ಬೆಳಗಾವಿ : ಖಾತಾ ವರ್ಗಾವಣೆಗೆ 5 ಲಕ್ಷ ರೂ. ಹಣ ಬೇಡಿಕೆಯಿಟ್ಟಿದ್ದ ತಹಶಿಲ್ದಾರರ ಹಾಗೂ ಕಚೇರಿ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ ಘಟನೆ ತಡರಾತ್ರಿ ನಡೆದಿದೆ.
ಜಿಲ್ಲೆಯ ಚನ್ನಮ್ಮ ಕಿತ್ತೂರು ತಹಶಿಲ್ದಾರ್ ಸೋಮಲಿಂಗಪ್ಪ ಹಾಲಗಿ ಹಾಗೂ ನೌಕರ ಪ್ರಸನ್ನ ಜಿ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ.
ದೂರುದಾರ ರಾಜೇಂದ್ರ ಇನಾಂದಾರ ಅವರ ತಂದೆ ಹೆಸರಿನಲ್ಲಿದ್ದ 10 ಎಕರೆ ಭೂಮಿಯನ್ನು ರಾಜೇಂದ್ರ ಹೆಸರಿಗೆ ವರ್ಗಾಯಿಸಲು 5 ಲಕ್ಷ ರೂ ಹಣದ ಬೇಡಿಕೆಯಿಟ್ಟದ್ದರು. ಮೊದಲ ಹಂತದಲ್ಲಿ ಎರಡು ಲಕ್ಷ ರೂಪಾಯಿ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಲಂಚದ ಹಣ ಅಧಿಕಾರಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.