ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ HD ದೇವೇಗೌಡ ಹಾಗೂ HD ಕುಮಾರಸ್ವಾಮಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ನಾನು ಅಲ್ಪಸಂಖ್ಯಾತರೇ ಅಲ್ಲ, ಎಲ್ಲ ಸಮುದಾಯಗಳ ರಕ್ಷಣೆ ಮಾಡುತ್ತೇವೆ. ಬಿಜೆಪಿ ಬಿ ಟೀಮ್ ಅಂತ ಹೇಳ್ತಾ ಇದ್ದಾರೆ ಮಹಾ ನಾಯಕರು.
2018 ರಲ್ಲಿ ಸಿದ್ದರಾಮಯ್ಯ, ಖರ್ಗೆ,ಡಿಕೆಶಿ, ಪರಮೇಶ್ವರ್ ಇದ್ರು. ನಮ್ಮ ಪಕ್ಷಕ್ಕೆ ನನ್ನ ಮಗನಿಗೆ ಸಿಎಂ ಸ್ಥಾನ ಬೇಡ ಅಂತ ದೇವೇಗೌಡರು ಹೇಳಿದ್ರು. ಕಾಂಗ್ರೆಸ್ ಕೇಂದ್ರ ನಾಯಕರು ಇಲ್ಲ ಕುಮಾರಸ್ವಾಮಿ ಸಿಎಂ ಆಗಬೇಕು ಅಂದ್ರು. ಅವತ್ತೆ ಮಧ್ಯಾಹ್ನ 2 ಗಂಟೆಗೆ ಅಮಿತ್ ಶಾ ಕಾಲ್ ಮಾಡಿದ್ರು. ಅವತ್ತೆ ನಾನು ಒಪ್ಪಿದ್ರೆ ಐದು ವರ್ಷಗಳ ಸಿಎಂ ಆಗ್ತಾ ಇದ್ದೆ ಎಂದು ಹೇಳಿದ್ದಾರೆ.