spot_img
spot_img
spot_img
21.3 C
Belagavi
Sunday, October 1, 2023
spot_img

ನನಗೆ ಪುನರ್ಜನ್ಮ ನೀಡಿದ ಗ್ರಾಮೀಣ ಕ್ಷೇತ್ರವನ್ನು ಎಂದಿಗೂ ಮರೆಯಲಾರೆ – ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಏರಿದರೂ ನಮ್ಮ ಮೂಲ ಬೇರನ್ನು ಮರೆಯಬಾರದು. ಹಾಗಾಗಿ ನಾನು ನನಗೆ ರಾಜಕೀಯವಾಗಿ ಮರುಜನ್ಮ ನೀಡಿದ ಗ್ರಾಮೀಣ ಕ್ಷೇತ್ರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಭಿವೃದ್ಧಿ ವಿಷಯದಲ್ಲೂ ನನ್ನ ಮೊದಲ ಆದ್ಯತೆ ಗ್ರಾಮೀಣ ವಿಧಾನಸಭಾ ಕ್ಷೇತ್ರವೇ ಆಗಿದೆ ಎಂದು ರಾಜ್ಯ ಮಹಿಳಾ ಮತ್ತ ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಗ್ರಾಮದ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ ದೇವಸ್ಥಾನದ 9 ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಜಾತ್ರಾ‌ ಮಹೋತ್ಸವದಲ್ಲಿ ಸೋಮವಾರ ಪಾಲ್ಗೊಂಡು ಅವರು ಮಾತನಾಡಿದರು. ಕ್ಷೇತ್ರದ ಮೇಲಿನ ನನ್ನ ಪ್ರೀತಿ ಮತ್ತು ನನ್ನ ಮೇಲಿನ ಕ್ಷೇತ್ರದ ಜನರ ಪ್ರೀತಿ ಎರಡನ್ನೂ ಲೆಕ್ಕ ಹಾಕಲು ಸಾಧ್ಯವಿಲ್ಲ. ಹಾಗಾಗಿ ಇಡೀ ರಾಜ್ಯದ ಜವಾಬ್ದಾರಿ ನನ್ನ ಮೇಲಿದ್ದರೂ ಗ್ರಾಮೀಣ ಕ್ಷೇತ್ರದ ಮೇಲಿನ ತುಡಿತ ನಿರಂತರವಾಗಿರುತ್ತದೆ ಎಂದು ಹೆಬ್ಬಾಳಕರ್ ತಿಳಿಸಿದರು.

ಈ ಸಮಯದಲ್ಲಿ ಗ್ರಾಮದ ಹಿರಿಯರು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಚಂಬಣ್ಣ ನಾವಲಗಿ, ಸ್ಮಿತಾ ಪಾಟೀಲ, ಪುಷ್ಪ ದೊಡನಾಯ್ಕರ್, ಗೌರವ್ವ ಬ ಪಾಟೀಲ, ಮೀರಾ ನದಾಫ್, ಸಿ ಸಿ ಪಾಟೀಲ, ಅಡಿವೇಶ ಇಟಗಿ, ಸ್ವಾತಿ ಇಟಗಿ, ಶ್ರೀಕಾಂತ್ ಮಾದುಭರಮಣ್ಣವರ, ಚಂದ್ರಪ್ಪ ನಾವಲಗಿ ಮುಂತಾದವರು ಉಪಸ್ಥಿತರಿದ್ದರು.

Related News

ಸರಕಾರದ ಜೊತೆ ಎಲ್ಲ ಸಮಾಜದವರೂ ಇದ್ದಾರೆ – ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಸಮುದಾಯದ ಬೆಂಬಲ ಸಿಕ್ಕಿದೆ. ಕೇವಲ ಒಂದು ಸಮುದಾಯದ ಬೆಂಬಲದಿಂದ ಅಧಿಕಾರಕ್ಕೇರಿಲ್ಲ. ಎಲ್ಲಾ ಸಮಾಜದವರೂ ಸರಕಾರದೊಂದಿಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್...

ನಿಮ್ಮ ಆಸ್ತಿಗಳ ಮೌಲ್ಯಗಳನ್ನು ಅಪಮೌಲ್ಯ ಮಾಡಬೇಡಿ ನೈಜ್ಯ ಬೆಲೆಗೆ ವ್ಯವಹಾರ ಮಾಡಿ

ಬೆಳಗಾವಿ: ಕರ್ನಾಟಕ ರಾಜ್ಯ ಸರ್ಕಾರ ಸ್ಥಿರ ಆಸ್ತಿಗಳು ಮಾರ್ಗಸೂಚಿ ಬೆಲೆ ಪರಿಷ್ಕರಣೆ ಅಕ್ಟೋಬರ್ ಒಂದರಿಂದ ಶೆ. 10%ರಿಂದ 30%ವರೆಗೆ ಹೆಚ್ಚಳ ಮಾಡುವುದಾಗಿ ಆದೇಶ ಹೊರಡಿಸಿದೆ. ಅದರ ಅಂಗವಾಗಿ ಬೆಳಗಾವಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -