ಕಾರವಾರ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಭಟ್ಕಳದ ಮುರುಡೇಶ್ವರದಲ್ಲಿ ಹಮ್ಮಿಕೊಂಡಿದ್ದಾರೆ.
ಸಭೆಗೂ ಮುನ್ನ ಡಿ.ಕೆ ಶಿವಕುಮಾರ್ ವಿರುದ್ಧ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿ ಕುಕ್ಕರ್ , ಮಂಗಳೂರು ಕುಕ್ಕರ್ ಒಂದೇ ಎಂದುಕೊಂಡಿದ್ದಾರೆ. ಬೆಳಗಾವಿ ಕುಕ್ಕರ್ ಒಡೆದರೆ ಕೇವಲ ಕುಟುಂಬ ಒಡೆಯುತ್ತೆ ಎಂದರು.
ಮಂಗಳೂರು ಕುಕ್ಕರ್ ಒಡೆದರೆ ದೇಶ ಒಡೆಯುತ್ತೆ ಅಂತಾ ಗೊತ್ತಿಲ್ಲ. ದೇಶ ವಿರೋಧಿಗಳ ಬೆಂಬಲಕ್ಕೆ ಡಿ.ಕೆ ಶಿವಕುಮಾರ್ ನಿಲ್ಲುತ್ತಾರೆ. ಅದಕ್ಕಾಗಿಯೇ ಕಾಂಗ್ರೆಸ್ ಭಯೋತ್ಪಾದಕ ಪಾರ್ಟಿಯಾಗಿದೆ ಎಂದು ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.