spot_img
spot_img
spot_img
spot_img
spot_img
spot_img
spot_img
spot_img
spot_img
20.4 C
Belagavi
Sunday, September 24, 2023
spot_img

ಗ್ರಾಮೀಣ ಕ್ಷೇತ್ರದ ಇತಿಹಾಸದಲ್ಲೇ ದಾಖಲೆಯ ಅನುದಾನ ತಂದಿದ್ದೇನೆ : ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಇತಿಹಾಸದಲ್ಲೇ ದಾಖಲೆಯ ಪ್ರಮಾಣದಲ್ಲಿ ಅನುದಾನ ತಂದಿರುವ ಸಮಾಧಾನ ನನಗಿದೆ. ಹಾಗಂತ ನನಗಿನ್ನೂ ಸಂಪೂರ್ಣ ತೃಪ್ತಿ ಇಲ್ಲ. ಇನ್ನಷ್ಟು ಅಭಿವೃದ್ಧಿಪರ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾವಗಾಂವ ಗ್ರಾಮದ ರಸ್ತೆಗಳ ಹಾಗೂ ಒಳಚರಂಡಿಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ 2.5 ಕೋಟಿ ರೂ,ಗಳನ್ನು ಮಂಜೂರು ಮಾಡಿಸಿರುವ ಲಕ್ಷ್ಮೀ ಹೆಬ್ಬಾಳಕರ್, ಶುಕ್ರವಾರ ಕಾಂಕ್ರೀಟ್ ರಸ್ತೆಗಳ ಹಾಗೂ ಒಳಚರಂಡಿಗಳ ಕಾಮಗಾರಿಗಳಿಗೆ ಪೂಜೆ ನೆರವೇರಿಸಿದರು.

ಜನರಿಗೆ ತುರ್ತು ಅಗತ್ಯದ ಕೆಲಸಗಳನ್ನು ಮಾಡಿಸಿದ್ದೇನೆ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಮಾಡಿದ್ದೇನೆ. ಆರೋಗ್ಯ ಕ್ಷೇತ್ರದಲ್ಲಿ ಒಂದಿಷ್ಟು ಕೆಲಸಗಳನ್ನು ಮಾಡಿಸಿದ್ದೇನೆ. ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸಗಳಾಗಿವೆ. ನೀರಾವರಿ ಯೋಜನೆಗಳು ಬಂದಿವೆ. ಆದರೆ ಇವಿಷ್ಟರಿಂದಲೇ ನಾನು ತೃಪ್ತಿಪಡುವವಳಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ದೊಡ್ಡ ಯೋಜನೆಗಳನ್ನು ತರುವ, ಯುವಕರಿಗೆ ಉದ್ದೋಗ ಸೃಷ್ಟಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದೇನೆ. ಮುಂದಿನ ದಿನಗಳಲ್ಲಿ ಅವನ್ನೆಲ್ಲ ಕ್ಷೇತ್ರದ ಜನರು ಕಾಣಲು ಸಾಧ್ಯ ಎಂದು ಹೆಬ್ಬಾಳಕರ್ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಎನ್ ಕೆ ಪಾಟೀಲ, ಸಂತೋಷ ಪಾಟೀಲ, ಬಾಳು ಪಾಟೀಲ, ಮಾಯಪ್ಪ ಗಾಟೆಗಸ್ತಿ, ಗಣಪತ ಕಾಕತ್ಕರ್, ನೇತಾಜಿ ಮುಂಗಾಳೆ, ಕೃಷ್ಣ ಮುಂಗಾಳೆ, ಸಂಗೀತಾ ಬಾನೇಕರ್, ಗೀತಾ ಸಾವಗಾಂವ್ಕರ್, ಪುಷ್ಪ ಕಾಂಬಳೆ, ಕಲ್ಲಪ್ಪ ಪಾಟೀಲ, ಪರಶುರಾಮ ಅಕ್ನೊಜಿ, ನಂದಾ ಕಾಕತ್ಕರ್, ಭುಜಂಗ ಕೊರಜ್ಕರ್, ಯಲ್ಲಪ್ಪ ಪಾಟೀಲ, ಪರಶುರಾಮ ಪಾಟೀಲ, ವಸಂತ ಕಾಂಬಳೆ, ಮಲ್ಲಪ್ಪ ಸಾವಗಾಂವ್ಕರ್, ಶ್ರೀಕಾಂತ ಬಾನೇಕರ್, ದತ್ತ ಕಾಕತ್ಕರ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Related News

ರೈತರ ಹೋರಾಟಕ್ಕೆ ಸಾಂಕೇತಿಕವಾಗಿ ಬೆಂಬಲ ಸೂಚಿಸಲು ಹೊರಟಿದ್ದೇನೆ -ಹೆಚ್​ಡಿಕೆ

ಬೆಂಗಳೂರಿಗೆ ಆಗಮಿಸಿದ ಹೆಚ್​ಡಿ ಕುಮಾರಸ್ವಾಮಿ ಅವರು ಕೇಂಪೇಗೌಡ ಏರ್ಪೋರ್ಟ್ ನಲ್ಲಿ ಮಾತನಾಡಿದರು. ಈ ವೇಳೆ, ಅಮಿತ್ ಷಾ ಹಾಗೂ ನಡ್ಡಾ ಜೊತೆ ನಡೆದ ಚರ್ಚೆಗಳ ಬಗ್ಗೆ ದೆಹಲಿಯಲ್ಲಿ ಹೇಳಿದ್ದೇನೆ. ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ...

9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ

ಬೆಂಗಳೂರು: 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. 9ನೇ ತರಗತಿ ಮಕ್ಕಳ ಕಲಿಕಾ ದೃಷ್ಟಿಯಿಂದ ಮಕ್ಕಳಿಗೆ ಸಂಕಲನಾತ್ಮಕ ಮೌಲ್ಯಮಾಪನ ಪರೀಕ್ಷೆ ನಡೆಸಲು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -