ಎಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮಿ ಮಾಸೇಕರ ಅವರು 2018 /19 ಸಾಲಿನ 14ನೇ ಹಣಕಾಸಿನ 54,29,743 ಒಟ್ಟು 29 ಕಾಮಗಾರಿಗಳ ನಕಲಿ ದಾಖಲಾತಿ ಸೃಷ್ಟಿ ಮಾಡಿ ಹಣ ಲಪಟಾಯಿಸುತ್ತಿದ್ದಾರೆ ಎಂದು ಆರೋಪಿಸಿ ಬೆಳಗಾವಿ ನಗರದ ಖಾಸಗಿ ಹೋಟೆಲ್ ನಗರದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರಮೋದ್ ಪಾಟೀಲ್ ಅವರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ಯಳ್ಳೂರು ಗ್ರಾಮ ಪಂಚಾಯತಿಯಲ್ಲಿ ನಡೆಯುತ್ತಿರುವ ಅಕ್ರಮದ ಕುರಿತು ಮಾಹಿತಿ ನೀಡಿದರು.
ಯಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿಷಯವನ್ನು ಆಧಾರವಾಗಿಟ್ಟು ಲೋಕಾಯುಕ್ತರಿಗೆ ದೂರು ನೀಡಲಾಗಿದೆ ಅಧ್ಯಕ್ಷರಾದ ಲಕ್ಷ್ಮಿ ಮಾಶೇಕರ್ 10/10/2023 ಸಾಮಾನ್ಯ ಸಭೆಯಲ್ಲಿ 2018 -19 ರ ಸಾಲಿನಲ್ಲಿ ನಡೆದಿರುವ ಕಾಮಗಾರಿ ಬಿಲ್ ಭರಿಸುವ ಕುರಿತು ಠರಾವ್ ಪಾಸ್ ಮಾಡಲಾಗಿತ್ತು.
ಇತರ ಒಂಬತ್ತು ಜನ ಸದಸ್ಯರುಗಳು ವಿರೋಧ ಮಾಡಿದ್ದರು ಎಲ್ಲಾ ಪ್ರಕರಣಗಳಿಗೆ 9 ಜನ ಸದಸ್ಯರುಗಳು ಸತತವಾಗಿ ವಿರೋಧ ವ್ಯಕ್ತಪಡಿಸುತ್ತಾ ಬಂದರೂ ಕೂಡ ಅಧ್ಯಕ್ಷರು ವಿರೋಧವನ್ನು ಕಡೆಗಣಿಸುತ್ತಾ ಬಂದಿದ್ದಾರೆ.
ಇದರ ಜೊತೆಗೆ ಉಪಾಧ್ಯಕ್ಷರಾದ ಸುಭಾಷ್ ಪಾಟೀಲ್ ಸಚಿನ್ ಪಾಟೀಲ್ ಹಾಗೂ ಸದಸ್ಯರುಗಳು ಲೋಕಾಯುಕ್ತ ಗೆ ದೂರು ನೀಡಲು ನಿರ್ಣಯಿಸಿ ದಿನಾಂಕ 29/10/2024 ದೂರು ನೀಡಿದ್ದಾರೆ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತಿಗಳು ಗ್ರಾಮ ಪಂಚಾಯತಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಿ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆಂದು ಗ್ರಾಮ ಪಂಚಾಯತ್ ಸದಸ್ಯರುಗಳು ಆರೋಪ ಮಾಡಿದ್ದಾರೆ.
ಪ್ರಮೋದ್ ಪಾಟೀಲ್ ಉಪಾಧ್ಯಕ್ಷ ,ಸತೀಶ್ ಪಾಟೀಲ್, ರಮೇಶ್ ಮೆನಸೇ, ಜ್ಯೋತಿಬಾ ಚೌಗಲೆ, ಪರಶುರಾಮ್ ಪರೇಡ್, ಶಿವಾಜಿ ಸೋನಾಲಿಕರ್, ಮನಿಷಾ ಗಾಡಿ ,ಶಾಲಾಂಗ್ ಪಾಟೀಲ್ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು