ಬೆಳಗಾವಿ – ಶ್ರಾವಣ ಮಾಸದ ಪ್ರಯುಕ್ತ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಕುಟುಂಬ ಸಮೇತ ಭಾನುವಾರ ಚಿಕ್ಕಹಟ್ಟಿಹೊಳಿಯ ಮನೆಯ ಆರಾಧ್ಯದೈವ ಶ್ರೀ ವೀರಭದ್ರೇಶ್ವರ ದೇವರ ಸನ್ನಿಧಿಗೆ ತೆರಳಿ ದರ್ಶನ ಪಡೆದರು.
ಇದೇ ವೇಳೆ ಕುಟುಂಬದಿಂದ ಮಹಾ ಪ್ರಸಾದದ ಸೇವೆಯನ್ನು ಕೈಗೊಂಡು ಸಹಸ್ರಾರು ಭಕ್ತಾಧಿಗಳಿಗೆ ಶಾಸಕರಿಬ್ಬರೂ ಪ್ರಸಾದವನ್ನು ಉಣಬಡಿಸಿದರು. ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮೃಣಾಲ ಹೆಬ್ಬಾಳಕರ್ ಮತ್ತು ಕುಟುಂಬದ ಎಲ್ಲ ಸದಸ್ಯರು ಭಾಗವಹಿಸಿದ್ದರು.