spot_img
spot_img
spot_img
spot_img
spot_img
spot_img
spot_img
spot_img
spot_img
21 C
Belagavi
Wednesday, September 27, 2023
spot_img

ಮೈನೆವರೇಳಿಸಿದ ಕಂಸಾಳೆ ನೃತ್ಯ ಪ್ರದರ್ಶನ

ಬಾಗಲಕೋಟೆ: ಧಕ್ಷಿಣ ಕರ್ನಾಟಕದ ಪ್ರಮುಖ ಜಾನಪದ ಕಲೆಗಳಲ್ಲಿ ಒಂದಾದ ಕಂಸಾಳೆ ಭಕ್ತಿ ನೃತ್ಯವನ್ನು ಬೆಂಗಳೂರು ಬಿಡದಿಯ ಬಸವೇಶ್ವರ ಕಲಾ ಮಹಾವಿದ್ಯಾಲಯದ ವಿಧ್ಯಾರ್ಥಿನಿಯರಿಂದ ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಪ್ರದರ್ಶನ  ಮಾಡಲಾಯಿತು.

ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯಗಳ ಸಹಯೋಗದಲ್ಲಿ ನೃತ್ಯ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಹಾಡುತ್ತ ಭಾವಾವೇಶದಿಂದ ನೃತ್ಯಮಾಡುವ ಮಲೆ ಮಾದೇಶ್ವರನನ್ನು ಆರಾಧಿಸುವ ಮತ್ತು ಪೂಜಿಸೂವ ಜಾನಪದ ಕಲೆ ಇದಾಗಿದ್ದು ವಿದ್ಯಾರ್ಥಿನೀಯರು ನೃತ್ಯ ಪ್ರದರ್ಶನ ಮಾಡಿದರು.

ಈ ವೇಳೆ ಬಿಡದಿ ಬಸವೇಶ್ವರ ಪದವಿ ಕಾಲೇಜಿನ ನಿರ್ದೇಶಕರಾದ ಡಾ. ವ್ಹಿ ಎಸ್ ಕಟಗಿಹಳ್ಳಿಮಠ ಅವರು ಮಾತನಾಡಿ ಚಾಮರಾಜ ನಗರ ಜಿಲ್ಲೆಯ ಧಾರ್ಮಿಕ ಕುಣಿತ ಇದಾಗಿದೆ. 15 ನೇ ಶತಮಾನದಲ್ಲಿ ಮಹಾದೇಶ್ವರ ಎನ್ನುವವರು ಕಂಸಾಳೆ ನೃತ್ಯದ ಮೂಲಕ ಭಗವಂತನನ್ನು ವಲಿಸಿಕೊಳ್ಳುತ್ತಾನೆ. ಅಂದಿನಿಂದ ಕಂಸಾಳೆ ಧ್ವನಿಯಲ್ಲಿ ಶಿವನು ನೆಲಸಿದ್ದಾನೆ ಎಂಬ ಭಾವನೆಯಲ್ಲಿ ನೃತ್ಯ ಮಾಡಲಾಗುತ್ತದೆ.  ಇದು ಓಂಕಾರದ ನಿನಾದದ ಒಂದು ಭಾಗವಾಗಿದ್ದು ಆ ಭಾಗದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಈ ಭಾಗದಲ್ಲಿ ಕಲೆಯನ್ನು ಪರಿಚಯಿಸುವ ುದ್ದೇಶದಿಂದ ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ನೃತ್ಯ ಪ್ರದರ್ಶನದಲ್ಲಿ ವಿದ್ಯಾರ್ಥಿನಿಯರುಗಳಾದ ಸೌಂದರ್ಯ. ಶಿಂಧು, ಹರ್ಷಿತಾ, ಸೃಜನಾ, ಅಮೃತಾ, ಅನುಶಾ, ಪೂರ್ಣಿಮಾ ಮತ್ತು ಮಾನಸಾ ಹೆಜ್ಜೆ ಹಾಕಿದರು. ಮೈಸೂರು ಗಂಗುಬಾಯಿ ಹಾನಗಲ್ ವಿವಿ ಪ್ರಾದ್ಯಾಪಕರಾದ ವಿಶ್ವನಾಥ ನೃತ್ಯ ನಿರ್ಧೇಶನ ಮಾಡಿದರು. ವ್ಯಸ್ತಾಪಕ ನಿರ್ದೇಶಕರಾಗಿ ಪ್ರಾದ್ಯಾಪಕ ಪ್ರಶಾಂತ ಬಡಿಗೇರ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಬಿವಿವಿ ಸಂಘದ ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಮಹಾಂತೇಶ ಶೆಟ್ಟರ, ಪ್ರಾಚಾರ್ಯರುಗಳಾದ ಎಸ್.ಜೆ ಒಡೆಯರ್, ಡಾ.ಎಸ್.ಎಮ್ ಗಾಂವಕರ್, ಡಾ. ಜೆ.ಬಿ ಚವ್ಹಾಣ ಸೇರಿದಂತೆ ವಿವಿಧ ಕಾಲೇಜುಗಳು ಪ್ರಾದ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಾಚಾರ್ಯರಾದ ಎಸ್.ಆರ್ ಮುಗನೂರಮಠ ವಂದಿಸಿದರು.

Related News

ಕೆಳಮಟ್ಟದಲ್ಲಿ ನೋಡುತ್ತಿದ್ದ ಖಾತೆಯನ್ನು ಈಗ ವಿಶ್ವವೇ ನೋಡುವಂತಾಗಿದೆ – ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಣ್ಣ ಖಾತೆಯಲ್ಲ. ಈ ಮೊದಲು ಇದನ್ನು ಕೆಳಮಟ್ಟದಲ್ಲಿ ನೋಡಲಾಗುತ್ತಿತ್ತು. ಈಗ ವಿಶ್ವವೇ ನೋಡುವಂತಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರು...

ಜಲಜೀವನ್ ಮಿಷನ್ ಯೋಜನೆಗೆ ಚನ್ನರಾಜ ಹಟ್ಟಿಹೊಳಿ ಚಾಲನೆ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಸ್ತವಾಡ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಇವತ್ತು ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗಳಿಗೆ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಚಾಲನೆಯನ್ನು‌ ನೀಡಿದರು. ತಂದನಂತರ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -