಗಪ್ಪ ಶಿವಪ್ಪ ಮುಗಳಿ ಕಲ್ಲಪ್ಪ, ನಿಂಗಪ್ಪ ಗಿರನ್ನವರ್, ಅಪ್ಪ ಸಾಹೇಬ್ ಪಾಂಡುರಂಗ ಅವತಾಡೆ ,ವಿರುಪಾಕ್ಷ ಬಾಳಪ್ಪ ಈಟಿ ,ಸವಿತಾ ಸುರೇಶ್ ಖಾನಾಪುರೆ  ಹಾಗೂ ಪದನಿಮಿತ್ತ ಕಾರ್ಯದರ್ಶಿಗಳು ಕೃಷ್ಣಪ್ಪ ಎಂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Related News

ಸರಕಾರದ ಜೊತೆ ಎಲ್ಲ ಸಮಾಜದವರೂ ಇದ್ದಾರೆ – ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಸಮುದಾಯದ ಬೆಂಬಲ ಸಿಕ್ಕಿದೆ. ಕೇವಲ ಒಂದು ಸಮುದಾಯದ ಬೆಂಬಲದಿಂದ ಅಧಿಕಾರಕ್ಕೇರಿಲ್ಲ. ಎಲ್ಲಾ ಸಮಾಜದವರೂ ಸರಕಾರದೊಂದಿಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್...

ನಿಮ್ಮ ಆಸ್ತಿಗಳ ಮೌಲ್ಯಗಳನ್ನು ಅಪಮೌಲ್ಯ ಮಾಡಬೇಡಿ ನೈಜ್ಯ ಬೆಲೆಗೆ ವ್ಯವಹಾರ ಮಾಡಿ

ಬೆಳಗಾವಿ: ಕರ್ನಾಟಕ ರಾಜ್ಯ ಸರ್ಕಾರ ಸ್ಥಿರ ಆಸ್ತಿಗಳು ಮಾರ್ಗಸೂಚಿ ಬೆಲೆ ಪರಿಷ್ಕರಣೆ ಅಕ್ಟೋಬರ್ ಒಂದರಿಂದ ಶೆ. 10%ರಿಂದ 30%ವರೆಗೆ ಹೆಚ್ಚಳ ಮಾಡುವುದಾಗಿ ಆದೇಶ ಹೊರಡಿಸಿದೆ. ಅದರ ಅಂಗವಾಗಿ ಬೆಳಗಾವಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -