spot_img
spot_img
spot_img
spot_img
spot_img
30.1 C
Belagavi
Sunday, December 3, 2023
spot_img

ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಗೋಶಾಲೆ ಆರಂಭಿಸಿದ್ದೇ ಲಕ್ಷ್ಮೀ ಹೆಬ್ಬಾಳಕರ್ – ಶಿವಾನಂದ ಗುರೂಜಿ

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ರಾಜಕೀಯ ವ್ಯಕ್ತಿಯಲ್ಲ, ಸಾಮಾಜಿಕ ವ್ಯಕ್ತಿ, ಸದಾ ಸಾಮಾಜಿಕ ಕಳಕಳಿ ಮಾಡುವವರು. ಸಮಾಜಕ್ಕಾಗಿಯೇ ನಿರಂತರ ಕೆಲಸ ಮಾಡುವವರು. ಕಳೆದ 75 ವರ್ಷದಲ್ಲಿ ಆಗದ ಕೆಲಸವನ್ನು ಕ್ಷೇತ್ರದಲ್ಲಿ 5 ವರ್ಷದಲ್ಲಿ ಮಾಡಿ ತೋರಿಸಿದ್ದಾರೆ ಎಂದು ನಿಲಜಿಯ ಅಲೌಕಿಕ ಧ್ಯಾನಾಶ್ರಮದ ಶಿವಾನಂದ ಗುರೂಜಿ ಹೇಳಿದ್ದಾರೆ.

ಶುಕ್ರವಾರ ಆಶ್ರಮಕ್ಕೆ ಭೇಟಿ ನೀಡಿದ್ದ ಸಚಿವರನ್ನು ಸತ್ಕರಿಸಿ ಗುರೂಜಿ ಆಶಿರ್ವಚನ ನೀಡಿದರು. ಬೆಳಗಾವಿ ಜಿಲ್ಲೆಯಲ್ಲಿ ಒಂದೂ ಗೋಶಾಲೆ ಇಲ್ಲದಿದ್ದ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರು ಮೊದಲ ಬಾರಿಗೆ ಗೋಶಾಲೆಗೆ ಅನುದಾನ ಕೋಟ್ಟರು. ಇದರಿಂದ ಇಲ್ಲಿ ಮೊದಲ ಗೋಶಾಲೆ ಆರಂಭವಾಯಿತು. ಈ ಆಶ್ರಮದ ಬೆಳವಣಿಗೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಶಾಸಕರಲ್ಲದ ಸಂದರ್ಭದಲ್ಲೂ ಆಶ್ರಮಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಗುರೂಜಿ ಪ್ರಶಂಸಿಸಿದರು.

ನಮ್ಮ ಗುರುಗಳು ಈ ಆಶ್ರಮಯ ಉದ್ಘಾಟನೆ ವೇಳೆ ಇಲ್ಲಿಗೆ ಬಂದಿದ್ದ ಸಂದರ್ಭದಲ್ಲಿ ಕರ್ನಾಟಕದ ಭಾವಿ ಮುಖ್ಯಮಂತ್ರಿ ಲಕ್ಷ್ಮೀ ಹೆಬ್ಬಾಳಕರ್ ಎಂದು ಹೇಳಿದ್ದರು. ಇಂದು ಮಂತ್ರಿಯಾಗಿದ್ದಾರೆ. ಅವರು ಮುಖ್ಯಮಂತ್ರಿ ಯಾಕಾಗಬಾರದು? ಅವರಿಗೆ ಗುರು ಆಶಿರ್ವಾದವಾಗಿದೆ ಎಂದು ಅವರು ಪ್ರಶ್ನಿಸಿದರು.

ಸದಾ ನಾನು ನಿಮ್ಮ ಮನೆ ಮಗಳು ಎನ್ನುತ್ತಾರೆ. ನಮ್ಮ ಮನೆ ಮಗಳು ಮಂತ್ರಿಯಾಗಿದ್ದರಿಂದ ನಾವೆಲ್ಲ ಸಂತೋಷ ಪಡಬೇಕು. ರಾಜಕೀಯ ವ್ಯಕ್ತಿಯಾದರೂ ಅವರಲ್ಲಿ ತುಂಬಿರುವ ಭಕ್ತಿಗೆ ನಾವು ತಲೆಭಾಗಬೇಕು. ಈ ಆಶ್ರಮದಲ್ಲಿ ಏನೇ ಆದರೂ ಅವರಿಂದಲೇ ಆಗುತ್ತದೆ. ಈ ಆಶ್ರಮ ಅವರದ್ದೇ, ಇಲ್ಲಿನ ಎಲ್ಲ ಬೆಳವಣಿಗೆಗಳೂ ಅವರಿಗೇ ಸಲ್ಲಬೇಕು ಎಂದು ಗುರೂಜಿ ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಯುವರಾಜ ಕದಂ, ಬಸನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಆಶ್ರಮದ ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು.

Related News

ತೆಲಂಗಾಣದಲ್ಲಿ ನಾವೆಲ್ಲರೂ ಒಗ್ಗೂಡಿ ಪಕ್ಷವನ್ನು ಗೆಲ್ಲಿಸಿದ್ದೇವೆ -ಜಮೀರ್ ಅಹ್ಮದ್ ಖಾನ್

ತೆಲಂಗಾಣದಲ್ಲಿ ನಾವೆಲ್ಲರೂ ಒಗ್ಗೂಡಿ ಪಕ್ಷವನ್ನು ಗೆಲ್ಲಿಸಿದ್ದೇವೆ. ತೆಲಂಗಾಣದಲ್ಲಿ ಕಾಂಗ್ರೆಸ್​ಗೆ ಜನರು ಆಶೀರ್ವಾದ ಮಾಡಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. 70ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಸಿದ್ದರಾಮಯ್ಯ, ಡಿಕೆ & ನಾನು ಟೀಂ...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಪನ್ನು ಒಪ್ಪಲೇಬೇಕು -ಎಂ.ಬಿ.ಪಾಟೀಲ್

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಪನ್ನು ಒಪ್ಪಲೇಬೇಕು. ಗ್ಯಾರಂಟಿಗೆ ವಿರೋಧ ಮಾಡಿದವರು ಗ್ಯಾರಂಟಿ ಘೋಷಣೆ ಮಾಡಿದರು ಎಂದು ವಿಜಯಪುರದಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ನಾವು ಗೆಲ್ಲುವ ವಿಶ್ವಾಸ ಇದೆ....

Latest News

- Advertisement -
- Advertisement -
- Advertisement -
- Advertisement -