Ad imageAd image

ಲಕ್ಷ್ಮಿ ಹೆಬ್ಬಾಳ್ಕರ್, ಸಿಟಿ ರವಿ ಗಲಾಟೆ ಪ್ರಕರಣ – ಸಿಐಡಿ ಮುಂದೆ ಸಾಕ್ಷ್ಯ ನುಡಿದ ಎಂಎಲ್‌ಸಿ ಉಮಾಶ್ರೀ

ratnakar
ಲಕ್ಷ್ಮಿ ಹೆಬ್ಬಾಳ್ಕರ್, ಸಿಟಿ ರವಿ ಗಲಾಟೆ ಪ್ರಕರಣ – ಸಿಐಡಿ ಮುಂದೆ ಸಾಕ್ಷ್ಯ ನುಡಿದ ಎಂಎಲ್‌ಸಿ ಉಮಾಶ್ರೀ
WhatsApp Group Join Now
Telegram Group Join Now

ಬೆಂಗಳೂರು: ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸಿ.ಟಿ ರವಿ ಮಧ್ಯೆ ಬೆಳಗಾವಿ ಅಧಿವೇಶನದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಮುಂದೆ ಎಂಎಲ್‌ಸಿ ಉಮಾಶ್ರೀ ಸಾಕ್ಷ್ಯ ನುಡಿದಿದ್ದಾರೆ.

ಗಲಾಟೆ ಸಂದರ್ಭದಲ್ಲಿ ಉಮಾಶ್ರೀ ಸದನದ ಒಳಗೆ ಇದ್ದರು. ಹೀಗಾಗಿ ಇಂದು (ಜ.16) ಉಮಾಶ್ರೀ ಸಿಐಡಿ ಮುಂದೆ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯಗೆ  ಸಿಐಡಿ ನೋಟಿಸ್ ನೀಡಲಾಗಿದೆ. ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ  ನಡೆದ ಗಲಾಟೆ ಸಂದರ್ಭದಲ್ಲಿ ಸದನದ ಒಳಗೆ ಯತೀಂದ್ರ ಸಿದ್ದರಾಮಯ್ಯ ಇದ್ದರು ಅನ್ನೋ ಕಾರಣಕ್ಕೆ ನೋಟಿಸ್ ನೀಡಲಾಗಿದೆ.

ಸಿಐಡಿ (CID) ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ತಿಳಿಸಿದ್ದಾರೆ. ಇನ್ನೂ ಯತೀಂದ್ರ ಅವರ ಜೊತೆಗೆ ಎಂಎಲ್‌ಸಿ ಡಿಬಿ ಶ್ರೀನಿವಾಸ್ ಅವರು ಇದ್ದ ಕಾರಣಕ್ಕಾಗಿ ಅವರಿಗೂ ಕೂಡ ನೋಟಿಸ್ ನೀಡಿ, ಶುಕ್ರವಾರ (ಜ.17) ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ

 

WhatsApp Group Join Now
Telegram Group Join Now
Share This Article