ವರದಿ : ರತ್ನಾಕರ್ ಗೌಂಡಿ
ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಉಚಗಾಂವ ಗ್ರಾಮದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮೃಣಾಲ ಹೆಬ್ಬಾಳಕರ್ ಬುಧವಾರ ಭೂಮಿ ಪೂಜೆಯನ್ನು ನೆರವೇರಿಸಿದರು.
ಈ ರಸ್ತೆಗಳಿಗೆ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ 35 ಲಕ್ಷ ರೂ. ಬಿಡುಗಡೆಯಾಗಿದೆ. ಉಚಗಾಂವ ಗ್ರಾಮದಲ್ಲಿ ಲಕ್ಷ್ಮಣ ಹಣಬರ ಮನೆಯಿಂದ ನಾರಾಯಣ ಮೇತ್ರಿ ಮನೆಯವರೆಗೆ ರಸ್ತೆ ಮತ್ತು ಚರಂಡಿ ನಿರ್ಮಾಣ, ಸಾಯಿ ನಗರದ ಮುಖ್ಯ ರಸ್ತೆಯಿಂದ ದುರ್ಗಪ್ಪ ಕಾಂಬಳೆ ಮನೆಯವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ, ಅಂಬೇಡ್ಕರ್ ಗಲ್ಲಿಯಲ್ಲಿ ಪೇವರ್ಸ್ ಅಳವಡಿಕೆ, ನಾಗೇಶ ನಗರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮೊದಲಾದ ಕಾಮಗಾರಿಗಳು ನಡೆಯಲಿವೆ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವರಾಜ ಕದಂ, ಜಾವೇದ್ ಇನಾಮದಾರ್, ಬಾಲಕೃಷ್ಣ ತೇರ್ಸರ್, ಬಂಟಿ ಪಾವಸೆ, ಆರ್ ಡಿ ಚೌಗುಲೆ, ಯಾದವ್ ಕಾಂಬಳೆ, ಭಾರತಿ ಜಾಧವ್, ರೂಪಾ ಗೊಂಧಳಿ, ಅಂಬ್ರಿನ್ ಬಂಕಾಪೂರೆ, ಅನಸೂಯಾ ಕೋಲಕಾರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಬೆನಕನಹಳ್ಳಿ ಗ್ರಾಮದ ಆಶ್ರಯ ಕಾಲೋನಿಯ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಕಾಮಗಾರಿಗಳಿಗೆ ಸಹ ಬುಧವಾರ ಚಾಲನೆ ನೀಡಲಾಯಿತು.ಲಕ್ಷ್ಮಿ ಹೆಬ್ಬಾಳಕರ್ ಅವರ ಶಾಸಕರ ಅನುದಾನದಲ್ಲಿ ನೂತನ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವ ಸಲುವಾಗಿ 13 ಲಕ್ಷ ರೂ,ಗಳು ಮಂಜೂರಾಗಿದ್ದು, ಸ್ಥಳೀಯ ಜನಪ್ರತಿನಿಧಿಗಳು, ದಲಿತ ಮುಖಂಡ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಮಹೇಶ ಕೋಲಕಾರ, ಎ.ಪಿ.ಎಂ.ಸಿ ಅಧ್ಯಕ್ಷ ಯುವರಾಜ ಕದಂ, ಮೃಣಾಲ ಹೆಬ್ಬಾಳಕರ್ ಸೇರಿ ಭೂಮಿ ಪೂಜೆಯನ್ನು ನೆರವೇರಿಸಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಕಲ್ಲಪ್ಪ ದೇಸೂರಕರ್, ಭರ್ಮಾ ಕೋಲಕಾರ, ಮೀನಾಕ್ಷಿ ಪಾಟೀಲ, ಕಲಾವತಿ ದೇಸೂರಕರ್, ಶಿಲ್ಪಾ ಮುಂಗ್ಲೆಕರ್, ದತ್ತಾ ಸುತಾರ, ಸಿದ್ದರಾಯಿ ಕಾಂಬಳೆ, ಶಶಿಕಲಾ ಲಿಪ್ಪಾಣಿಕರ್, ಬಾರ್ತಾ ನಾಗಣ್ಣವರ ಹಾಗೂ ಆಶ್ರಯ ಕಾಲೋನಿಯ ನಿವಾಸಿಗಳು ಉಪಸ್ಥಿತರಿದ್ದರು.