ಅಥಣಿ : ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ, ಸೂರಿಲ್ಲದೆ ಸಂತ್ರಸ್ತರ ಗೋಳಾಟ ನೋಡಲಾಗದೆ ಇಂದು ನೆರೆ ಸಂತ್ರಸ್ತರ ಕುಟುಂಬಗಳಿಗೆೆ ಭೇಟಿ ಮಾಡಿದ ಅಥಣಿ ಕಾಂಗ್ರೆಸ್ ಮುಖಂಡ ಸಂತ್ರಸ್ತರ ಜೊತೆ ಸಮಾಲೋಚನೆ ನಡೆಸಿದರು.
ಹೌದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡರಹಟ್ಟಿ ಗ್ರಾಮದಲ್ಲಿ ವಾಸವಿರುವ ಪಿ ಕೆ ನಾಗನೂರ ನೆರೆ ಸಂತ್ರಸ್ತರನ್ನು ಭೇಟಿ ಮಾಡಿ, ಮುಖಂಡ ಗಜಾನನ ಮಂಗಸೂಳಿ, ಅಗತ್ಯ ಆಹಾರದ ದಿನಸಿ ವಿತರಿಸಿ ನಿಮಗೆ ಶಾಶ್ವತವಾದ ನೆಲೆ ಸಿಗುವವರಿಗೆ ನಾವು ಹೋರಾಟ ಮಾಡುತ್ತೆವೆ, ನಿಮ್ಮ ಜೊತೆ ನಾನು ಯಾವತ್ತೂ ಇರುತ್ತೆನೇ ಹೆದರಬೇಡಿ ಎಂದು ಅಭಯವಿತ್ತರು.
ಅನಂತರ ಮಾಧ್ಯಮದವರ ಜೊತೆ ಮಾತನಾಡಿದ ಮುಖಂಡ ಗಜಾನನ ಮಂಗಸೂಳಿ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ನೆರೆ ಸಂತ್ರಸ್ತರ ವಿಚಾರದಲಿ ತುಟಿ ಬಿಚ್ಚುತ್ತಿಲ್ಲ ,ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹುಟ್ಟೂರಿನ ನೆರೆ ಸಂತ್ರಸ್ತರಿಗೆ ಅನ್ಯಾಯವಾಗಿದೆ ಈಗಾಗಲೇ ನಾವು ನೆರೆ ಸಂತ್ರಸ್ತರಿಗೆ ಪರಿಹಾರಕ್ಕೆ ಭಿಕ್ಷಾಟನೆ ಮಾಡಿ ಪ್ರತಿಭಟನೆಯನ್ನು ಸಹ ಮಾಡಿದಿದ್ದೇವೆ.
ಈ ವಿಷಯ ಕುರಿತು ಕಳೆದ ನಾಲ್ಕು ವರ್ಷದಿಂದ ನಾವು ನಿರಂತರ ಪ್ರತಿಭಟನೆ ಮಾಡುತ್ತಿದ್ದೇವೆ. ದಪ್ಪ ಚರ್ಮದ ಅಧಿಕಾರಿಗಳು, ಜನಪ್ರತಿನಿಧಿಗಳು ಇವರ ಕಷ್ಟವನ್ನು ಆಲಿಸುತ್ತಿಲ್ಲ, ಚಳಿಗಾಲದ ಬೆಳಗಾವಿ ಅಧಿವೇಶನದಲ್ಲಿ ನೆರೆ ಸಂತ್ರಸ್ತರ ಜೊತೆ ಸೇರಿ ನಮ್ಮ ಪಕ್ಷದಿಂದ ಉಗ್ರವಾಗಿ ಪ್ರತಿಭಟನೆ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸುನೀಲ ಸಂಕ, ಸತ್ತೇಪ್ಪಾ ಬಾಗೇನ್ನವರ, ಬಸು ಬೂಟಾಳಿ, ಶಿವು ಗುಡ್ಡಾಪೂರ,ರೇಖಾ ಪಾಟೀಲ, ಉಮರ ಸಯ್ಯದ, ಸಯ್ಯದ ಗಡ್ದೆಕರ್, ಶಂಕರ ಮಗದುಮ, ರವಿ ಬಕಾರಿ, ಬಾಬಣ್ಣ ಸಾರವಾಡ, ಮಲ್ಲು ನಡುವಿನಮನಿ, ನೇಮಿನಾಥ ಎಕಸಂಬಿ, ಅಪ್ಪುಗೌಡ ಪಾಟೀಲ, ಸಚೀನ ನಾಯಿಕ, ಸಂಗಮೇಶ ಖೋತ, ಲಕ್ಷ್ಮಣ ಚಿಕ್ಕರೆಡ್ಡಿ, ಶ್ರೀಶೈಲ ಖೋತ, ಬಸಪ್ಪ ಕೊಳಗೇರಿ, ಮಲ್ಲು ಹುಲಸದಾರ, ಭೋಸಲೆ, ವೆಂಕಟೇಶ ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು.