Ad imageAd image

JOB Alert: ಪೊಲೀಸ್‌ ಇಲಾಖೆಯ 2400 KSRP ಕಾನ್ಸ್‌ಟೇಬಲ್‌ ನೇಮಕಕ್ಕೆ ಸರ್ಕಾರ ಆದೇಶ

ratnakar
JOB Alert: ಪೊಲೀಸ್‌ ಇಲಾಖೆಯ 2400 KSRP ಕಾನ್ಸ್‌ಟೇಬಲ್‌ ನೇಮಕಕ್ಕೆ ಸರ್ಕಾರ ಆದೇಶ
WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಸರ್ಕಾರವು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದ ರಾಜ್ಯದ ನಿರುದ್ಯೋಗಿ ಹಾಗೂ ಪೊಲೀಸ್‌ ಇಲಾಖೆ ಉದ್ಯೋಗ ಆಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌ ಅನ್ನು ಇದೀಗ ನೀಡಿದೆ. ಬರೋಬರಿ 2400 ಕೆಎಸ್‌ಆರ್‌ಪಿ ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಕ್ಕೆ ಪೊಲೀಸ್‌ ಇಲಾಖೆಗೆ ಆದೇಶ ನೀಡಿದೆ.

ಪೊಲೀಸ್‌ ಇಲಾಖೆಯ ಸಶಸ್ತ್ರ ಮೀಸಲು ಪಡೆಯಲ್ಲಿ 2 ಹೊಸ ಬೆಟಾಲಿಯನ್ ಪ್ರಾರಂಭಕ್ಕೆ ರಾಜ್ಯ ಸರ್ಕಾರದ ಹಸಿರು ನಿಶಾನೆ ನೀಡಿದ್ದು, ದೇವನಹಳ್ಳಿ ಬಳಿ 100 ಎಕರೆ, ಕೆಜಿಎಫ್ ಬಳಿ 50 ಎಕರೆ ಸ್ಥಳವನ್ನು ಸಹ ಗುರುತಿಸಿ ಮೀಸಲಿಡಲಾಗಿದೆ ಎಂದು ಎಡಿಜಿಪಿ ಉಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಸಶಸ್ತ್ರ ಮೀಸಲು ಪಡೆ (ಕೆಎಸ್ ಆರ್ ಪಿ)ಯಲ್ಲಿ ಹೊಸದಾಗಿ 2400 ಪೊಲೀಸ್‌ ಸಿಬ್ಬಂದಿಗಳ 2 ಬೆಟಾಲಿಯನ್‌ಗಳ ಆರಂಭಕ್ಕೆ ಅಧಿಕೃತವಾಗಿ ಶುಕ್ರವಾರ ಸರ್ಕಾರ ಸಿಹಿ ಸುದ್ದಿ ನೀಡಿ ಆದೇಶಿಸಿದೆ.

ಕೆಎಸ್ಆ‌ಪಿ ಪಡೆಯಲ್ಲಿ ಇಂಡಿಯನ್ ಬೆಟಾಲಿಯನ್‌ಗಳನ್ನು (ಐಆರ್‌ಬಿ) ಪ್ರಾರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಕೆಎಸ್‌ಆರ್‌ಪಿ ವಿಭಾಗದ ಎಡಿಜಿಪಿ ಉಮೇಶ್ ಕುಮಾರ್‌ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಗೆ ಸರ್ಕಾರವು ಗ್ರೀನ್‌ ಸಿಗ್ನಲ್ ನೀಡಿದೆ. ಪ್ರಸ್ತುತ 12 ಕೆಎಸ್‌ಆರ್‌ಪಿ ಹಾಗೂ 2 ಐಆರ್‌ಬಿ ಬೆಟಾಲಿಯನ್‌ಗಳಿವೆ. ಆದರೆ ರಾಜ್ಯದಲ್ಲಿ ಭದ್ರತೆ ಹಾಗೂ ಪ್ರಾಕೃತಿಕ ವಿಪತ್ತು ಸೇರಿದಂತೆ ತುರ್ತು ಸಂದರ್ಭಗಳನ್ನು ನಿಭಾಯಿಸಲು ಮತ್ತಷ್ಟು ಬೆಟಾಲಿಯನ್ ಗಳ ಅಗತ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಹೊಸ ಬೆಟಾಲಿಯನ್‌ಗಳನ್ನು ಸಿದ್ಧತೆಗೆ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಸಮ್ಮತಿಸಿ ರಾಜ್ಯ ಪತ್ರ ಬರೆದಿದೆ ಎಂದು ಎಡಿಜಿಪಿ ಉಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಈ ಬೆಟಾಲಿಯನ್‌ಗಳಿಗೆ ಗುರುತಿಸಲಾದ ಸ್ಥಳಗಳಲ್ಲಿ ತರಬೇತಿ ಹಾಗೂ ವಸತಿ ಸೇರಿ ಇತರೆ ಸೌಲಭ್ಯಗಳನ್ನು ಸಿಬ್ಬಂದಿಗಳಿಗೆ ಕಲ್ಪಿಸಲಾಗುತ್ತದೆ. ತಲಾ ಬೆಟಾಲಿಯನ್‌ನಲ್ಲಿ ಓರ್ವ ಕಮಾಂಡೆಂಟ್ ಸೇರಿ 1200 ಪೊಲೀಸರಂತೆ ಒಟ್ಟು 2400 ಪೊಲೀಸರ ನೇಮಕಾತಿಗೆ ಸಹ ಸರ್ಕಾರವು ಒಪ್ಪಿಗೆ ಸೂಚಿಸಿದೆ. ಈ ಆದೇಶ ಹಿನ್ನೆಲೆಯಲ್ಲಿ ಹೊಸ ಬೆಟಾಲಿಯನ್‌ಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಇಲಾಖೆ ಶುರುಮಾಡಲಿದ್ದು, ಸರ್ಕಾರಿ ಸೇವೆ ಸೇರಲು ಕನಸು ಕಂಡಿರುವ ಉದ್ಯೋಗಾಕಾಂಕ್ಷಿಗಳು ಬೇಕಾದ ಸಿದ್ಧತೆ ಮಾಡಿಕೊಳ್ಳಬಹುದು.

ಪ್ರಸ್ತುತ ಸರ್ಕಾರ ನೇಮಕಕ್ಕೆ ಆದೇಶ ನೀಡಿದ್ದು, ಈ ಹುದ್ದೆಗಳಿಗೆ ಮೀಸಲಾತಿ, ವೃಂದ, ನಿಯಮಗಳು ಎಲ್ಲವುಗಳ ಕುರಿತ ಕರಡು ಅಧಿಸೂಚನೆ ಸಿದ್ಧಪಡಿಸಬೇಕಾಗುತ್ತದೆ. ನಂತರ ಅದಕ್ಕೆ ಆಕ್ಷೇಪಣೆ ಸ್ವೀಕರಿಸಿ ಅಂತಿಮ ಅಧಿಸೂಚನೆ ಬಿಡುಗಡೆ ಮಾಡುವ ಮೂಲಕ ಅರ್ಜಿ ಸ್ವೀಕಾರ ಆರಂಭಿಸಲಾಗುತ್ತದೆ. ಈ ಪ್ರಕ್ರಿಯೆಗೆ ಹೇಗೆ ಇದ್ದರೂ ಸಹ 1-2 ತಿಂಗಳ ಕಾಲಾವಕಾಶ ಬೇಕಾಗುತ್ತದೆ.

WhatsApp Group Join Now
Telegram Group Join Now
Share This Article