ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸರಳ ಬಹುಮತ ಹೊಂದಿರುವ ಭಾರತೀಯ ಜನತಾ ಪಕ್ಷದ ಸ್ಥಾಯಿ ಸಮಿತಿಯ ಸಲುವಾಗಿ ಕಾಂಗ್ರೆಸ್ ಹಾಗೂ ಪಕ್ಷೇತರ ಮಹಾನಗರ ಪಾಲಿಕೆ ಸದಸ್ಯರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು 4 ಸ್ಥಾಯಿ ಸಮಿತಿಗಳಿಗೆ ಅವಿರೋಧವಾಗಿ ಸದಸ್ಯರ ಆಯ್ಕೆ ಮಾಡಲು ಹೊಂದಾಣಿಕೆ ಮಾಡಿಕೊಂಡಿತು.
ಒಟ್ಟು 28 ಸದಸ್ಯರಗಳನ್ನು ಆಯ್ಕೆ ಮಾಡಲಾಯಿತು. ಬೆಳಗಾವಿ ಪಾಲಿಕೆ ಭಾರತೀಯ ಜನತಾ ಪಕ್ಷ ಕಾಂಗ್ರೆಸ್ ಹಾಗೂ ಪಕ್ಷೇತರರ ಸದಸ್ಯರುಗಳಿಗೆ ಸ್ಥಾನ ನೀಡಲು ತೆರೆಯ ಮರೆಯಲ್ಲಿ ಚರ್ಚೆ ಪ್ರಾರಂಭ ಮಾಡಿದ್ದರು. ಕಾಂಗ್ರೆಸ್ ಪಕ್ಷದಿಂದ ಆಡಳಿತರೂಢ ಪಕ್ಷಕ್ಕೆ ಪಾಲಿಕೆ ಸುಲಲಿತವಾಗಿ ನಡೆಸಿಕೊಂಡು ಹೋಗಲು ಹಾಗೂ ಸರ್ವ ಭಾಷೆ ಸದಸ್ಯರುಗಳಿಗೆ ಸ್ಥಾನ ಕಲ್ಪಿಸಿಕೊಡಲು ಕಾಂಗ್ರೆಸ್ ತಂತ್ರಗಾರಿಕೆಯಾಗಿತ್ತು.
ಆ ನಿಟ್ಟಿನಲ್ಲಿ ಕಾಂಗ್ರೆಸ್ ಐದು ಹಾಗೂ ಮೂರು ಸದಸ್ಯತ್ವ ಬೇಡಿಕೆಯನ್ನು ಮುಂದಿಟ್ಟಿತ್ತು ಈ ಪ್ರಸ್ತಾವಣೆಗೆ ಭಾರತೀಯ ಜನತಾ ಪಕ್ಷದ ಬೆಳಗಾವಿ ಮಹಾನಗರ ಅಧ್ಯಕ್ಷರಾದ ಅನಿಲ ಬೆನಕೆ ಹಾಗೂ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಸಿ ಕಾಂಗ್ರೆಸ್ ಹಾಗೂ ಪಕ್ಷೇತರ ಬೇಡಿಕೆಯನ್ನು ಪರಿಶೀಲಿಸಿ ನಾಲ್ಕು ಸ್ಥಾಯಿ ಸಮಿತಿಗಳಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಐದು ಹಾಗೂ ಕಾಂಗ್ರೆಸ್ ಹಾಗೂ ಪಕ್ಷೇತರರಿಗೆ ಎರಡು ಸ್ಥಾನ ನೀಡಲು ಒಪ್ಪಿಗೆ ಸೂಚಿಸಿದರು. ಈ ಹೊಂದಾಣಿಕೆಯಿಂದಾಗಿ ಸ್ಥಾಯಿ ಸಮಿತಿಯ 28 ಸದಸ್ಯರುಗಳು ಆಯ್ಕೆಯಾದರು.
ಜಿಲ್ಲಾಧಿಕಾರಿಗಳ ನಿತೀಶ್ ಪಾಟೀಲ್ ನೇತೃತ್ವದಲ್ಲಿ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಸದರಾದ ಮಂಗಳ ಅಂಗಡಿ ಅಣಸಾಹೇಬ್ ಜೊಲ್ಲೆ, ಶಾಸಕ ಅಭಯ್ ಪಾಟೀಲ್ ಉಪಸ್ಥಿತರಿದ್ದರು. ಆಯ್ಕೆಯಾದ ಸ್ಥಾಯಿ ಸಮಿತಿಗಳ ಸದಸ್ಯರಗಳು ನಗರ ಯೋಜನಾ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ, ವಾಣಿ ವಿಲಾಸ್ ಜೋಶಿ, ಆನಂದ್ ಚವ್ಹಾಣ, ಮಂಗೇಶ್ ಪವಾರ, ಸಂತೋಷ್ ಪೇಡನೇಕರ, ರೂಪ ಚಿಕ್ಕಲದಿನ್ನಿ, ಜರೀನಾ ಫತ್ತೇಖಾನ, ಶಕೀಲಾ ಮುಲ್ಲಾ, ಲೆಕ್ಕ ಸ್ಥಾಯಿ ಸಮಿತಿಗೆ ಸವಿತಾ ಮುರುಗೇಂದ್ರ ಗೌಡ ಪಾಟೀಲ್, ಗಿರೀಶ್ ದೊಂಗಡಿ, ಅಭಿಜಿತ್ ಜವಳಕರ್, ಜಯತೀರ್ಥ ವೆಂಕಟೇಶ್ ಸವದತ್ತಿ , ಪೂಜಾ ಇಂದ್ರಜಿತ್ ಪಾಟೀಲ್, ಜ್ಯೋತಿ, ರಾಜು ಕಡೂಲ್ಕರ್ ಅಪ್ರೋಜ ಶಕೀಲ್ ಮುಲ್ಲಾ, ಆರೋಗ್ಯ ಮತ್ತು ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯಸ್ಥಾಯಿ ಸಮಿತಿಗೆ ರವಿಕೃಷ್ಣ ಧೋತ್ರ, ರಮೇಶ್ ಶ್ರೀಕಾಂತ್ ಮೈಲಗೋಳ್ ಕಾಮಕರ, ರೇಷ್ಮಾ ಬಸವರಾಜ್, ಶ್ರೇಯಸ ಸೋಮಶೇಖರ್ ನಾಕಾಡಿ,ಜಯಂತ್ ಜಾದವ್, ಕಖುಷಿ೯ದ ದಾದಾಪೀರ ಮುಲ್ಲಾ, ತೆರೆಗೆ ನಿರ್ವಹನ ,ಹಣಕಾಸು ಹಾಗೂ ಅಪೀಲಗಳ ಸ್ಥಾಯಿ ಸಮಿತಿಗಳಿಗೆ ವೀಣಾ ಶ್ರೀಶೈಲ್ ಬಿಜಾಪುರ ,ರೇಖಾ ಮೋಹನ್ ಹೂಗಾರ ,ಉದಯ್ ಕುಮಾರ್ ವಿಠ್ಠಲ್ ಉಪಾರಿ, ಸಂದೀಪ್ ಅಶೋಕ್ ಬೀರಗ್ಯಾಳ, ವಿನಾಯಕ್ ಕಾಮಕರ, ಪ್ರೀತಿ ರೇಶ್ಮಾ ಪರ್ವೇಜ್ ಬೈರಕದಾರ ಶ್ಯಾಮೋಬಿನ ಸಲೀಮ ಖಾನ,ಪಠಾಣ,