ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಸಾರ್ವಜನಿಕರನ್ನು ನಿಭಾಯಿಸಿ ಉತ್ತಮ ಸೇವೆ ಸಲ್ಲಿಸಿದ ಹಿರೇಬಾಗೇವಾಡಿಯ ಪೋಲಿಸ್ ಸಿಬ್ಬಂದಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೋಲಿಸರ ಸೇವೆ ಶ್ಲಾಗಣೀಯ ಶ್ರೀ ಯುವಶಕ್ತಿ ಗಜಾನನ ಯುವಕ ಸಂಘದ ಯುವಕರು ಕುಕಡೊಳ್ಳಿಯಲ್ಲಿ ನಡೆದ ಗಣೇಶೋತ್ಸವದ ಅದ್ಧೂರಿ ಸಂಭ್ರಮದಲ್ಲಿ ಜನದಟ್ಟಣೆಯನ್ನು ನಿಭಾಯಿಸಿ ಸ್ಥಳೀಯ ಪೋಲಿಸ ಇಲಾಖೆಯ ಸೇವೆ ಮರೆಯುವಂತಿಲ್ಲ.
ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಹಿರೇಬಾಗೇವಾಡಿಯ ಪೋಲಿಸ ಠಾಣೆಯ ಹತ್ತಾರು ಸಿಬ್ಬಂದಿಗಳ ಜೊತೆಗೆ ಗ್ರಾಮಸ್ಥರು ಸಹ ಕೈ ಜೋಡಿಸಿ ಸಹಕರಿಸಿದರು, ಇದೇ ಸಂದರ್ಭದಲ್ಲಿ ಮಲ್ಲೇಶ ಸಾರಾವರಿ, ಪಕ್ಕೀರ ವಡ್ಡಿನ, ಪರಶುರಾಮ ವಡ್ಡಿನ, ವಿಠ್ಠಲ ವಡ್ಡಿನ, ನಾಗರಾಜ ಸಾರಾವರಿ, ಅನಿಲ ವಡ್ಡಿನ, ಸುಭಾಸ ಸಾರಾವರಿ, ವಿಠ್ಠಲ ಹೊಸುರ ಸೇರಿದಂತೆ ಯುವಶಕ್ತಿ ಗಜಾನನ ಯುವಕ ಸಂಘದ ಯುವಕರು ಪಾಲ್ಗೊಂಡಿದ್ದರು..