Ad imageAd image

ಮಂಡ್ಯ ನಗರಸಭೆ ಚುನಾವಣೆ: ಕಾಂಗ್ರೆಸ್ ಸದಸ್ಯನ ಬೆಂಬಲದಿಂದ ಜೆಡಿಎಸ್​ಗೆ ಗೆಲವು

ratnakar
ಮಂಡ್ಯ ನಗರಸಭೆ ಚುನಾವಣೆ: ಕಾಂಗ್ರೆಸ್ ಸದಸ್ಯನ ಬೆಂಬಲದಿಂದ ಜೆಡಿಎಸ್​ಗೆ ಗೆಲವು
WhatsApp Group Join Now
Telegram Group Join Now

ಮಂಡ್ಯ: ಲೋಕಸಭೆ ಚುನಾವಣೆ ಬಳಿಕ ಮಂಡ್ಯ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಪ್ರತಿಷ್ಠೆಯ ಕಣವಾಯ್ತು. ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆಲವು ಸಾಧಿಸಿದೆ. ನಗರಸಭೆ ಆವರಣದ ಮುಂಭಾಗ ಜೆಡಿಎಸ್ ಕಾರ್ಯಕರ್ತರ ಸಂಭ್ರಮಾಚರಿಸಿದರು. ನಗರಸಭೆ ಅಧ್ಯಕ್ಷರಾಗಿ ಜೆಡಿಎಸ್​ನ ಜೆಡಿಎಸ್ ನಾಗೇಶ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿಜೆಪಿಯ ಅರುಣ್ ಕುಮಾರ್ ಆಯ್ಕೆಯಾಗಿದ್ದಾರೆ.

ಮಂಡ್ಯ ನಗರಸಭೆಗೆ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಇಂದು (ಆ.28) ನಡೆಯಿತು. 15 ಸದಸ್ಯರು, ಬಿಜೆಪಿಯ ಇಬ್ಬರು, ಕಾಂಗ್ರೆಸ್​ನ ಒಬ್ಬ ಮತ್ತು ಸಂಸದ ಹೆಚ್​ಡಿ ಕುಮಾರಸ್ವಾಮಿ ಅವರ ಮತ ಸೇರಿ 19 ಮತಗಳು ಜೆಡಿಎಸ್​​ಗೆ ಬಂದಿವೆ. 35 ಸದಸ್ಯರ ಬಲ ಹೊಂದಿರುವ ಮಂಡ್ಯ ನಗರಸಭೆಯಲ್ಲಿ ಒಟ್ಟು 18 ಜನ ಜೆಡಿಎಸ್‌ ಸದಸ್ಯರಿದ್ದಾರೆ. ಬಿಜೆಪಿಯ ಇಬ್ಬರು, ಕಾಂಗ್ರೆಸ್‌ನ 10 ಮತ್ತು ಪಕ್ಷೇತರ 5 ಸದಸ್ಯರಿದ್ದಾರೆ. 9 ಸದಸ್ಯರು, ಪಕ್ಷೇತರ 5, ಜೆಡಿಎಸ್‌ನ 3 ಮತ್ತು ಶಾಸಕನ 1 ಮತ ಸೇರಿ ಕಾಂಗ್ರೆಸ್​ಗೆ ಒಟ್ಟು 18 ಮತಗಳು ಬಂದಿವೆ.

 

WhatsApp Group Join Now
Telegram Group Join Now
Share This Article