ಬೆಳಗಾವಿ: ಪ್ರಸ್ತುತ ಸಮಯದಲ್ಲಿ ನಮ್ಮ ಮಕ್ಕಳಿಗೆ ಜೀವನ ಪಾಠದ ಕೊರತೆ ಉಂಟಾಗಿದ್ದು, ಜೀವನ ಪಾಠಕ್ಕೊಸ್ಕರ ಚಿಕ್ಕಮಕ್ಕಳಿಗೆ ಅಂಗನವಾಡಿಯಿಂದಲೇ ಒಳ್ಳೆಯ ಸಂಸ್ಕಾರವನ್ನು ಕೊಡುವಂತಾಗಬೇಕು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ದೇಸೂರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರದ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುವಂತೆ ನಮ್ಮ ಮಕ್ಕಳನ್ನು ಬಾಲ್ಯದಿಂದಲೇ ಮಾನಸಿಕವಾಗಿ ಹಾಗೂ ಶೈಕ್ಷಣಿಕವಾಗಿ ಬೆಳೆಸುವ ಕಾಯಕವನ್ನು ಇವತ್ತು ಎಲ್ಲ ಪೋಷಕರು ರೂಢಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಗ್ರಾಮದ ಹಿರಿಯರು, ಜಿ.ಕೆ. ಪಾಟೀಲ, ವೆಂಕಟ ಪಾಟೀಲ, ಸಂತೋಷ ಮರಗಾಳಿ, ಭರಮಣಿ ಪಾಟೀಲ, ಸಾತೇರಿ ಕಳಸೇಕರ್, ಯಲ್ಲಪ್ಪ ಸಾವಂತ ಮನೋಜ ಸಾವಂತ, ಅನಿಲ ಪಾಟೀಲ, ಭುಜಂಗ ಗುರವ, ಅಂಗನವಾಡಿಯ ಸಿಬ್ಬಂದಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.